
ಬಂಟ್ವಾಳ ಮಾ21.ಹೊಕ್ಕಾಡಿಗೋಳಿ-ಕೊಡಂಗೆ, ಬಂಟ್ವಾಳ ತಾಲೂಕು ಇಲ್ಲಿ ಮಾ 16 ಶನಿವಾರ ವೀರ ವಿಕ್ರಮ ಜೋಡುಕರೆ ಕಂಬಳ ವಿಜೃಂಭಣೆಯಿಂದ ನಡೆಯಿತು.
ಕಂಬಳ ನಡೆಸಲು ಜಾಗವನ್ನು ದಾನ ರೂಪವಾಗಿ ನೀಡಿ ದಿ| ಕೊಡಂಗೆ ರುಕ್ಕಯ ಪೂಜಾರಿ ಎಲಿಯನಡುಗೋಡು ಸಭಾ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಮುಂಬಯಿಯ ಪ್ರಸಿದ್ಧ ಪುರೋಹಿತರೂ, ಅಂತಾರಾಷ್ಟ್ರೀಯ ಮಟ್ಟದ ಜ್ಯೋತಿಷಿ ಡಾ. ಎಂ ಜೆ ಪ್ರವೀಣ್ ಭಟ್ ಅವರನ್ನು ಸನ್ಮಾನಿಸಲಾಯಿತು.
ವೀರ ವಿಕ್ರಮ ಜೋಡುಕರೆ ಕಂಬಳದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಅಧ್ಯಕ್ಷತೆ ವಹಿಸಿದ್ದರು,
ವೇದಿಕೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕ್,
ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ,ಕರ್ನಾಟಕ ಸರಕಾರದ ಮಾಜಿ ಸಚಿವ ರಮಹನಾಥ ರೈ, ಚಲನಚಿತ್ರ ನಟ ಸಂಗೀತ ನಿರ್ದೇಶಕ ಗುರುಕಿರಣ್, ಮತ್ತಿತರ ಗಣ್ಯರು,ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.