October 15, 2026
Mumbai News Kannada
ಮುಂಬಯಿ

ವಿದ್ಯಾವಿಹಾರ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ: ‘ಶ್ರೀ ರಾಮ ಕಥಾ ಹೃದಯಂ’ ಸರಣಿ ತಾಳಮದ್ದಳೆಯ ಹದಿನಾರನೆಯ ಪ್ರಸ್ತುತಿ



ಕಲಿಯುಗದಲ್ಲಿ ತ್ರೇತಾಯುಗವನ್ನು ಸಾಕ್ಷಾತ್ಕರಿಸುವ ಶಕ್ತಿ ಯಕ್ಷಗಾನ ಕಲಾವಿದರಿಗಿದೆ: ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

ಮುಂಬಯಿ: “ಉತ್ತಮ ಕಾರ್ಯಕ್ಕೆ ಜನರು ಸೇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಶ್ರೀರಾಮನ ಕಥಾ ಶ್ರವಣಕ್ಕೆ ಸೇರಿದ ಶ್ರೋತೃಗಳ ಸಂಖ್ಯೆಯೇ ಹೇಳುತ್ತದೆ—ಒಳ್ಳೆಯ ಕಾರ್ಯಕ್ರಮಕ್ಕೆ ಜನರು ಈಗಲೂ ಒಟ್ಟು ಸೇರುತ್ತಾರೆ ಎಂದು. ಕಲಿಯುಗದಲ್ಲಿ ತ್ರೇತಾಯುಗವನ್ನು ಸಾಕ್ಷಾತ್ಕರಿಸುವ ಶಕ್ತಿ ಯಕ್ಷಗಾನ ಕಲಾವಿದರಿಗಿದೆ” ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಹಾಗೂ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅಕ್ಟೋಬರ್ 10ರಂದು ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಆಯೋಜನೆಯಲ್ಲಿ ನಡೆದ ‘ಶ್ರೀ ರಾಮ ಕಥಾ ಹೃದಯಂ’ ಸರಣಿ ತಾಳಮದ್ದಳೆಯ 16ನೆಯ ಪ್ರಸ್ತುತಿ ‘ಇಂದ್ರಜಿತು ಕಾಳಗ’ ಪ್ರಸಂಗದ ಮಧ್ಯಂತರ ಸಭಾ ಕಾರ್ಯಕ್ರಮದಲ್ಲಿ ಅವರು ಕಲಾವಿದರನ್ನು ಸನ್ಮಾನಿಸಿ ಅನುಗ್ರಹ ಭಾಷಣ ಮಾಡಿದರು.

“ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 24 ಕಂತುಗಳ ಸರಣಿ ತಾಳಮದ್ದಳೆ ‘ಶ್ರೀರಾಮ ಕಥಾ ಹೃದಯಂ’ ಇದರ 16ನೇ ಪ್ರಸ್ತುತಿ ಇದು. ದೇವರು ಇದ್ದಾರೆ ಎನ್ನುವುದಕ್ಕೆ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಆರಂಭಿಸಿದ ಈ ಸರಣಿ ಅತ್ಯುತ್ತಮ ರೀತಿಯಲ್ಲಿ ಮೂಡಿಬರುತ್ತಿರುವುದೇ ಸಾಕ್ಷಿ. ಕಲಾವಿದರ ಬದುಕು ಯಕ್ಷಗಾನದ ಪಾತ್ರದಂತೆ ವಿಜೃಂಭಿಸುವಂತಾಗಲಿ, ಎಲ್ಲರ ಬದುಕಿಗೂ ರಾಮನ ಅನುಗ್ರಹವಿರಲಿ” ಎಂದು ಹಾರೈಸಿದರು.

ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, “ಶ್ರೀರಾಮದೇವರ ಅನುಗ್ರಹ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗದ ಈ ಸತ್ಕಾರ್ಯಕ್ಕೆ ಸದಾ ಇದೆ. ಈ ಕಾರ್ಯಕ್ರಮವು ಶ್ರೀಗಳವರ ಅಮೃತಹಸ್ತದಿಂದಲೇ ಉದ್ಘಾಟನೆಗೊಂಡು, ಇಂದು 16ನೇ ಸರಣಿಗೂ ಅವರು ಆಗಮಿಸಿ ಹರಸಿದ್ದಾರೆ. ಮುಂದೆ ಸಮಾರೋಪಕ್ಕೂ ಆಗಮಿಸಿ ನಮ್ಮನ್ನು ಅನುಗ್ರಹಿಸಲಿದ್ದಾರೆ” ಎಂದು ತಿಳಿಸಿ, ಶ್ರೀಪಾದರಿಗೆ ಗುರುವಂದನೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ ಮಾತನಾಡಿ, “ಮುಂಬೈ ಮಹಾನಗರದ ಒತ್ತಡದ ಬದುಕಿನ ನಡುವೆಯೂ ಇಂತಹ ಸ್ತುತ್ಯರ್ಹ ಕಾರ್ಯಕ್ರಮಕ್ಕೆ ಸಮಯ ನೀಡಿ, ಮುಂಬೈನ 140 ಯಕ್ಷಗಾನ ಕಲಾವಿದರನ್ನು ದಂಪತಿ ಸಮೇತ ಗೌರವಿಸುತ್ತಿರುವುದು ಒಂದು ಯಜ್ಞಸದೃಶ ಕಾರ್ಯ. ಇದನ್ನು ಆಯೋಜಿಸಿದ ಸಂಘಟಕರಿಗೆ ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರಿಗೆ ಅಭಿನಂದನೆಗಳು” ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾವಿಹಾರ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಹರಿದಾಸ ಗೋಪಾಲ ಶೆಟ್ಟಿ ಮತ್ತಿತರ ಗಣ್ಯರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಪೂಜ್ಯ ಶ್ರೀಗಳು ಹಾಗೂ ವೇದಿಕೆಯಲ್ಲಿದ್ದ ಅತಿಥಿ ಮಹೋದಯರು ದೀಪ ಪ್ರಜ್ವಲಿಸಿದರು. ಭಾಗವತರಾದ ಜಯಲಕ್ಷ್ಮಿ ದೇವಾಡಿಗ ಪ್ರಾರ್ಥನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀನಿವಾಸ ಸಾಪಲ್ಯ, ಸೀತಾರಾಮ ಬಂಗೇರ, ಪ್ರವೀಣ ಶೆಟ್ಟಿ ಕಟೀಲು (ಹಿಮ್ಮೇಳ ವಾದಕರು), ಸದಾನಂದ ಪಾಟ್ಕರ್, ಮಂಜುನಾಥ ಶೆಟ್ಟಿಗಾರ್, ಶ್ರೀಮತಿ ಸುನೀತಾ ಸುವರ್ಣ, ಪ್ರಕಾಶ ಶೌಡೆ ಹಾಗೂ ಮಹೇಂದ್ರ ಶೆಟ್ಟಿ ನಂದ್ರೋಳ್ಳಿ ಅವರನ್ನು ಸಪತ್ನೀಕರಾಗಿ ಸನ್ಮಾನಿಸಲಾಯಿತು.

ಅತಿಥಿ ಗಣ್ಯರನ್ನು ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರು ಶಾಲು ಹೊದಿಸಿ, ಶ್ರೀರಾಮ ರಕ್ಷಾ ಸ್ತೋತ್ರದ ಪ್ರತಿ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಸಿಎ ರಾಜಶ್ರೀ ಜೆ. ಶೆಟ್ಟಿ ನಿರೂಪಿಸಿ, ವಂದಿಸಿದರು.



Related posts

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ

Mumbai News Desk

ಮುಂಬೈ ಲೋಕಲ್ ರೈಲಿನಲ್ಲಿ ಬಾಗಿಲು ಮುಚ್ಚುವ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಯುವಕ ಸಾವು, ಆರೋಪಿ ಬಂಧನ

Mumbai News Desk

ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ : ಸಾಮೂಹಿಕ ಸತ್ಯನಾರಾಯಣ ಪೂಜೆ

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಕ್ಷಿತ್ ಸತೀಶ್ ಶೆಟ್ಟಿ ಗೆ ಶೇ. 93.60 ಅಂಕ.

Mumbai News Desk

ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ, ಸಂಚಾಲಕರು ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸೋಮನಾಥ ಪೂಜಾರಿ ಪುನರಾಯ್ಕೆ

Mumbai News Desk