
ಶ್ರೀ ಕುಲವನ್ನು ಗೌರವಿಸುವ ಕ್ಷೇತ್ರವೆಲ್ಲವೂ ಅಭಿವೃದ್ಧಿಯ ಪಥದತ್ತ ಸಾಗುತ್ತದೆ :ಸಿಎ ಸುರೇಂದ್ರ ಶೆಟ್ಟಿ
ನವಿ ಮುಂಬಯಿ ಮಾ 10: ಬಾಂಬೆ ಬಂಟ್ಸ್ ಅಸೋಷಿಯೇಶನಿನ ಮಹಿಳಾ ವಿಭಾಗದ ವತಿಯಿಂದ” ನಾರಿ ಉತ್ಸವ” ಕಾರ್ಯಕ್ರಮವು ಪ್ರತಿಬಾವಂತ ಮಹಿಳೆಯರಿಂದ ಡ್ಯಾನ್ಸ್, ಕಿರು ರೂಪಕ ಹಾಗೂ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಮಾರ್ಚ್ 9ರಂದು ಶನಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗ್ರಾದ ಸಭಾಗ್ರದಲ್ಲಿ ಅಶೋಕ್ಶೇಷನ್ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು .
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಅವರು ಮಾತನಾಡುತ್ತಾ ನಮಗೆ ಜನ್ಮ ನೀಡಿದ ತಾಯಿ, ಜನ್ಮ ತೆತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎನ್ನಲಾಗುತ್ತಿದೆ. ಮಹಿಳೆಯನ್ನು ಗೌರವ, ಪ್ರೀತಿ, ವಾತ್ಸಲ್ಯದಿಂದ ಕಾಣುವ ಅಂತಹ ಸಂಸ್ಥೆ, ಮತ್ತು ಮನೆ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಇಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ ಎಲ್ಲಾ ಮೂವರು ಮಹಿಳಾ ಶಕ್ತಿಗಳು ನಮ್ಮ ಸಂಸ್ಥೆಗೆ ವಿಶೇಷ ಶೋಭೆಯನ್ನು ತಂದಿದ್ದಾರೆ. ಆರಂಭದಿಂದಲೇ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ತಾಯಿ ಯನ್ನು ಗೌರವಿಸುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ನಮ್ಮ ಅಸೋಸಿಯೇಷನ್ ಕೆ ಮಹಿಳಾ ವಿಭಾಗದ ಕೊಡುಗೆ ಅಪಾರ. ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಶಕ್ತಿಯುತವಾಗಿರುವ ಸಂಘವು ಉನ್ನತ ಮಟ್ಟಕ್ಕೇರುದರಲ್ಲಿ ಸಂದೇಹವಿಲ್ಲ. ನಮ್ಮ ಸಂಘಟನೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮೆಲ್ಲರ ಸಹಕಾರ ಈ ಸಂಸ್ಥೆಗೆ ಇರಲಿ, ಶ್ರೀ ಕುಲವನ್ನು ಗೌರವಿಸುವ ಕ್ಷೇತ್ರವೆಲ್ಲವೂ ಅಭಿವೃದ್ಧಿಯ ಪಥದತ್ತ ಸಾಗುತ್ತದೆ ಎಂದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ ನಾರಿ ಉತ್ಸವದಲ್ಲಿ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮನ್ನು ನೋಡಲು ಆನಂದವಾಗುತ್ತಿದೆ. ಇದೇ ರೀತಿ ನಾರಿಯರು ಉತ್ಸವವನ್ನು ಮಡುತ್ತಲೇ ಇರಬೇಕು. ನಾರಿಯರ ಪೂಜೆ ನಡೆಯುವಲ್ಲಿ ದೇವರು ನೆಲೆಯಾಗುತ್ತಾರಂತೆ. ಆದುದರಿಂದ ನಾರಿಯರಿಗೆ ತಕ್ಕ ಸ್ಥಾನಮಾನ ಸಿಗಬೇಕು ಅಂತಹ ಮನೆಯೂ ವ್ಯವಸ್ತಿತವಾಗಿ ನಡೆಯಲು ಸಾಧ್ಯ. ಹೆಣ್ಣು ಮಕ್ಕಳು ವಿದ್ಯಾವಂತರಾದಲ್ಲಿ ಪರಿವಾರವೇ ವಿದ್ಯಾವಂತರಾಗುತ್ತಾರೆ. ಮಹಿಳೆ ಪುರುಷರನ್ನು ಮೀರಿ ನಡೆಯಬಾರದು. ಮಹಿಳೆಯಷ್ಟೆ ಪುರುಷರೂ ಪ್ರಮುಖರು ಎಂದರು.
ಗೌರವ ಅತಿಥಿ ರೋನಕ್ ಕಿಚನ್ ಅಕ್ಯೂಪ್ ಮೆಂಟ್ಸ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕಿ ಶೋಭಾ ಶಂಕರ್ ಶೆಟ್ಟಿ ಮಹಿಳಾ ದಿನಾಚರಣೆ ಬಗ್ಗೆ ಮಾತನಾಡುತ್ತಾ ಶತಮಾನದ ಹಿಂದೆ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು ಆ ಸಮಯದಲ್ಲಿ ಕ್ರಾಂತಿಕಾರಿ ಮಹಿಳೆಯರು ಬೀದಿಗಿಳಿದು ಆವ ಹಕ್ಕಿಗಾಗಿ ಚಳವಳಿ ನಡೆಸಿದರು. ಅದು ಮುಂದುವರಿದು ೧೯೭೫ ರಿಂದ ಮಹಿಳಾ ದಿನಾಚರಣೆ ಆರಂಭಗೊಂಡಿತು. ಈ ದಿನದಂದು ಸಮಾಜದ ದುರ್ಭಲ ನಾರಿಯರ ಪರಿಸ್ಥಿತಿಯನ್ನು ಸುದಾರಿಸುವ ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದೆ. ಇಂದು ಬಾಂಬೆ ಬಂಟ್ಸ್ ಅಸೋಷಿಯೇಶನ್ ಮೂವರು ಸಾದಕ ಮಹಿಳೆಯರಿಗೆ ಅವಕಾಶ ನೀಡಿದೆ. ಜನವರಿ ೨೬ ರಂದು ದೆಹಲಿಯ ಪೆರೇಡ್ ನಲ್ಲಿ ನಾರಿಯರಿಗೆ ಅವಕಾಶ ನೀಡಿದ್ದು ನಾರಿ ಶಕ್ತಿ ಪ್ರಭಲವಾಗಿತ್ತಿದೆ ಎನ್ನುತ್ತಾ ಮಹಿಳೆಯರ ಸಾಧನೆ ಬಗ್ಗೆ ಉದಾಹರಣೆ ಸಹಿತ ತಿಳಿಸುತ್ತಾ ಛಲ ವಿದ್ದಲ್ಲಿ ಸಾಧನೆ ಸಾಧ್ಯ ಎಂಬುದನ್ನು ಮಹಿಳೆಯರು ತೋರಿಸಿ ಕೊಟ್ಟಿದ್ದಾರೆ ಎಂದರು.
ಉದ್ಯಮಿ ಸಮಾಜ ಸೇವಕಿ ಶಾಲಿನಿ ಸತೀಶ್ ಶೆಟ್ಟಿ ಮಾತನಾಡುತ್ತಾ ನಾರಿಯರಿಗೆ ಗೌರವ ಇದ್ದಲ್ಲಿ ದೇವರ ಅನುಗ್ರಹ ಸಾಧ್ಯ. ಮಹಿಳೆ ಜೀವನದಲ್ಲಿ ಮಗಳಾಗಿ, ಸೊಸೆಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಅತ್ತೆಯಾಗಿ ಹಲವಾರು ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಕುಟುಂಬಕ್ಕೆ ಬರುವ ಕಷ್ಟವನ್ನು ಆಕೆ ಎದುರಿಸಬಲ್ಲಳು. ಮಹಿಳೆಯ ಹೊರನೋಟ ಮುಖ್ಯವಲ್ಲ ಒಂದು ಮನೆಯನ್ನು ಬೆಳೆಗಿಸುವ ಆಕೆಯ ಅಂತರಾಂತ್ಮದ ಸೌಂದರ್ಯಕ್ಕೆ ಮಹತ್ವವನ್ನು ನೀಡಬೇಕು ಎಂದು ಪುರುಷತಿಗೆ ಕಿವಿಮಾತನ್ನು ಹೇಳಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಅಡ್ವಕೇಟ್ ಡಿ. ಕೆ. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪುರುಷರೆಗೆ ಮಹಿಳೆಯರಿಂದ ಕಲಿಯಬೇಕಾದ ಹಲವು ವಿಷಯಗಳಿವೆ. ಅವರಿಗೆ ಮನೆಯನ್ನು ಜೋಡಿಸಲು ಹಾಗೂ ಬೇರ್ಪಡಿಸಲು ಸಾಧ್ಯವಿದೆ. ಪುರುಷರು ಅದಕ್ಕೆ ಅವಕಾಶ ನೀಡದೆ ಮಹಿಳೆಯರಿಗೆ ಸುಕ್ತ ಗೌರವವನ್ನು ನೀಡಬೇಕಾಗಿದೆ. ಕಾಲ ಬದಲಾಗಿದ್ದು ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲಿದ್ದು ಅನೇಕ ಬದಲಾವಣೆಯನ್ನು ನಾವು ಕಾಣಬಹುದು ಎಂದರು.
ಅಸೋಸಿಯೇಷನ್ ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಮಾತನಾಡುತ್ತಾ ನಾರಿ ಉತ್ಸವವನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಬಂಟರ ಸಮಾಜದಲ್ಲಿ ಮೊದಲಿಂದಲೇ ಮಹಿಳೆಯರಿಗೆ ಪ್ರಾಮುಖ್ಯತೆ ಇತ್ತು. ಆದುದರಿಂದ ಬಂಟರ ಸಮಾಜದಲಿ ಹುಟ್ಟಿದ ಮಹಿಳೆಯರು ಬಾಗ್ಯವಂತರು. ಉತ್ತರ ಬಾರತದಲ್ಲಿ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಈಗ ಸರಕಾರವೂ ಮಹಿಳೆಯರಿಗೆ ಮೀಸಲಾತಿಯನ್ನು ನೀಡುತ್ತಿದ್ದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ.
ಈ ಸಂದರ್ಭದಲ್ಲಿ ಕೃಷ್ನಿ ಮುರುಳಿ ಶೆಟ್ಟಿ, ಹರಿಣಿ ಎಚ್. ಶೆಟ್ಟಿ, ವಸಂತಿ ಶೆಟ್ಟಿ, ಇವರನ್ನು ಸನ್ಮಾನಿಸಲಾಗುವುದು.
ವೇದಿಕೆಯಲ್ಲಿ ಬಾಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷ ಅಡ್ವಕೇಟ್ ಡಿ. ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ, ಐಕಳ ಕಿಶೋರ್ ಕೆ ಶೆಟ್ಟಿ, ಜೊತೆ ಕೋಶಧಿಕಾರಿ ಸಿಎ ದಿವಾಕರ್ ಶೆಟ್ಟಿ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ, ಶಾಂತ ಎನ್. ಶೆಟ್ಟಿ, ಕಾರ್ಯದರ್ಶಿ ಸಹಾನಿ ವಿ. ಶೆಟ್ಟಿ, ಕೋಶಾಧಿಕಾರಿ ಉಷಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಲಲಿತ ಬಿ ಶೆಟ್ಟಿ, ಜೊತೆ ಕೋಶಾಧಿಕಾರಿ ಮಾಯಾ ಎಸ್ ಆಳ್ವ ಉಪಸ್ಥರಿದ್ದರು,
ಶುಭ ಶೆಟ್ಟಿ ಪ್ರಾರ್ಥನೆ ಮಾಡಿದರು, ಪತ್ರಕರ್ತ ದಯಸಾಗರ್ ಚೌಟ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದ ಮೊದಲು ಮತ್ತು ನಂತರ ಮಹಿಳೆಯರಿಂದ ವಿಭಿನ್ನ ದೃತ್ಯ ಕಾರ್ಯಕ್ರಮಗಳು ಕಿರು ನಾಟಕ ಪ್ರೇಕ್ಷಕರನ್ನು ಮನರಂಜಿಸಿದ, ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಮಾಜಿ ಅಧ್ಯಕ್ಷರುಗಳು ಟ್ರಸ್ಟಿಗಳು ಮಾಜಿ ಮಹಿಳಾ ವಿಭಾಗದ ಕಾರ್ಯ ಅಧ್ಯಕ್ಷರುಗಳು ವಿವಿಧ ಉಪಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.