November 15, 2026
Mumbai News Kannada
ತುಳುನಾಡು

ಜೇಸಿಐ ಕಾಪು ಘಟಕದ ಜೇಸಿ ಸಪ್ತಾಹ ‘ಸಂಚಲನ’ಕ್ಕೆ ರಾಷ್ಟ್ರೀಯ ಮನ್ನಣೆ: ವಲಯ 15ರ ಏಕೈಕ ಘಟಕವಾಗಿ ಹೆಗ್ಗಳಿಕೆ





















ಕಾಪು: ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಯುವ ಸಮುದಾಯದ ನಾಯಕತ್ವ ವಿಕಸನಕ್ಕೆ ಹೆಸರಾಗಿರುವ ಜೇಸಿಐ ಸಂಸ್ಥೆಯ ನಿರ್ದೇಶನದಂತೆ, ಜೇಸಿಐ ಕಾಪು ಘಟಕವು ಆಯೋಜಿಸಿದ 2026ನೇ ಸಾಲಿನ ಜೇಸಿ ಸಪ್ತಾಹ ‘ಸಂಚಲನ’ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರತಿಷ್ಠಿತ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.

ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಆರ್‌ಪಿಪಿ ಭರತ್ ಎನ್. ಆಚಾರ್ಯ ಅವರ ನೇತೃತ್ವದಲ್ಲಿ ದೇಶಾದ್ಯಂತ ‘ದಿ 777 ಜೇಸಿಐ ವೀಕ್’ (The 777 JCI Week) ಅಭಿಯಾನದಡಿ ಜೇಸಿ ಸಪ್ತಾಹವನ್ನು ಆಯೋಜಿಸಲಾಗಿತ್ತು. ಕೇಂದ್ರ ಸಮಿತಿಯು ನಿಗದಿಪಡಿಸಿದ್ದ ‘ಏಳು ದಿನಗಳಿಗೆ ಏಳು ಪ್ರಮುಖ ಕಾರ್ಯಕ್ರಮಗಳು’ ಎಂಬ ಕಾರ್ಯಸೂಚಿಯನ್ನು ಕಾಪು ಘಟಕವು ಅತ್ಯಂತ ಯಶಸ್ವಿಯಾಗಿ, ಶಿಸ್ತುಬದ್ಧವಾಗಿ ಮತ್ತು ವಿಜೃಂಭಣೆಯಿಂದ ಅನುಷ್ಠಾನಗೊಳಿಸಿದೆ.



















ಕಾಪು ಘಟಕವು ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಬದ್ಧತೆಯ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದಲ್ಲದೆ, ವಲಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲೂ ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಗಳಿಸಿವೆ. ಜೇಸಿಐ ಭಾರತ ವ್ಯಾಪ್ತಿಯ ವಲಯ 15ರಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟಿಸಿ ರಾಷ್ಟ್ರೀಯ ಮನ್ನಣೆ ಪಡೆದ ಏಕೈಕ ಘಟಕ ಎಂಬ ಹೆಗ್ಗಳಿಕೆಗೆ ಜೇಸಿಐ ಕಾಪು ಪಾತ್ರವಾಗಿ ಇತಿಹಾಸ ಬರೆದಿದೆ.

ಘಟಕದ ಈ ಮಹತ್ತರ ಸಾಧನೆಗೆ ಕಾರಣರಾದ ಜೇಸಿಐ ಕಾಪು ಘಟಕದ ಅಧ್ಯಕ್ಷರಾದ ವಿಕ್ಕಿ ಪೂಜಾರಿ ಮಡುಂಬು ಹಾಗೂ ಅವರ ಇಡೀ ಆಡಳಿತ ಮಂಡಳಿ ಮತ್ತು ಸದಸ್ಯರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಂಘಟನೆಯ ಹಿರಿಯ ಮುಖಂಡರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟಕದ ಪರಿಶ್ರಮ ಮತ್ತು ಸೇವಾ ಮನೋಭಾವ ಇತರ ಯುವ ಸಂಘಟನೆಗಳಿಗೆ ಪ್ರೇರಣೆಯಾಗಿದೆ ಎಂದು ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.









































































































Related posts

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

Mumbai News Desk

ಬೆಳ್ತಂಗಡಿ : ಬಿಲ್ಲವ ಸಮಾಜಕ್ಕೆ ಅವಹೇಳನ ಆರೋಪ – ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Mumbai News Desk

ಮೂಲ್ಕಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನದ ಪ್ರಯುಕ್ತ ಭವ್ಯ ಶೋಭಾಯಾತ್ರೆ

Mumbai News Desk

“ಭಗವಾನ್ ದತ್ತಾತ್ರೇಯರು ವಿಶ್ವವನ್ನು ವಿದ್ಯಾಲಯವಾಗಿಸಿದವರು”: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

Mumbai News Desk

ಸಂಸ್ಕೃತಿಯ ಬೇರು, ಕೃಷಿಯ ಚಿಗುರು: ಉಡುಪಿಯಲ್ಲಿ ಕೃಷಿಯತ್ತ ಯುವಜನರನ್ನು ಆಕರ್ಷಿಸಲು ನಡೆದ ‘ಕೆಸರುದ ಗಮ್ಮತ್ತು’ , ಕೃಷಿ ಕ್ರೀಡಾಕೂಟ ಯಶಸ್ವಿ ಸಂಪನ್ನ

Mumbai News Desk

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk