November 24, 2026
Mumbai News Kannada
ಪ್ರಕಟಣೆ

ಪಲಾವಾ ಕನ್ನಡಿಗರ ಫೌಂಡೇಶನ್‌ ವತಿಯಿಂದ ನ. 29ರಂದು 6ನೇ ವರ್ಷದ ಕನ್ನಡ ರಾಜ್ಯೋತ್ಸವ





















ಡೊಂಬಿವಲಿ (ಪೂರ್ವ): ಇಲ್ಲಿನ ಪಲಾವಾ ಕನ್ನಡಿಗರ ಫೌಂಡೇಶನ್ (ರಿ.) ವತಿಯಿಂದ 6ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯು ಇದೇ ನವೆಂಬರ್ 29, 2026ರ ಆದಿತ್ಯವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಫೌಂಡೇಶನ್‌ನ ಕಾರ್ಯಕಾರಿ ಮಂಡಳಿ ತಿಳಿಸಿದೆ.

ಲೋಧಾ ಪಲಾವಾ ಫೇಸ್-1, ಕಲ್ಯಾಣ ಶೀಲ್ ರೋಡ್‌ನಲ್ಲಿರುವ ಕಾಸಾರಿಯೋ ಸೆಂಟ್ರಲ್ ಕ್ಲಬ್ ಹೌಸ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ: ಅಂದು ಸಂಜೆ 5.00ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ಕ್ಕೆ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಗಣ್ಯರ ಉಪಸ್ಥಿತಿ: ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ – ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಶಿವಸೇನಾ ಪ್ರಮುಖ್, ನಗರ ಸೇವಕ ಹಾಗೂ ಸ್ಥಾಯಿ ಸಮಿತಿ ಸದಸ್ಯ ಗಜಾನನ್ ಮೋತಿರಾಮ್ ಪಾಟೀಲ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಹರೀಶ್ ಶೆಟ್ಟಿ ಪಡುಕೋಡೂರು, ಬಂಟರ ಸಂಘ ಮುಂಬಯಿ – ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸಮಾಜ ಮತ್ತು ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ ಪಡುಕೋಡೂರು, ಹೋಟೆಲ್ ತನಿಷ್ಕದ ಗಣೇಶ್ ಶೆಟ್ಟಿ, ಹೋಟೆಲ್ ರೋಯಲ್ ಸ್ಪೈಸ್‌ನ ಚಂದ್ರಹಾಸ ಶೆಟ್ಟಿ, ಹೋಟೆಲ್ ‘ರೋಯಲ್ ಸೀ-ಫುಡ್’ ಮತ್ತು ಮೂಕಂಬಿಕಾ ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್ ಪೂಜಾರಿ, ಚಿಣ್ಣರ ಬಿಂಬ ಡೊಂಬಿವಲಿ ಶಾಖೆಯ ಮುಖ್ಯಸ್ಥರು, ಬ್ರಾಹರಿ ಯಕ್ಷಕಲಾ ನಿಲಯ ಡೊಂಬಿವಲಿ ಕಾರ್ಯಾಧ್ಯಕ್ಷೆ ಹಾಗೂ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಮಂಜುಳಾ ಎಸ್. ಶೆಟ್ಟಿ, ಹಾಗೂ ಡೊಂಬಿವಲಿಯ ಹೋಟೆಲ್ ಯುಗೋದ ಸತೀಶ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.

ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಲಾವಾ ಕನ್ನಡಿಗರ ಫೌಂಡೇಶನ್ (ರಿ.) ಅಧ್ಯಕ್ಷ ಅವಿನಾಶ್ ಸಿದ್ದೇಶ್ವರೆ, ಉಪಾಧ್ಯಕ್ಷ ಕಿರಣ್‌ರಾಜ್ ಕುಬಸದ್, ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ ಹಾಗೂ ಗೌರವ ಕೋಶಾಧಿಕಾರಿ ಸುದೀಪ್ ಎನ್. ಎಸ್. ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ಇಂದು (ಅಕ್ಟೋಬರ್ 17) ಬ್ರಹ್ಮಶ್ರೀ ನಾರಾಯಣ ಗುರುಗಳ ಅಷ್ಟೋತ್ತರ ಶತನಾಮಾವಳಿ ಧ್ವನಿಮುದ್ರಿಕೆ ಲೋಕಾರ್ಪಣೆ

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ – ಸೆ. 28ಕ್ಕೆ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣೆ

Mumbai News Desk

ಡೊಂಬಿವಲಿ: ಅ. 24ರಂದು ಕನ್ನಡಿಗರ ಸ್ನೇಹ ಬಳಗ ಟ್ರಸ್ಟ್‌ ವತಿಯಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk