ಮುಂಬಯಿ, ಅ1. ಉಪನಗರ ಸಾಂತಾಕ್ರೂಸ್ (ಪ.), ಮಿಲನ್ ಸಬ್ ವೇ ರೋಡ್, ಆಶಾ ಚಾಳ್ನಲ್ಲಿ ಶ್ರೀ ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಆಡಳಿತದ ಶ್ರೀಮಂತ್ರ ದೇವಿ ಕ್ಷೇತ್ರದಲ್ಲಿ ಅ3 ರಿಂದ 11 ವರೆಗೆ ದಸರಾ ಮಹೋತ್ಸವ ದ ಅಂಗವಾಗಿ ಪ್ರತಿದಿನ ಭಜನೆ. ವಿವಿಧ. ಅನ್ನ ಸಂತರ್ಪಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ ನಿತ್ಯ ಪೂಜೆ ಬಳಿಕ ಭಜನೆ ಅನಂತರ ದೇವಿ ಗ್ರಂಥ ಪಾರಾಯಣ ಮಧ್ಯಾಹ್ನ ಮಹಾಪೂಜೆ, ಆನಂತರ 12 ಗಂಟೆಯಿಂದ 3 ಗಂಟೆವರೆಗೆ ಅನ್ನಸಂಪರ್ಪಣೆ. ರಾತ್ರಿ ಭಜನೆ ಮಂಗಳಾರತಿ ನಡೆಯಲಿದೆ
ಅ 11 ರಂದು ಶುಕ್ರವಾರ ಬೆಳಿಗ್ಗೆ ನವಮಿ ಹೋಮ. ಭಜನೆ. ಮಂಗಳಾರತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
. ಪ್ರತಿದಿನ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿ. ತನು, ಮನ, ಧನದೊಂದಿಗೆ ಸಹಕರಿಸಬೇಕಾಗಿ ಮೊತ್ತೇಸರರಾದ ವಾಸುದೇವ ಬಂಜನ್ . ಹಾಗೂ ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಭಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.