24.7 C
Karnataka
April 3, 2025
ಸುದ್ದಿ

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,



ಕರ್ನಿರೆ ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ  ಸಹಕಾರವಿದೆ: ಕರ್ನಿರೆ ವಿಶ್ವನಾಥ್ ಶೆಟ್ಟಿ,

       ಕಿನ್ನಿಗೋಳಿ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಕಳೆದ 27 ವರ್ಷಗಳಿಂದ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯನ್ನು ಮಾಡುತ್ತಿದ್ದೇನೆ ಎಂದು ಕರ್ನಿರೆ ಫೌಂಡೇಷನ್ ಪ್ರವರ್ತಕ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು,

  ಅವರು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾರ್ಥಮಿಕ ಶಾಲೆ ಕರ್ನಿರೆ ಇಲ್ಲಿ ಕರ್ನಿರೆ ಫೌಂಡೇಷನ್ ವತಿಯಿಂದ ನಡೆದ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ, ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಇದ್ದರೆ ಗುರಿ ತಲುಪಲು ಸಾದ್ಯ, ಶಿಕ್ಷಣಕ್ಕೆ ಸಹಕಾರ ನೀಡುವ ಬಗ್ಗೆ ನನ್ನ ತಾಯಿಗೂ ಸಂತಸವಿತ್ತು, ಅವರ ಆಸೆಯಂತೆ ನಿರಂತರ ಶಿಕ್ಷಣಕ್ಕೆ ನೀಡುವ ಸಹಕಾರವನ್ನು ಮುಂದುವರಿಸುತ್ತೇನೆ ಎಂದರು

        ಉದ್ಯಮಿ ಕೆ.ಎಸ್ ಅಶ್ರಪ್ ಮಾತನಾಡಿ ನಾನು ಇದೇ ಶಾಲೆಯಲ್ಲಿ ಕಲಿತವನು, ತಂದೆ ನನಗೆ ಉತ್ತಮ ಶಿಕ್ಷಣ ಕೊಟ್ಟ ಕಾರಣ ನಮ್ಮ‌ಭವಿಷ್ಯವನ್ನು ರೂಪಿಸಲು ಸಾದ್ಯವಾಯಿತು, ತಂದೆ ತಾಯಿ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅದೇ ದೊಡ್ಡ ಆಸ್ತಿ, ಬೇರೆ ಆಸ್ತಿ ಬೇಡ, ಶಿಕ್ಷಣಕ್ಕೆ ನನ್ನಿಂದ ಯಾವುದೇ ಸಹಕಾರ ನೀಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ನೀಡಲಾಯಿತು,  ಈ ಸಂದರ್ಭ ಹರಿಶ್ಚಂದ್ರ ಶೆಟ್ಟಿ ಕರ್ನಿರೆಗುತ್ತು, ಗಂಗಾಗಧರ ಎನ್ ಅಮೀನ್ ಕರ್ನಿರೆ , ಮೋಹನ್ ಶೆಟ್ಟಿ, ರವೀಂದ್ರ ಶೆಟ್ಟಿ,  ಬಳ್ಕುಂಜೆ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ, ವನಜಾ ಕೋಟ್ಯಾನ್,   ಬಳ್ಕುಂಜೆ ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ  ಶೆಟ್ಟಿ, ಸಂಪತ್ ಶೆಟ್ಟಿ ಕರ್ನಿರೆಗುತ್ತು , ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಸಾದ್ ಶೆಟ್ಟಿ, ಉದ್ಯಮಿ ವಿಲ್ಸನ್ ಪೆರ್ನಾಂಡಿಸ್, ಉದ್ಯಮಿ ಕೆ.ಎಸ್ ಆಶ್ರಪ್,    ಎಸ್ ಡಿ.ಎಂಸಿ ಅಧ್ಯಕ್ಷೆ ಹೆಮಲತಾ ಮತ್ತಿತರರು ಉಪಸ್ಥಿತರಿದ್ದರು, ಮುಖ್ಯ ಶಿಕ್ಷಕಿ ಜೂಲೆಟ್ ಲೂವಿಸ್  ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ್ ನಿರೂಪಿಸಿದರು.

Related posts

ಮುಲುಂಡ್:ಸದಾಶಿವ ಕುಕ್ಯಾನ್ ನಿಧನ

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸಡಗರದ ದೀಪಾವಳಿ ಹಬ್ಬದ ಆಚರಣೆ

Mumbai News Desk

ಅಯೋಧ್ಯೆಯಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಮುಂಬೈ ಜನತೆಯ ಭವ್ಯ ಸ್ವಾಗತ,

Mumbai News Desk

ಪಾಲ್ಘರ್ ರಘು ಶೆಟ್ಟಿ ನಿಧನ.

Mumbai News Desk

ಡಹಾಣೂವಿನ ಸಮಾಜ ಸೇವಕ ಅಶೋಕ್  ಎಸ್. ಶೆಟ್ಟಿ ಉಳೆಪಾಡಿ ಇವರಿಗೆ ಸನ್ಮಾನ.

Mumbai News Desk