ಬೊಲ್ಯೊಟ್ಟು ಆಲಡೆ ಜೀರ್ಣೋದ್ಧಾರ: ನವೆಂಬರ್ 28 ರಂದು ಮುಂಬೈಯಲ್ಲಿ ಸಭೆ
ಇತಿಹಾಸ ಪ್ರಸಿದ್ಧ ಕಾಪು ತಾಲೂಕಿನ ಬೊಲ್ಯೊಟ್ಟು ಆಲಡೆಯ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮುಂಬೈ ಸಮಿತಿಯ ನೇತೃತ್ವದ ಸಭೆಯು ನವೆಂಬರ್ 28 ರಂದು ಬೆಳಗ್ಗೆ 10 ಗಂಟೆಗೆ ಅಂಧೇರಿ ಪಶ್ಚಿಮದ ಆಜಾದ್ ನಗರ ಮೆಟ್ರೋ ರೈಲ್ವೆ ಸ್ಟೇಷನ್ ಹತ್ತಿರದ ದಾದಾಭಾಯಿ ರಸ್ತೆಯಲ್ಲಿರುವ ಭವನ್ಸ್ ಕಾಲೇಜು ಸಮೀಪದ ‘ದಿ ಅಂಧೇರಿ ರಿಕ್ರಿಯೇಷನ್ ಕ್ಲಬ್’ನಲ್ಲಿ ನಡೆಯಲಿದೆ.
ಮಾಜಿ ಸಂಸದರಾದ ಗೋಪಾಲ ಸಿ. ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ವಿವಿಧ ಸಮಾಜದ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯು ಪ್ರಕಟಣೆಯ ಮೂಲಕ ವಿನಂತಿಸಿದೆ. ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಸುಂಧರ್ ಎಸ್. ಶೆಟ್ಟಿ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9930632998 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
.





















