
ಗಣೇಶೋತ್ಸವವು ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸುವ ಸನಾತನ ಧರ್ಮದ ಸಮಾನತೆಯ ಸಂಕೇತ: ಸುಂದರ ಬಿ. ಶೆಟ್ಟಿ ವಾಮದಪದವು
ಮುಂಬಯಿ: ಸಾಂತಾಕ್ರೂಜ್ ಪೂರ್ವದ ಕಲೀನಾ ಪೊಲೀಸ್ ಚೌಕಿ ಎದುರುಗಡೆ ಸೌತ್ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಜರುಗಿತು.
ಸೆಪ್ಟೆಂಬರ್ 14ರಂದು ಬೆಳಗ್ಗೆ ಪೋವಾಯಿಯ ರಘುಚಂದ್ರ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಗಣಹೋಮ, ಗಣಪತಿ ಪ್ರತಿಷ್ಠಾಪನೆ, ಮಹಾಪೂಜೆ, ಗಣೇಶ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ 4 ಗಂಟೆಗೆ ಸೌತ್ ಸೇವಾ ಸಂಘದ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಗವತಿ ದೇವಸ್ಥಾನ ಕಲೀನಾ ತಂಡದ ಸದಸ್ಯರೂ ಭಾಗವಹಿಸಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನೆರವೇರಿತು. ವಿಕ್ರೋಲಿಯ ಮಹಾಮಾಯಿ ಭಜನಾ ಮಂಡಳಿ, ಸಾಂತಾಕ್ರೂಜ್ನ ಬಿಲ್ಲವರ ಅಸೋಸಿಯೇಷನ್, ಮುಂಬೈನ ದೇವಾಡಿಗ ಸಂಘ ಹಾಗೂ ಮೀರಾ ರೋಡ್ನ ಬಿಲ್ಲವರ ಅಸೋಸಿಯೇಷನ್ನ ಮಹಿಳಾ ಸದಸ್ಯರ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.
ಸೆಪ್ಟೆಂಬರ್ 17ರಂದು ರಘುಚಂದ್ರ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಸುಂದರ ಬಿ. ಶೆಟ್ಟಿ ವಾಮದಪದವು ಮಾತನಾಡಿ, “15ನೇ ವರ್ಷದ ಗಣೇಶೋತ್ಸವವು ಜಾತಿ, ಮತ ಮತ್ತು ರಾಜಕೀಯ ಭೇದಭಾವವಿಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸುವ ಸನಾತನ ಧರ್ಮದ ಸಮಾನತೆಯ ಸಂಕೇತವಾಗಿದೆ. ಗಣೇಶೋತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಯುವಜನರನ್ನು ಒಗ್ಗೂಡಿಸುವ ಮತ್ತು ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಅತ್ಯುತ್ತಮ ಮಾಧ್ಯಮ. ಇಂತಹ ಹಬ್ಬಗಳು ನಮ್ಮ ಸಾಂಸ್ಕೃತಿಕ ಪ್ರಜ್ಞೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ನೆರವಾಗುತ್ತವೆ” ಎಂದರು.
ಸಭೆಯಲ್ಲಿ ಕಲೀನಾ ವಿಧಾನಸಭಾ ಕ್ಷೇತ್ರದ ಕುರ್ಲಾ ಪೂರ್ವದ ನಗರಸೇವಕ ನಿತೇಶ್ ಸಿಂಗ್, ಕಲೀನಾ ನಿತ್ಯಾನಂದ ಹೋಟೆಲ್ ಮಾಲೀಕ ಪ್ರಕಾಶ್ ಶೆಟ್ಟಿ, ಮುಂಬಯಿ ಆಹಾರ್ ಅಧ್ಯಕ್ಷ ಹಾಗೂ ವಿಜಯ ಹೋಟೆಲ್ ಮಾಲೀಕ ವಿಜಯ ಶೆಟ್ಟಿ, ಮುಂಬಯಿ ಆಹಾರ್ ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಇನ್ನಾ ಉಕುಡ, ಕಲೀನಾ ಟೂ ಸ್ಟಾರ್ ಹೋಟೆಲ್ನ ಅರವಿಂದ್ ಎನ್. ಶೆಟ್ಟಿ, ಚುನ್ನಾಭಟ್ಟಿಯ ಮುಂಬೈ ಫ್ರೆಂಡ್ಸ್ ಅಸೋಸಿಯೇಷನ್ ಸಂಚಾಲಕ ಹಾಗೂ ಕವಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದು ಮೋರೆ, ಕಲೀನಾ ವಿಧಾನಸಭಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಬೀನಾ ದಿವೇಕರ್, ಉಪಾಧ್ಯಕ್ಷೆ ಗೌರಿ ದೋತ್ರೆ, ಕಲೀನಾ ಭಾಗೀರಥಿ ಹೋಟೆಲ್ ಮಾಲೀಕ ಕೃಷ್ಣ ಎನ್. ಶೆಟ್ಟಿ, ಆಲ್ ಕಾರ್ಗೋ ಕಲೀನಾದ ಉದಯ ಶೆಟ್ಟಿ, ಕುರ್ಲಾ ಜನತಾ ಹೋಟೆಲ್ನ ಶಿವಾಜಿ ಶೆಟ್ಟಿ, ಬಿ.ಆರ್. ರೈ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ಉದ್ಯಮಿ ಬೊಳ್ಳಿಲುಮಾರು ಗುತ್ತು ಸತೀಶ್ ಶೆಟ್ಟಿ ಕಲೀನಾ ಮಾತನಾಡಿ, ಗಣೇಶೋತ್ಸವವು ನಮ್ಮ ಧರ್ಮ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ಚಿತ್ರೇಶ್ ಶೆಟ್ಟಿ ಪಾಂಗಾಳ ಸ್ವಾಗತಿಸಿ, ಐದು ದಿನಗಳ ಕಾಲ ನಡೆದ ಗಣೇಶೋತ್ಸವವು ಸರ್ವರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಚಂದ್ರಹಾಸ ಕೋಟ್ಯಾನ್ ಕಲೀನಾ, ಶಶಿಧರ್ ಶೆಟ್ಟಿ ನಿಟ್ಟೆ ಕಲೀನಾ ಹಾಗೂ ಉದಯ ಕೋಟೇಶ್ವರ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ಉಳೆಪಾಡಿ, ಮಂಜುನಾಥ್ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಬಂಗೇರ ನಕ್ರೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬಬಿತಾ ಗಣೇಶ್ ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಶೇಖರ್ ಶೆಟ್ಟಿ ವಾಮದಪದವು, ಗಣೇಶ್ ಸುವರ್ಣ ಬಡಗಬೆಟ್ಟು, ಶೇಖರ್ ಆರ್. ಸಾಲ್ಯಾನ್, ಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಜೊತೆ ಕೋಶಾಧಿಕಾರಿಗಳಾದ ಮಂಗೇಶ್ ನಾಯಕ್, ಅವಿನಾಶ್ ಅಮೀನ್ ಹಾಗೂ ಸಲಹೆಗಾರರು, ಸದಸ್ಯರು ಉತ್ಸವದ ಯಶಸ್ಸಿಗೆ ಶ್ರಮಿಸಿದರು.
ವಿಜಯ ಕೆ. ಶೆಟ್ಟಿ ಸಿದ್ದಕಟ್ಟೆ, ಶೀನಾ ಎಸ್. ಅಮೀನ್, ಸದಾನಂದ ಪೂಜಾರಿ, ಲಿಂಗಪ್ಪ ಅಮೀನ್, ರಾಮಚಂದ್ರ ಸುವರ್ಣ, ತಕ್ಷಿಲ್ ಗೋಪಾಲ ಶೆಟ್ಟಿ, ಅಮರ್ ಎಸ್. ಶೆಟ್ಟಿ ಹೆರಿಂಜೆ, ಪ್ರಸಾದ್ ಶೆಟ್ಟಿ, ಶಾಶ್ವತ್ ಎಸ್. ಶೆಟ್ಟಿ, ಶ್ರುತಿ ಸುವರ್ಣ, ನಿಕಿತಾ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಬಿತಾ ಸುವರ್ಣ, ಭಾರತಿ ಸಾಲ್ಯಾನ್, ಅಶ್ವಿನಿ ಎಸ್. ಶೆಟ್ಟಿ, ರಂಜಿನಿ ಎಸ್. ಬಂಗೇರ, ಪ್ರೇಮಾ ಕೋಟ್ಯಾನ್, ಹೇಮಲತಾ ದೇವಾಡಿಗ, ಲಕ್ಷ್ಮೀ ಸಾಲ್ಯಾನ್, ಶ್ರೇಯಾ ಎಸ್. ಶೆಟ್ಟಿ, ವಿಜಯಾ ಎಸ್. ಶೆಟ್ಟಿ, ಕುಮಾರಿ ಪುಣ್ಯ, ಶ್ರುತಿ ಸುವರ್ಣ, ಆರಾಧ್ಯ ಎಸ್. ಬಂಗೇರ, ನೀನಾ ಪ್ರಕಾಶ್ ಸಹಕರಿಸಿದರು.
ಕಾರ್ಯದರ್ಶಿ ಸಂದೀಪ್ ಬಂಗೇರ ನಕ್ರೆ ಕಾರ್ಯಕ್ರಮ ನಿರೂಪಿಸಿದರು. ಉದಯ ಕೋಟೇಶ್ವರ ವಂದಿಸಿದರು.
ಸೆಪ್ಟೆಂಬರ್ 18ರಂದು ಸಂಜೆ ಉತ್ಸವ ಸ್ಥಳದಿಂದ ಕೇರಳ ಚೆಂಡೆ ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಿತು. ಬಳಿಕ ಕಲೀನಾ ಕೆರೆಯಲ್ಲಿ (ತಲಾವ್) ಗಣೇಶ ವಿಗ್ರಹದ ಜಲಸ್ತಂಭನ (ವಿಸರ್ಜನೆ) ನೆರವೇರಿಸುವ ಮೂಲಕ ಐದು ದಿನಗಳ ಸಾರ್ವಜನಿಕ ಗಣೇಶೋತ್ಸವ ಸಂಪನ್ನಗೊಂಡಿತು.



