
ಉಡುಪಿ, ಹಿರಿಯ ಪತ್ರಕರ್ತ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಸುವರ್ಣ ಫೋಟೋ ಆರ್ಟ್ಸ್ ನ ಮಾಲಕ, ಜಯಕರ ಸುವರ್ಣ (67)ಅವರು ಇಂದು (ಅ. 5)ರಾತ್ರಿ ಹೃದಯಘಾತದಿಂದ ತನ್ನ ಸ್ವಗ್ರಹ ಮಲ್ಪೆ ಕಲ್ಮಾಡಿ, ನಿವಾಸದಲ್ಲಿ ನಿಧನರಾದರು.
ದೂರದರ್ಶನ ಉಡುಪಿ ಜಿಲ್ಲಾ ವರದಿಗಾರರಾಗಿದ್ದ ಅವರು ಸೌತ್ ಕೆನರಾ ಫೋಟೋಗ್ರಪರ್ಸ್ ಎಸೋಸಿಯೇಷನ್ ನ ಉಪಾಧ್ಯಕ್ಷರು ಆಗಿದ್ದು, ಇತರ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು. ಇವರು ಮುಂಬಯಿಯಲ್ಲಿ ವೀಡಿಯೋ ಫೋಟೋ ಗ್ರಾಫರ್ ಆಗಿದ್ದು ಸಿಂಡಿಕೇಟ್ ಬ್ಯಾಂಕ್ ನ ಡೇಲೀ ಡೆಪೋಸಿಟ್ ಏಜೆಂಟ್ ಆಗಿದ್ದು, 25ವರ್ಷಗಳಿಂದ ಹುಟ್ಟೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು – ಮಿತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಮಹಾರಾಷ್ಟ್ರ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.