November 9, 2026
Mumbai News Kannada
ಪ್ರಕಟಣೆ

ಇಂದು (ನ.9)ಥಾಣೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ದೈವಕೋಲ (ನೇಮ) ಆಮಂತ್ರಣ ಪತ್ರಿಕೆ ಬಿಡುಗಡೆ





















ಥಾಣೆ, ನ.9: ಥಾಣೆಯಲ್ಲಿರುವ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದೇ ಡಿಸೆಂಬರ್ 5ರಂದು ನಡೆಯಲಿರುವ ದೈವಕೋಲ (ನೇಮ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು (ನವೆಂಬರ್ 9, ಸೋಮವಾರ) ರಾತ್ರಿ 8.15ಕ್ಕೆ ನಡೆಯಲಿದೆ.

ಶ್ರೀ ಜಗದೀಶ್ ಕೆ. ತಂತ್ರಿ ದರೆಗುಡ್ಡೆ ಹಾಗೂ ಶ್ರೀ ರಘುಚಂದ್ರ ಆಚಾರ್ಯ ಕಾರಿಂಜೆ ಅವರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ತುಳುನಾಡಿನ ದೈವಾರಾಧನೆಯ ಪವಿತ್ರ ಪರಂಪರೆ, ಧಾರ್ಮಿಕ ನಂಬಿಕೆ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ಭಕ್ತಾಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ.



















ದೈವಕೋಲದ (ನೇಮ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ಮುಂದಿನ ಧಾರ್ಮಿಕ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಈ ಶುಭ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಭಕ್ತಾಭಿಮಾನಿಗಳನ್ನು ಶ್ರೀ ಶಿವಪ್ರಸಾದ್ ಪೂಜಾರಿ ಪುತ್ರೂರು ಹಾಗೂ ಸರ್ವ ಭಕ್ತವೃಂದ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.







































































































.

.























.

.

.

.



Related posts

ಇಂದು :ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ದ ಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ.

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಸಾರ್ವಜನಿಕ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ : ಫೆ. 14ರಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 29ರಂದು ಆಶ್ಲೇಷ ನಾಗಬಲಿ ಪೂಜೆ

Mumbai News Desk

ಜುಲೈ 25: ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿಪತ್ರಕರ್ತ, ಸಾಹಿತಿ, ರಂಗಕರ್ಮಿ ದಿವಂಗತ ಪರಮಾನಂದ ವಿ. ಸಾಲ್ಯಾನ್‌ರವರಿಗೆ ಶ್ರದ್ಧಾಂಜಲಿ ಸಭೆ

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk