ಕಾಪು/ಉಳ್ಳೂರು: ವಿಶ್ವ ಮಾನವ ಕಲ್ಯಾಣಕ್ಕೆ ಜ್ಞಾನದ ಬೆಳಕು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಅಷ್ಟೋತ್ತರ ಶತನಾಮಾವಳಿಯ ಧ್ವನಿಮುದ್ರಿಕೆಯು ಅಕ್ಟೋಬರ್ 17ರಂದು ಮಧ್ಯಾಹ್ನ 12:30ಕ್ಕೆ ಉಳ್ಳೂರಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಧನಂಜಯ ಶಾಂತಿ ಉಳ್ಳೂರು ಇವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುದರಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ್ ಡಿ. ಪೂಜಾರಿ, ಭೂನ್ಯಾಯ ಮಂಡಳಿಯ ಸದಸ್ಯ ನ್ಯಾಯವಾದಿ ರೋಹನ್ ಕುಮಾರ್ ಕುತ್ಯಾರ್, ಕಲಾರತ್ನ ಬಿರುದಾಂಕಿತ ರವಿರಾಜ್ ಕೋಟ್ಯಾನ್ ಪಡುಬಿದ್ರಿ, ಪಡುಬಿದ್ರಿ ಯುವವಾಹಿನಿಯ ಮಾಜಿ ಅಧ್ಯಕ್ಷ ಯೋಗೇಶ್ ಪೂಜಾರಿ ಹಾಗೂ ಕೆಮುಂಡೇಲು ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಉಪಸ್ಥಿತರಿರಲಿದ್ದಾರೆ.
ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ ಅರ್ಚಕರಾದ ಶ್ರೀ ದಿನೇಶ್ ಶಾಂತಿ ಆಶೀರ್ವಚನ ನೀಡಲಿದ್ದು, ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಧ್ವನಿಮುದ್ರಿಕೆಯ ರೂವಾರಿ, ಸಾಯಿಸೇವಕ ಶ್ರೀ ನಾಗರಾಜ ಹೆಜಮಾಡಿ ಹಾಗೂ ಕಾರ್ಯಕ್ರಮದ ಸಂಯೋಜಕ ಧನಂಜಯ ಶಾಂತಿ ಉಳ್ಳೂರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.



