ಮುಂಬಯಿ: ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಸಂಘಟನೆಗಳಲ್ಲೊಂದಾದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ ವತಿಯಿಂದ ತಮ್ಮ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗಾಗಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.
ಡಿಸೆಂಬರ್ 13, ಭಾನುವಾರದಂದು ಬೆಳಿಗ್ಗೆ 7.00 ಗಂಟೆಗೆ ಸಿಎಸ್‌ಎಂಟಿ (CSMT) ಕ್ರಾಸ್ ಮೈದಾನದ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ಮೈದಾನದಲ್ಲಿ 84ನೇ ವಾರ್ಷಿಕ ಕ್ರೀಡೋತ್ಸವ ಜರುಗಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪ್ರವೇಶ ಪತ್ರಗಳ ಜೊತೆಗೆ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್‌ನ ಪ್ರತಿಯನ್ನು ಲಗತ್ತಿಸಿ, ಪ್ರವೇಶ ಪತ್ರವನ್ನು ಡಿಸೆಂಬರ್ 12ರೊಳಗೆ ಸಂಘದ ಕಚೇರಿಗೆ ಸಲ್ಲಿಸಬೇಕಾಗಿ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ಶ್ರೀ ರಘುರಾಮ್ ಮೆಂಡನ್ ಮತ್ತು ಶ್ರೀ ಸುನಿಲ್ ಕುಂದರ್ ಅವರು ತಿಳಿಸಿದ್ದಾರೆ.
ಸದಸ್ಯರು ಪ್ರವೇಶ ಪತ್ರದ ನಮೂನೆಯನ್ನು ಸಂಘದ ಮುಖ್ಯ ಕಚೇರಿಯ ಆಡಳಿತ ಸಮಿತಿ ಹಾಗೂ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಅಥವಾ ಸದಸ್ಯರಿಂದ ಪಡೆದುಕೊಳ್ಳಬಹುದಾಗಿದೆ. ಸಂಘದ ಗೌರವಾಧ್ಯಕ್ಷರಾದ ಶ್ರೀ ಸುರೇಶ್ ಆರ್. ಕಾಂಚನ್, ಅಧ್ಯಕ್ಷರಾದ ಶ್ರೀ ಸಂತೋಷ್ ಕೃಷ್ಣ ಪುತ್ರನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಜಿ. ಮೆಂಡನ್, ಕೋಶಾಧಿಕಾರಿಗಳಾದ ಶ್ರೀ ನಾಗರಾಜ ಶ್ರೀಯಾನ್ ಮತ್ತು ಕ್ರೀಡಾ ಕಾರ್ಯದರ್ಶಿಗಳಾದ ಶ್ರೀ ರಘುರಾಮ್ ಮೆಂಡನ್ ಹಾಗೂ ಶ್ರೀ ಸುನಿಲ್ ಕುಂದರ್, ಸಂಘದ ಮುಖ್ಯ ಕಚೇರಿಯ ಪದಾಧಿಕಾರಿಗಳು ಹಾಗೂ ಆಡಳಿತ ಸಮಿತಿಯ ಸದಸ್ಯರು ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












