November 6, 2026
Mumbai News Kannada
ಪ್ರಕಟಣೆ

ಮಂಗಳೂರಿನಲ್ಲಿ ನವೆಂಬರ್ 8ರಂದು ‘ಮೂಲತ್ವ’ದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಆಚರಣೆ: ಯಕ್ಷಗಾನ ತಾಳಮದ್ದಳೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ









ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ‘ಮೂಲತ್ವ’ ವತಿಯಿಂದ ನವೆಂಬರ್ 8ರಂದು ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದೀಪಾವಳಿ ಹಬ್ಬದ ಆಚರಣೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಯಿಂದ ಮಂಗಳೂರಿನ ಮಾರಿರ್ಕಾಂಬ ದೇವಸ್ಥಾನದ ರಸ್ತೆ, ತಾರೆತೋಟ, ಮರೋಳಿ, ಮಂಗಳೂರು ಇಲ್ಲಿನ ‘ಮೂಲತ್ವ’, ಸಿ-105, ಸುವರ್ಣ ರೆಸಿಡೆನ್ಸಿಯಲ್ಲಿ ನಡೆಯಲಿದೆ.



ಕಾರ್ಯಕ್ರಮವನ್ನು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ಅನಂತಪುರ, ಕುಂಬಳೆ ಇದರ ಪ್ರಧಾನ ಅರ್ಚಕರಾದ ವೇದಮೂರ್ತಿ ಪಿ.ಎಸ್. ಸುಬ್ರಹ್ಮಣ್ಯ ಭಟ್ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಅರ್ಚನೆ ಮತ್ತು ಪುಷ್ಪಾರ್ಚನೆ, 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಕುಮಾರಿ ಮನ್ವಿತಾ ಮತ್ತು ಕೃತಿಕಾ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಲಿದೆ.













ಬೆಳಿಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಅಲೆತ್ತೂರು ಬಿ.ಸಿ.ರೋಡ್‌ನ ‘ಯಕ್ಷ ಕದಂಬ’ ಹವ್ಯಾಸಿ ಯಕ್ಷಗಾನ ಕಲಾ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ‘ಜಾಬಾಲಿ ನಂದಿನಿ’ ಕಾರ್ಯಕ್ರಮ ನಡೆಯಲಿದೆ.

ಈ ತಾಳಮದ್ದಳೆಯಲ್ಲಿ ಭಾಗವತರಾಗಿ ಶ್ರೀ ಸಂದೀಪ್ ಆಚಾರ್ಯ ಮಂಕುಡೆ, ಚೆಂಡೆಯಲ್ಲಿ ಶ್ರೀವೃತ್ಸ ಸೋಮಯಾಜಿ ಹಾಗೂ ಮದ್ದಳೆಯಲ್ಲಿ ಶ್ರೀ ನವೀನ ಚಂದ್ರ ಆಚಾರ್ಯ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಜಾಂಬಾಲಿಯಾಗಿ ಶ್ರೀ ನರಸಿಂಹ ಮಯ್ಯ ಹಾಗೂ ನಂದಿನಿಯಾಗಿ ಶ್ರೀ ಸಚಿನ್ ಹೊಳ್ಳ ಪಾತ್ರ ನಿರ್ವಹಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸರ್ವರಿಗೂ ಆದರದ ಸ್ವಾಗತವನ್ನು ಕೋರುವವರು ಶ್ರೀ ಪ್ರಕಾಶ್ ಮೂಲತ್ವ ಹಾಗೂ ಸರ್ವ ಸದಸ್ಯರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು. ಹೆಚ್ಚಿನ ಮಾಹಿತಿಗಾಗಿ 9036478093 ಸಂಖ್ಯೆಯನ್ನು ಸಂಪರ್ಕಿಸಬಹುದು.



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.

Mumbai News Desk

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk

ದಹಿಸರ್ ಪೂರ್ವ. ರಾವಲ್ಪಾಡ   ಶ್ರೀ ದುರ್ಗಾಪರಮೇಶ್ವರಿ -ಶನೀಶ್ವರ ದೇವಸ್ಥಾನ, ಜೂ 6 ರಂದು ಶ್ರೀ ಶನಿ ಜಯಂತಿ ಆಚರಣೆ.

Mumbai News Desk

ಜ. 24 ಮತ್ತು 25 ; ಗೋರೆಗಾಂವ್ (ಪೂರ್ವ)ದ ಸಹಕಾರವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ

Mumbai News Desk