ತುಳು-ಕನ್ನಡಿಗರನ್ನು ಒಂದೆ ವೇದಿಕೆಯಲ್ಲಿ ಒಗ್ಗೂಡಿಸಬೇಕೆಂಬ ಉದ್ದೇಶದಿಂದ ಇದೇ ಬರುವ ತಾ.10.11.2024 ರಂದು ಸಾಯಂಕಾಲ 5 ಗಂಟೆಯಿಂದ ಡೊಂಬಿವಲಿ ಪೂರ್ವದ ಶಿವಂ ಸಭಾಗ್ರಹದಲ್ಲಿ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5 ಗಂಟೆಯಿಂದ ತುಳು-ಕನ್ನಡಿಗರ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು ಕಾರ್ಯಕ್ರಮದ ನಂತರ ಸಹಬೋಜನ ವ್ಯವಸ್ಥೆಯನ್ನು ಅಯೋಜಿಸಲಾಗಿದೆ. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಬಿ.ಜೆ.ಪಿ.ದಕ್ಷಿಣ ಭಾರತೀಯ ಘಟಕ, ಡೊಂಬಿವಲಿಯ ಕಾರ್ಯಾದ್ಯಕ್ಷರಾದ ರತನ್ ಪೂಜಾರಿ ವಿನಂತಿಸಿದ್ದಾರೆ.
.
.
.
.
.