30 C
Mumbai
September 10, 2026
Mumbai News Kannada
ಪ್ರಕಟಣೆ

ಸೆಪ್ಟೆಂಬರ್ 12 : ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಸರಣಿ ತಾಳಮದ್ದಲೆ 14ನೇ ಪ್ರಸ್ತುತಿ , ಕಲಾವಿದರಿಗೆ ಸನ್ಮಾನ, ಪುಸ್ತಕ ಬಿಡುಗಡೆ





ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿ ಯವರ ಶಿಷ್ಯ
ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರ
ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡ ,
ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ
ಅವರ ಶುಭಾಶೀರ್ವಾದದೊಂದಿಗೆ
ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ
ಶ್ರೀ ಹರಿದಾಸ ಗೋಪಾಲ ಶೆಟ್ಟಿಇವರ ಸಂಪೂರ್ಣ ಸಹಕಾರದೊಂದಿಗೆ
ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ
ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ ಶ್ರೀ ರಾಮ ಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹದಿನಾಲ್ಕನೆಯ ಪ್ರಸ್ತುತಿ, “ನಾಗಾಸ್ತ್ರ ಪ್ರಯೋಗ – ಕುಂಭಕರ್ಣ ವಧೆ” ಎಂಬ ತಾಳಮದ್ದಲೆ ಪ್ರಸಂಗವು ದಿನಾಂಕ 12-09-2026ರ ಶನಿವಾರದಂದು ಅಪರಾಹ್ನ 2:15ಕ್ಕೆ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ ಗಾಂವ್‌ದೇವಿ ವಿದ್ಯಾವಿಹಾರ್ (ಪಶ್ಚಿಮ) ಇಲ್ಲಿ ಜರುಗಲಿರುವುದು.‌

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಪ್ರವೀಣ್ ಭೋಜ ಶೆಟ್ಟಿ(ಅಧ್ಯಕ್ಷರು ಬಂಟರ ಸಂಘ ಮುಂಬಯಿ)ಹಾಗೂ ಡಾ.ಸುರೇಶ್ ರಾವ್(ಕಾರ್ಯಧ್ಯಕ್ಷರು,) ಸಂಜೀವಿನಿ ಟ್ರಸ್ಟ್
ಇವರು ಆಗಮಿಸಲಿರುವರು .
ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರು ಗಳಾದ ಮಾನಾಡಿ ಸದಾನಂದ‌ ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಸುರೇಂದ್ರ ಕುಮಾರ್ ಹೆಗ್ಡೆ, ಗಣೇಶ ಚಂದ್ರಮಂಡಲ, ಶ್ರೀಮತಿ ಸುಜಲ‌ ಅಜಿತ್ ಶೆಟ್ಟಿ ಶಿವರಾಮ ಶೆಟ್ಟಿ, ರವಿಶಂಕರ ಆಚಾರ್ಯ, ಪ್ರಕಾಶ ಶೆಟ್ಟಿ ಸುರತ್ಕಲ್
ಇವರನ್ನು ಗೌರವಿಸಲಾಗುವುದು.
ಈ ಶುಭಾವಸರದಲ್ಲಿ ದಾಮೋದರ ಶೆಟ್ಟಿ ಇರುವೈಲು ವಿರಚಿತ “ಮರೆತ ಅಪರಂಜಿಗಳು” ಎಂಬ ಕೃತಿಯನ್ನು
ಗಣ್ಯರ ಸಮ್ಮುಖದಲ್ಲಿ ವೇಧಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ಟರ ಶುಭ ಹಸ್ತದಲ್ಲಿ ಬಿಡುಗಡೆಗೊಳ್ಳಲಿರುವುದು .
ಈ ಎಲ್ಲ‌ ಕಾರ್ಯಕ್ರಮಗಳಿಗೆ
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ವಾಸು ಮಾರ್ನಾಡ್, ಸುರೇಶ್ ನಂದ್ರೊಳ್ಳಿ ಅವರು ಎಲ್ಲರನ್ನು ವಿನಂತಿಸಿದ್ದಾರೆ.



Related posts

ಶ್ರೀ ಕೋಡ್ಬಬ್ಬು ದೈವಸ್ಥಾನ ಬಸ್ತಿಪಡ್ಪು, ಹೆಜಮಾಡಿ : ಎ. 3 ಹಾಗೂ ಎ. 4ರಂದು ವಾರ್ಷಿಕ ನೇಮೋತ್ಸವ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ: ಎ. 18ರಂದು 2025ನೇ ಸಾಲಿನ ‘ಶ್ರೀ ಗುರುನಾರಾಯಣ ಪ್ರಶಸ್ತಿ’ ಶ್ರೀ ಗುರುನಾರಾಯಣ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಜ.27 ರಂದು ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ‘ಅರಿಶಿನ ಕುಂಕುಮ’: ಜಾನಪದ ಸಮೂಹ ಗೀತೆ ಸ್ಪರ್ಧೆ ಗೆ ಅರ್ಜಿ ಆಹ್ವಾನ

Mumbai News Desk

ಫೆ 10:ಮೀರಾ -ದಾಹಣು ಬಂಟ್ಸ್ ನ ಕ್ರೀಡೋತ್ಸವ 2024,

Mumbai News Desk

KARNATAKA SANGHA DUBAI GEARED UP FOR THE MEGA ‘RAJYOTSAVA 2024’ EVENT ON 10th Nov in DUBAI

Mumbai News Desk