October 24, 2026
Mumbai News Kannada
ಪ್ರಕಟಣೆ

ಕನ್ನಡ ಸಂಘ ಸಯನ್ ಆಶ್ರಯದಲ್ಲಿ ಅ. 25ರಂದು ದೀಪಾವಳಿ ವಿಶೇಷ ಮಾರಾಟ ಮೇಳ ಮತ್ತು ಪ್ರದರ್ಶನ



ಚಿನ್ನ, ವಜ್ರದ ಆಭರಣಗಳು, ವೈವಿಧ್ಯಮಯ ಸೀರೆಗಳು ಹಾಗೂ ಆಕರ್ಷಕ ಗೃಹೋಪಯೋಗಿ ವಸ್ತುಗಳ ಮಾರಾಟ.

ಮುಂಬಯಿ: ಕನ್ನಡ ಸಂಘ ಸಯನ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ TDFನ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ ವಿವಿಧ ಬಗೆಯ ಸೀರೆಗಳ ಮಾರಾಟ ಮೇಳ ಮತ್ತು ಪ್ರದರ್ಶನವು ಅಕ್ಟೋಬರ್ 25ರಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಸ್ವಾಮಿ ನಿತ್ಯಾನಂದ ಹಾಲ್, ಪ್ಲಾಟ್ ನಂ. 6, ರಸ್ತೆ ನಂ. 24, ಸ್ವಾಮಿ ವಲ್ಲಭದಾಸ್ ರಸ್ತೆ, ಸಯನ್ ಇಲ್ಲಿ ನಡೆಯಲಿದೆ.

ಈ ಮೇಳದಲ್ಲಿ ಕಾಂಚೀವರಂ ಸೀರೆಗಳು, ದಕ್ಷಿಣ ಭಾರತದ ಕಾಟನ್ (ಹತ್ತಿ) ಸೀರೆಗಳು, ಪೈಠಣಿ ರೇಷ್ಮೆ ಸೀರೆಗಳು, ಬಾಂದಿನಿ ಸೀರೆಗಳು, ಕಾಟನ್ ಮತ್ತು ರೇಷ್ಮೆ ಸೀರೆಗಳು, ಕೈಮಗ್ಗದ ಸೀರೆಗಳು, ಕುರ್ತಿಗಳು, ಬೆಡ್‌ಶೀಟ್‌ಗಳು, ಟವೆಲ್‌ಗಳು, ಕೃತಕ ಆಭರಣಗಳು (ಆರ್ಟಿಫಿಶಿಯಲ್ ಜ್ಯುವೆಲ್ಲರಿ), ಉಡುಪುಗಳು, ಫ್ಯಾಷನ್ ಉತ್ಪನ್ನಗಳು, ಖಾದ್ಯ ಪದಾರ್ಥಗಳು, ಆಟಿಕೆಗಳು ಹಾಗೂ ಇನ್ನೂ ಅನೇಕ ವಸ್ತುಗಳು ಲಭ್ಯವಿರಲಿವೆ.

ಇದರೊಂದಿಗೆ TDFನ ಚಿನ್ನ ಮತ್ತು ವಜ್ರದ ಆಭರಣಗಳು,
ಆಗುಂಬೆಯ ಗಿಡಮೂಲಿಕೆಗಳು ಸ್ವಾಸ್ಥ್ಯ ಉತ್ಪನ್ನಗಳು ಔಷಧಿಗಳು
ಡಾ. ರಂಜನ್ ಶೇಣವ ನೀಡಲಿದ್ದಾರೆ. ಮಂಗಳೂರು ಸ್ಟೋರಿನ ಎಲ್ಲಾ ವಸ್ತುಗಳು ಮಾರಾಟಕ್ಕಿದೆ.
ಸ್ಥಳೀಯ ಪ್ರತಿಭೆಗಳು ಹಾಗೂ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟವೂ ನಡೆಯಲಿದೆ.

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುವ ಈ ಮಾರಾಟ ಮೇಳದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕೆಂದು ಸಂಘದ ಗೌರವ ಅಧ್ಯಕ್ಷ ಜಯರಾಮ್ ಶೆಟ್ಟಿ, ಅಧ್ಯಕ್ಷರಾದ ಡಾ. ಎಂ.ಜೆ. ಪ್ರವೀಣ್ ಭಟ್, ಸಂಸ್ಥಾಪಕರಾದ ಹ್ಯಾರಿ ಸಿಕ್ವೀರ, ಕಾರ್ಯದರ್ಶಿ ದಯಾನಂದ, ಇತರ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಹ್ಯಾರಿ ಸಿಕ್ವೀರ, 9820582580

ದಯಾನಂದ ಮೂಲ್ಯ – 8369487771

ಉಮೇಶ್ ಶೆಟ್ಟಿ – 9987965537



Related posts

ಸೆ.7: ಸಾಫಲ್ಯ ಸೇವಾ ಸಂಘ, ಮುಂಬೈ – ವಿದ್ಯಾರ್ಥಿ ಸಹಾಯಧನ, ಮಹಿಳೆಯರಿಗೆ ಘರ್‌ಘಂಟಿ ವಿತರಣೆ ಹಾಗೂ ನಾನಾ ಸಮಾಜಮುಖಿ ಕಾರ್ಯಕ್ರಮಗಳು

Mumbai News Desk

ಡೊಂಬಿವಲಿ: ಆ. 9 ರಂದು ‘ಕರ್ಣಬೇಧನ- ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ

Mumbai News Desk

ಬೋರಿವಲಿ ನ್ಯಾನ್ಸಿ ಕಾಂಫ್ಲೆಕ್ಸ್ ಶ್ರೀ ಜಗದೀಶ್ವರಿ ಮಂದಿರ: ಜು. 29, ಗುರುಪೂರ್ಣಿಮೆಯಂದು ವಿಶೇಷ ಪೂಜೆ

Mumbai News Desk

ನ 9ಮತ್ತು 10: ಮುಂಬಯಿಯಲ್ಲಿ ಶಿವಪುರ್ಸಾದ ಬಬ್ಬರ್ಯೆ ತುಳು ನಾಟಕ. ಮಾಯಾನಗರಿಯಲ್ಲಿ ಬಬ್ಬರ್ಯನ ಮಾಯೆ

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk

ಫೆ.3 ರಂದು ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk