September 6, 2026
Mumbai News Kannada
ಪ್ರಕಟಣೆ

ಜುಲೈ 25: ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿಪತ್ರಕರ್ತ, ಸಾಹಿತಿ, ರಂಗಕರ್ಮಿ ದಿವಂಗತ ಪರಮಾನಂದ ವಿ. ಸಾಲ್ಯಾನ್‌ರವರಿಗೆ ಶ್ರದ್ಧಾಂಜಲಿ ಸಭೆ






​ಮುಂಬಯಿ: ಸಸಿಹಿತ್ಲು ನಿವಾಸಿ, ಹೆಸರಾಂತ ಪತ್ರಕರ್ತ, ವಾಗ್ಮಿ, ಜಾನಪದ ಬರಹಗಾರ, ಸಂಘಟಕ, ಗಾಯಕ ಮತ್ತು ಬಹುಮುಖ ಪ್ರತಿಭೆಯ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲುರವರು ಅಲ್ಪಕಾಲದ ಅನಾರೋಗ್ಯದಿಂದ ಜುಲೈ 13ರಂದು ನಿಧನರಾಗಿರುವರು.


​ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಮುಂಬಯಿಯ ಆಡಳಿತ ಸಮಿತಿಯು ಅವರ ಅಗಲುವಿಕೆಯ ಸ್ಮರಣಾರ್ಥ ನುಡಿನಮನ, ಶ್ರದ್ಧಾಂಜಲಿ ಸಭೆಯನ್ನು ಶನಿವಾರ 25-07-2026ರ ಸಂಜೆ 4.30ರ ಸಮಯಕ್ಕೆ ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಹಮ್ಮಿಕೊಂಡಿದೆ.


​ಮುಂಬಯಿ ಮತ್ತು ಉಪನಗರಗಳ ಅವರ ಸಹಸ್ರಾರು ಅಭಿಮಾನಿಗಳು, ಸಸಿಹಿತ್ಲು ಬಿಲ್ಲವ ಹಾಗೂ ಮೊಗವೀರ ಬಂಧುಗಳು ಮತ್ತು ಪರಿಸರದ ಇತರ ಸಮುದಾಯದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಆಗಮಿಸಿ ನುಡಿನಮನ ಸಲ್ಲಿಸಿ, ಪ್ರಾರ್ಥನಾ ಸಭೆ ಯಶಸ್ವಿಯಾಗಿ ಜರಗುವಂತೆ ಸಹಕರಿಸಲು ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮತ್ತು ಶ್ರೀ ಸಾರಂತಾಯ ಗರಡಿ ಉಳ್ಳಾಯ ದೈವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಅಭಿಮಾನಿ ವರ್ಗವು ಆತ್ಮೀಯವಾಗಿ ವಿನಂತಿಸಿಕೊಂಡಿದೆ.



Related posts

ಜ  5 :  ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ,   47ನೇ ವಾರ್ಷಿಕ ಶ್ರೀ ಅಯ್ಯಪ್ಪ  ಮಹಾಪೂಜೆ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಫೆ.1ರಂದು ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ; ಪ್ರಶಸ್ತಿ ಪ್ರದಾನ

Mumbai News Desk

ಮಾರ್ಚ್ 26-27ರಂದು ಕಾಪುವಿನ 3 ಮಾರಿಗುಡಿಯಲ್ಲಿ ‘ಕಾಲವಧಿ ಸುಗ್ಗಿ ಮಾರಿಪೂಜೆ’

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಫೆ. 21-22ರಂದು “148ನೇ ವಾರ್ಷಿಕ ಮಂಗಳೋತ್ಸವ” ಮತ್ತು “ಕುಮಾರವ್ಯಾಸ ಭಾರತ” ಗ್ರಂಥ ಪಾರಾಯಣದ ಸಮಾಪ್ತಿ ಮಂಗಳೋತ್ಸವ, 24ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk