July 25, 2026
Mumbai News Kannada
ಸುದ್ದಿ

ಥೈಲ್ಯಾಂಡ್ ನಲ್ಲಿ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್: ದಿವಿನಾ ಸಿ. ಕಣ್ಣಂಗಾರ್ ಹ್ಯಾಟ್ರಿಕ್ ಚಿನ್ನದ ಪದಕ.







ಥೈಲ್ಯಾಂಡ್, ಸೆ.28- ಥಾಯ್ಲೆಂಡ್‌ನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಥಾಣೆಯ ದಿವಿನಾ ಸಿ.ಕಣ್ಣಂಗಾರ್ 3 ಚಿನ್ನದ ಪದಕಗಳ ಸಾಧನೆ ಗೈದಿದ್ದಾಳೆ. ಈಕೆ ಥಾಣೆಯ ದಶರಥ್ ಬಂಡ್ ಅವರಿಂದ ಸ್ಕೇಟಿಂಗ್ ಕೋಚಿಂಗ್ ಪಡೆಯುತ್ತಿದ್ದಾಳೆ.ಥೈಲ್ಯಾಂಡ್ ನಲ್ಲಿ ಮಹಾರಾಷ್ಟ್ರದ ಪರವಾಗಿ ಸ್ಕೇಟಿಂಗ್‌ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮುಂಬಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ವೈದ್ಯಕೀಯ ಸಹಾಯಕ ನಿಧಿಯ ಮುಖ್ಯಸ್ಥ ಮಂಗೇಶ್ ಚಿವಟೆಯವರು ದಿವಿನಾ ಕಣ್ಣಂಗಾರ್ ಅವಳನ್ನು ಗೌರವಿಸಿದರು. ಕೌಡೂರು ರಂಗನಪಲ್ಕೆ,ಎಲಿಯಾಲ್ ದರ್ಕಾಸ್ ಮನೆ ವನಿತಾ ಸಿ.ಕಣ್ಣಂಗಾರ್ ಮತ್ತು ಚೇತನ್ ಪಿ. ಕಣ್ಣಂಗಾರ್ ದಂಪತಿಯ ಪುತ್ರಿ ದಿವಿನಾ ಕಣ್ಣಂಗಾರ್ ಅವಳು ಥಾಣೆ ಕಾಪೂರ್ ಬಾವ್ಡಿ ಸಿ.ಪಿ.ಗೋಯೆಂಕಾ ಇಂಟರ್‌ನ್ಯಾಷನಲ್ ಸ್ಕೂಲ್ ಇದರ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವಳು.

.

.

.



Related posts

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (13/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ರಂಗನಟ, ದೂರದರ್ಶನ ಕಲಾವಿದ ರಮೇಶ ಶಿವಪುರ ಅವರಿಗೆ ಮಾತೃ ವಿಯೋಗ

Mumbai News Desk

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ, ಬಿ ಜೆ ಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Mumbai News Desk

ಭಾಯಂದರ್ : ಗಿರಿಜಾ ದೇಜಪ್ಪ ಕೋಟ್ಯಾನ್ ನಿಧನ.

Mumbai News Desk