24.7 C
Karnataka
April 3, 2025
ಮುಂಬಯಿ

ಪಶ್ಚಿಮ ವಿಭಾಗ ಸಾರ್ವಜನಿಕ ನವರತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ಸಂಭ್ರಮದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ



ಶ್ರೀ ದುರ್ಗೆಯ ಕೃಪೆ ನಮ್ಮೆಲ್ಲರ ಮೇಲಿರಲಿ – ಚಂದ್ರಹಾಸ ರೈ

ರವಿ.ಬಿ‌.ಅಂಚನ್ ಪಡುಬಿದ್ರಿ

ಡೊಂಬಿವಲಿ ಅ. 6: ಕಳೆದ 60 ವರ್ಷಗಳ ಹಿಂದೆ ತುಳು- ಕನ್ನಡಿಗರು ಸಂಘಟಿತರಾಗಿ ಧಾರ್ಮಿಕ ಕಾರ್ಯಗಳನ್ನು ಮಾಡ ಬೇಕೆನ್ನುವ ಉದ್ಧೇಶದಿಂದ ಗ್ರಾಮೀಣ ಪ್ರದೇಶವಾದ ಡೊಂಬಿವಲಿಯಲ್ಲಿ ನವರಾತ್ರೋತ್ಸವ ಮಂಡಳಿಯನ್ನು ಸ್ಥಾಪಿಸಿದ ದಾಸು ಬಾಬು ಶೆಟ್ಟಿ ಅಭಿನಂದನೆಗೆ ಅರ್ಹರು ದಾಸು ಶೆಟ್ಟಿಯವರ ದೂರದೃಷ್ಟಿಯಿಂದ ತುಳು- ಕನ್ನಡಿಗರ ಧಾರ್ಮಿಕ ಸೇವಾ ಭಾವನೆಯಿಂದ ಇಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ವಜ್ರ ಮಹೋತ್ಸವವನ್ನು ಅಚರಿಸುತ್ತಿದೆ. ಶ್ರೀ ದುರ್ಗೆಯಲ್ಲಿ ನಮ್ಮ ಕಷ್ಟ ಗಳನ್ನು ಪ್ರಾರ್ಥಿಸಿ ಬೇಡಿಕೊಂಡಾಗ ದುರ್ಗೆಯು ಕಷ್ಟವನ್ನು ಪರಿಹರಿಸುತ್ತಾಳೆ ಅದುದರಿಂದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಮುಂಬಯಿ ಮಹಾನಗರದಾಂತ್ಯ ಪ್ರಸಿದ್ಧಿಯನ್ನು ಪಡೆದಿದೆ.ರಸ್ತೆಯ ಇಕ್ಕಟ್ಟಿನ ಈ ಜಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದೆ ಇದು ಶ್ರೀ ದುರ್ಗೆಯ ಅನುಗ್ರಹದಿಂದ ಮಾತ್ರ ಸಾಧ್ಯ  ಶ್ರೀ ದುರ್ಗೆಯ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಕಾರ್ಯಕ್ರಮದ ಪ್ರಯೋಜಕರಾದ ಚಂದ್ರಹಾಸ ರೈ ನುಡಿದರು
ಅವರು ಅಕ್ಟೋಬರ್6 ರ ರವಿವಾರ ಸಂಜೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಹ ಪ್ರಾಯೋಜಕರಾಗಿ ಮಾತನಾಡುತ್ತಿದ್ದರು.
ಧರ್ಮದರ್ಶಿ ಅಶೋಕ್ ಶೆಟ್ಟಿ ಮಾತನಾಡುತ್ತಾ ಕಳೆದ ನಾಲ್ಕು ದಿನದಿಂದ ನವರಾತ್ರಿ ವಜ್ರ ಮಹೋತ್ಸವ ಅಚರಣೆಯ ಸಾಂಸ್ಕೃತಿಕ ಕಾರ್ಯಕ್ರವು ಉತ್ತಮ ರೀತಿಯಲ್ಲಿ ಜರಗುತ್ತಿದ್ದು  ಕಾರ್ಯಕ್ರಮದ ಪ್ರಾಯೋಜಕರಿಗೆ, ಪ್ರೋತ್ಸಾಹಕರಿಗೆ ಮನದಾಳದ ವಂದನೆಗಳು ನಿಮ್ಮೇಲ್ಲರ ಸಹಕಾರ ಮುಂದೆಯೂ ಮಂಡಳಿಗೆ ಸದಾ ಇರಲಿ ಎಂದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಚಂದ್ರಹಾಸ್ ರೈ ದಂಪತಿಗಳನ್ನು  ನತ್ತು  ಸತೀಶ್ ಕೋಟ್ಯಾನ್ ದಂಪತಿಗಳನ್ನು ವೇದಿಕೆಯ ಮೇಲೆ ವಿಶೇಷವಾಗಿ ಸನ್ಮಾನಿಸಲಾಯಿತು.


ಆತ್ಮೀಕ ರೈ ಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಅಶೋಕ್ ದಾಸು ಶೆಟ್ಟಿ, ಗೋಪಾಲ ಕೆ. ಶೆಟ್ಟಿ, ಚಂದ್ರಹಾಸ್ ರೈ ದಂಪತಿ, ಮಮತಾ ಡೆಂಟಲ್ ಲ್ಯಾಬ್ ಸತೀಶ್ ಕೋಟ್ಯಾನ್ ದಂಪತಿ, ವಿಲಾಸಿನಿ ಶೆಟ್ಟಿ
ನವೀನ್ ಮತ್ತು ಮಿಹಿರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸ್ಥಳೀಯ ಹಾಗೂ ಇನ್ನಿತರ ಮರಾಠಿ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Related posts

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk

ವೈಭವದ ವಿಸರ್ಜನ ಮೆರವಣಿಗೆಯೊಂದಿಗೆ ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk

ಭಾರತ್ ಬ್ಯಾಂಕಿನ ಭಾಯಂದರ್ ಶಾಖೆಯಲ್ಲಿ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆ.

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk