ಮುಂಬಯಿ: ವಡಾಲಾದ ಪ್ರತಿಷ್ಠಿತ ಎನ್.ಕೆ.ಇ.ಎಸ್. ಹೈಸ್ಕೂಲ್ ವತಿಯಿಂದ ‘ಎನ್.ಕೆ.ಇ.ಎಸ್. ಸ್ಕೂಲ್ ಚಲೋ’ ಕಾರ್ಯಕ್ರಮದ ಅಂಗವಾಗಿ ವಿಶೇಷ ಸಂವಾದ ಕಾರ್ಯಕ್ರಮ ‘ಚಾಯ್ ಪೆ ಚರ್ಚಾ’ ಆಯೋಜಿಸಲಾಗಿದೆ.
ನವೆಂಬರ್ 21ರ ಶನಿವಾರ ಸಂಜೆ 4.30ರಿಂದ 5.30ರವರೆಗೆ ವಡಾಲಾದ ಎನ್.ಕೆ.ಇ.ಎಸ್. ಹೈಸ್ಕೂಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಬಿ.ಎನ್. ಶ್ರೀಕೃಷ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ಅಪಾರ ಅನುಭವ ಹಾಗೂ ಜೀವನದ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
‘From Classroom to Courtroom and Beyond’ (ತರಗತಿಯಿಂದ ನ್ಯಾಯಾಲಯದವರೆಗೆ ಮತ್ತು ಅದಕ್ಕೂ ಮೀರಿದ ಪಯಣ) ಎಂಬ ವಿಶೇಷ ವಿಷಯದೊಂದಿಗೆ ಸಂವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಶಿಕ್ಷಣ, ವೃತ್ತಿಜೀವನ, ನ್ಯಾಯಾಂಗ ಕ್ಷೇತ್ರದ ಅನುಭವಗಳು ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳ ಕುರಿತು ತಮ್ಮ ಅನುಭವಗಳ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಅವಕಾಶ ಈ ಸಂವಾದದ ಮೂಲಕ ದೊರೆಯಲಿದೆ.
ಶಿಕ್ಷಣದ ಹಂತದಿಂದ ಉನ್ನತ ಜವಾಬ್ದಾರಿಯುತ ಸ್ಥಾನಗಳವರೆಗೆ ಸಾಗಿದ ತಮ್ಮ ಪಯಣವನ್ನು ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರು ಹಂಚಿಕೊಳ್ಳಲಿದ್ದು, ಅವರ ಅನುಭವದ ಮಾತುಗಳು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ, ಆತ್ಮವಿಶ್ವಾಸ ಮತ್ತು ಸಾಧನೆಯ ಹಂಬಲವನ್ನು ಮೂಡಿಸುವ ನಿರೀಕ್ಷೆಯಿದೆ.
ಜ್ಞಾನ, ಅನುಭವ ಮತ್ತು ಮುಕ್ತ ಸಂವಾದಕ್ಕೆ ವೇದಿಕೆಯಾಗಿರುವ ಈ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಲು ಆಯೋಜಕರು ಆಹ್ವಾನಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀಡಲಾಗಿರುವ ನೋಂದಣಿ ಲಿಂಕ್ https://forms.gle/f4pWyucSCWzU1mAZ9 ಮೂಲಕ ಮುಂಗಡ ನೋಂದಣಿ ಮಾಡಿಕೊಳ್ಳಬಹುದಾಗಿ





















