
ಮುಂಬಯಿ ಫೆ. 14: ದೇಶದಲ್ಲಿನ ರಾಜ್ಯವಾರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಸ್ಯೆ ಬಗ್ಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಸೌರಭ್ ಗಾರ್ಗ್ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧ ಸದಸ್ಯರುನ್ನೊಳಗೊಂಡ ಸಮಸ್ಯೆ ನಿವಾರಣೆ ಸಭೆಯು ಇತ್ತೀಚೆಗೆ ದೆಹಲಿಯ 29ನೇ ದ್ವಾರಕ ಹೌಸ್ ನಲ್ಲಿ ಜರುಗಿತು.
ರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಈ ಸಭೆಯಲ್ಲಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ ಸದಸ್ಯರಾದ ಡಾ. ಹರೀಶ್ ಬಿ ಶೆಟ್ಟಿ ಸಭೆಯಲ್ಲಿ ಆಹ್ವಾನಿತ ಸದಸ್ಯರಾಗಿ ಉಪಸ್ಥಿತರಿದ್ದು, ಮಹಾರಾಷ್ಟ್ರ ರಾಜ್ಯದ ಪ್ರತಿನಿಧಿಯಾಗಿ ಭಿಕ್ಷಾಟನೆ, ಮಂಗಳ ಮುಖಿ, ವರಿಷ್ಠ ನಾಗರಿಕರ ಸಮಸ್ಯೆ ಮತ್ತು ರಾಜ್ಯದಲ್ಲಿ ನಿಷೇಧಿಸಲ್ಪಟ್ಟ ತಂಬಾಕು ವಸ್ತುಗಳ ಮಾರಾಟದ ಬಗ್ಗೆ ತಮ್ಮ ಅಭಿಪ್ರಾಯ ಸಭೆಯಲ್ಲಿ ಮಂಡಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ರಾಜ್ಯದಲ್ಲಿನ ಸಾಮಾಜಿಕ ಅವ್ಯವಸ್ಥೆಯನ್ನು ಸಚಿವಾಲಯ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸುವಂತೆ ಸಭೆಯ ಅಧ್ಯಕ್ಷರಿಗೆ ಮನವಿ ಮಾಡಿದರು.

ಸಭೆಯಲ್ಲಿ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವಾಲಯ ಕಾರ್ಯಾಧ್ಯಕ್ಷೆ ರಾಧಿಕಾ ಚಕ್ರವರ್ತಿ, ಕಾರ್ಯದರ್ಶಿ ಸಂಜಯ್ ಪಾಂಡೆ, ಐಪಿಎಸ್ ಅಧಿಕಾರಿ ನೀರಜ್ ಕುಮಾರ್ ಗುಪ್ತ ಮತ್ತು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಮಿತಿಯ ನಿರ್ದೇಶಕರಾದ ಸಿದ್ ಗುಪ್ತ ಉಪಸ್ಥಿತರಿದ್ದರು.
ಸಭೆಯಲ್ಲಿ ಮಹಾರಾಷ್ಟ್ರ ಹೊರತು ಹರಿಯಾಣ ಕೇರಳ ಮತ್ತು ಉತ್ತರ ಪ್ರದೇಶದ ಅಧಿಕೃತ ಸದಸ್ಯರು ರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಈ ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ರಾಜ್ಯಗಳ ಸಾಮಾಜಿಕ ರಕ್ಷಣೆ ನ್ಯಾಯ ಹಾಗೂ ಸಬಲೀಕರಣದ ಬಗ್ಗೆ ಸಮಸ್ಯೆಗಳ ಪರಿಹಾರದ ಕುರಿತು ಸುಧೀರ್ಘ ಚರ್ಚೆ ನಡೆಸಿದರು.