
ಬ್ರಿಟಿಷರು ನಮ್ಮ ದೇಶವನ್ನು ಅಳುವಂತಹ ಸಂದರ್ಭದಲ್ಲಿ ನಮ್ಮ ಪೂರ್ವಜರು ತಮ್ಮ ಜೀವನೋಪಾಯಕಾಗಿ ಜನ್ಮ ಭೂಮಿಯನ್ನು ಬಿಟ್ಟು ಈ ಕರ್ಮಾ ಭೂಮಿಯಾದ ಮಾಯನಗರಿ ಮುಂಬಯಿಗೆ ಆಗಮಿಸಿ ಹೋಟೆಲ್, ಕ್ಯಾಂಟೀನ್ ಗಳಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಜಗತ್ತಿಗೆ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ವತಂತ್ರವಾಗಿ ಬದುಕಲು ಕಲಿತರು.
ನಮ್ಮ ತಾಯ್ನಾಡಿನ ಸಂಸ್ಕೃತಿ, ಕಲೆ,ಆಚಾರ , ವಿಚಾರಗಳನ್ನು ತಮ್ಮಲ್ಲಿ ಮೈಗೂಡಿಸಿ ಕೊಂಡ ಬಿಲ್ಲವ ಸಮಾಜದ ಹಿರಿಯರು 1932 ರಲ್ಲಿ ನಾಲ್ಕು ಬಿಲ್ಲವ ಸಂಘಟನೆಗಳನ್ನು ಒಂದೇ ಛತ್ರದಡಿ ತರುವ ಉದ್ಧೇಶದಿಂದ ಎಲ್ಲಾ ಸಮಾಜ ಬಾಂಧವರನ್ನು ಒಗ್ಗೂಡಿಸಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಎಂಬ ಬೃಹತ್ ಸಂಸ್ಥೆಯನ್ನು ಹುಟ್ಡು ಹಾಕಿದರು. ಕಲಾ ಕ್ರಮೇಣ ಮುಂಬಯಿ ಕೋಟೆಯಿಂದ ಹೊರಗೆ ಉಪನಗರ ಹಾಗೂ ಉಪನಗರದ ಅಸುಪಾಸಿನ ಜಿಲ್ಲೆಗಳಲ್ಲಿ ನೆಲೆಸಿದ ಸಮಾಜ ಬಾಂಧವರಿಗೆ ಅಸೋಸಿಯೇಷನ್ ನ ಉದ್ದೇಶ, ಹಾಗೂ ಸಂದೇಶವನ್ನು ಬಿಲ್ಲವರ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ ಸ್ಥಳೀಯ ಕಚೇರಿಗಳನ್ನು ರಚಿಸಿದರು. ಅದರಲ್ಲಿ ಮೂರನೆಯ ಸ್ಥಳೀಯ ಕಚೇರಿ ಡೊಂಬಿವಲಿ ಸ್ಥಳೀಯ ಕಚೇರಿ.
15.08.1988 ರಲ್ಲಿ ಅಂದಿನ ಅಧ್ಯಕ್ಷರಾದ ಎನ್. ಯಲ್. ಸುವರ್ಣ ರವರ ಅದ್ಯಕ್ಷತೆಯಲ್ಲಿ ವಸಂತ್ ಬಿ.ಸುವರ್ಣ ರವರ ಕಾರ್ಯಾಧ್ಯಕ್ಷತೆಯಲ್ಲಿ 15 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಈ ಸ್ಥಳೀಯ ಕಚೇರಿಯನ್ನು ಸ್ಥಾಪಿಸಲು ಕಾರಣೀಭೂತರಾದ ದಿ.ಸಂಜೀವ ಬಿ.ಪಾಲನ್, ದಿ.ಬಿ.ವಸಂತ್ ಸುವರ್ಣ, ಶ್ರೀ ಕೆ.ಪಾಂಡುರಂಗ, ಶ್ರೀ ಶಿವರಾಮ ಕೆ.ಸಾಲಿಯಾನ್ ಮತ್ತು ದಿ. ಸುಂದರ್ ಕೋಟ್ಯಾನ್ ಪ್ರಮುಖರು. ಈ ಸಮಿತಿಯ ರಚನೆಯಲ್ಲಿ ಕೆ.ಭೋಜರಾಜ್ ರವರ ಪಾತ್ರ ಮರೆಯುವಂತಿಲ್ಲ.
ಬಿಲ್ಲವರ ಅಸೋಸಿಯೇಷನ್ ಇದರ ಇತಿಹಾಸದಲ್ಲಿ ಕೆಲವು ಕಾರ್ಯಕ್ರಮವನ್ನು ಪ್ರಾರಂಭಿಸಿದ ಕೀರ್ತಿ ಡೊಂಬಿವಲಿಗೆ ಸಲ್ಲುತ್ತದೆ.
ಅಂದಿನಿಂದ ಇಂದಿನ ವರಗೆ ಸ್ಥಳೀಯ ಸಮಿತಿಯು ವಾರ್ಷಿಕ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ, ನಾರಾಯಣ ಗುರು ಜಯಂತಿ, ಗುರು ಪೂರ್ಣಿಮಾ , ಶಾರದಾ ಪೂಜೆ, ಸಾಮೂಹಿಕ ಶನಿ ಪೂಜೆ, ಹಳದಿ ಕುಂಕುಮ, ಹರಿ ಕಥಾ , ಅಟಿಡ್ ಒಂಜಿ ದಿನ, ಸ್ವಾತಂತ್ರೋತ್ಸವ ದಿನ, ಗಣರಾಜ್ಯೋತ್ಸವ ದಿನಾಚರಣೆ , ರಕ್ತ ದಾನ ಶಿಬಿರ, ವಿದ್ಯಾರ್ಥಿ ವೇತನ ವಿತರಣೆ, ಪುಸ್ತಕ ವಿತರಣೆ, ದತ್ತು ಸ್ವೀಕಾರ, ವಾರ್ಷಿಕ ವಿಹಾರ ಕೂಟ , ಕ್ಷೇತ್ರ ದರ್ಶನ, ಸಮಾಜ ಭಾಂದವರಿಗೆ ಆರ್ಥಿಕ ನೆರವು ನೀಡಿ ಗುರು ತತ್ವನ್ನು ಪಾಲಿಸುತ್ತ ಬರುತಿದೆ.




ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವವು ಅಗಸ್ಟ್ 4 ರ ಭಾನುವಾರದಂದು ಸಂಜೆ 4.00 ಘಂಟೆಗೆ ಸರಿಯಾಗಿ, ಡೊಂಬಿವಲಿ ಪೂರ್ವದ ಎಂ.ಐ.ಡಿ.ಸಿ, ಇಂಡಸ್ಟ್ರಿಯಲ್ ಪರಿಸರದ ಎಲ್.ಐ.ಸಿ. ಕಚೇರಿ ಸಮೀಪದ ಹೋಟೆಲ್ ಶಿವಂ ಬ್ಯಾಂಕ್ವೇಟ್ ಸಭಾಗ್ರಹದಲ್ಲಿ ಜರಗಲಿದೆ.
ಸಂಜೆ 4.00 ಘಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮ ಜರಗಲಿದ್ದು ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಚಂದ್ರಹಾಸ ಎಸ್.ಪಾಲನ್ ರವರು ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಕಾರ್ಯಾಲಯದ ಜತೆ ಕಾರ್ಯದರ್ಶಿ ರವಿ ಸನಿಲ್, ಸ್ಥಳೀಯ ಕಚೇರಿಯ ಗೌ.ಕಾರ್ಯಾಧ್ಯಕ್ಷ ದೇವರಾಜ ಪೂಜಾರಿ, ಹೋಟೆಲ್ ಉದ್ಯಮಿ ರವಿ ಪೂಜಾರಿ, ಉದ್ಯಮಿ ಸತೀಶ್ ಕೋಟ್ಯಾನ್, ರಾಮಚಂದ್ರ ಬಂಗೇರ, ನವೀನ್ ಕೆ. ಅಂಚನ್, ಪ್ರಭಾ ಬಂಗೇರ, ಹಿರಿಯರಾದ ಗಿರಿಜಾ ಪಾಲನ್ ಸಮಾಜ ಸೇವಕಿ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿವಿಧ ನೃತ್ಯ, ಕಿರು ಹಾಸ್ಯ ಪ್ರಹಸನ , ಪ್ರೊಫೆಸರ್ ಡಾ. ಪ್ರಶಾಂತ್ ವಿ ಸುವರ್ಣರಿಂದ ಸಂಗೀತ ರಸಂಮಜರಿ ಹಾಗೂ ರಾತ್ರಿ 8.00 ಗಂಟೆಗೆ ಕಲ್ಲಡ್ಕ ಮಧು ಬಂಗೇರ ನಿರ್ದೇಶನದಲ್ಲಿ ತುಡಾರ್ ಕಲಾವಿದರು ಕಲ್ಲಡ್ಕ ಇವರಿಂದ ಕುಸಲ್ದ ಗೊಂಚಿಲ್ ನಾಟಕ ಪ್ರದರ್ಶನ ಜರಗಲಿದೆ.
ರಾತ್ರಿ 7.00 ಗಂಟೆಗೆ ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದ್ದು ಅತಿಥಿಗಳಾಗಿ ಮಾಜಿ ಅಧ್ಯಕ್ಷರಾದ ಎಲ್.ವಿ.ಅಮೀನ್, ಬಿ.ಸಿ.ಸಿ.ಐ ಇದರ ಕಾರ್ಯಾಧ್ಯಕ್ಷರಾದ ಎನ್.ಟಿ.ಪೂಜಾರಿ, ಎಷ್ಯಾಟಿಕ್ ಕ್ರೇನ್ಸ್ ಸರ್ವಿಸಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಗಣೇಶ್ ಪೂಜಾರಿ, ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಫೈನ್ ಕೆಮಿಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಭೋಜರಾಜ್ ಉಪಸ್ಥಿತರಿರುವರು.
ಇದೇ ಸಂಧರ್ಭದಲ್ಲಿ ಖ್ಯಾತ ಸಮಾಜ ಸೇವಕ ಹಾಗೂ ಪ್ರೀತಿ ಕ್ಯಾಟರರ್ಸ್ ಇದರ ಮಾಲಕ ಲಕ್ಷ್ಮಣ್ ಪೂಜಾರಿ ಮತ್ತು ಸ್ಥಳೀಯ ಕಚೇರಿಯ ಸ್ಥಾಪಕ ಸದಸ್ಯ ಮಂಜಪ್ಪ ಪೂಜಾರಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಸ್ಥಳೀಯ ಕಚೇರಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಗೌ.ಪ್ರಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌ.ಪ್ರ. ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ.ಕೋಟ್ಯಾನ್, ಕೇಂದ್ರ ಕಾರ್ಯಾಲಯದ ಇನ್ ಚಾರ್ಜ್ ಕೆ. ಸುರೇಶ್ ಕುಮಾರ್, ಕೇಂದ್ರ ಕಾರ್ಯಾಲಯದ ಪ್ರತಿನಿಧಿ ನವೀನ್ ಬಂಗೇರ, ಡೊಂಬಿವಲಿ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್ ಮತ್ತು ಪುರಂದರ ಎಂ. ಪೂಜಾರಿ, ಗೌ. ಕಾರ್ಯದರ್ಶಿ ಸಚಿನ್ ಜಿ.ಪೂಜಾರಿ, ಗೌ.ಕೋಶಾಧಿಕಾರಿ ಆನಂದ ಡಿ. ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ