
ಅಂಧೇರಿ ಪಶ್ಚಿಮ ಸಾಕಿನಾಕ ,ಲೋಕಮಾನ್ಯ ತಿಲಕ್ ನಗರದ ಶ್ರೀ ಗುರುದೇವ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಡಿ.21 ರಿಂದ ಡಿ.24ರ ತನಕ ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರ :
ಡಿ 21 ಗುರುವಾರ ಸಂಜೆ 5 ಗಂಟೆಯಿಂದ 9 ರ ತನಕ ಪ್ರಿತೋದ್ದಾರ ,ವಾಸ್ತು ಹೋಮ, ಬಲಿ ಬಳಿಕ ಅನ್ನಸಂತರ್ಪಣೆ.
ಡಿ.22 ಕ್ಕೆ ಬೆಳ್ಳಿಗ್ಗೆ 5ರಿಂದ 9 – ಗಣಹೋಮ, ಪ್ರತಿಷ್ಠಾ, ದುರ್ಗಾ ಹೋಮ, ಪ್ರಸನ್ನ ಪೂಜೆ, ನಾಗ ಸೇವೆ, ಮದ್ಯಾಹ್ನ 1.30ರ ಬಳಿಕ ಅನ್ನಸಂತರ್ಪಣೆ. ನಂತರ 3ರಿಂದ ರಾತ್ರಿ 9 ರ ತನಕ ಭಜನೆ, ಬಳಿಕ ಅನ್ನಸಂತರ್ಪಣೆ.
ಡಿ.23ಕ್ಕೆ ಮದ್ಯಾಹ್ನ 12ರಿಂದ ರಾತ್ರಿ 9ಗಂಟೆ ವರೆಗೆ ವಿವಿಧ ಮಂಡಳಿಗಳ ಸದಸ್ಯರಿಂದ ಹರಿನಾಮ ಸಂಕೀರ್ತನೆ.
ಡಿ.24,ಆದಿತ್ಯವಾರ ಸಂಜೆ 5 ಗಂಟೆಯಿಂದ ಉದ್ಘಾಟನಾ ಸಮಾರಂಭ (ಗೌರವ ಅತಿಥಿ ಶಾಸಕ ದಿಲೀಪ್(ಮಾಮ)ಲಾಂಡೆ .
ರಮಾನಾಥ ಕೋಟ್ಯಾನ್ ಮತ್ತು ಪರಿವಾರದ ಪ್ರಯೋಜತ್ವದಲ್ಲಿ ಅನ್ನಸಂತರ್ಪಣೆ.
ಶ್ರೀ ಗುರುದೇವ ನಿತ್ಯಾನಂದ ಬಾಬಾ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠೆಯ ಪ್ರಯುಕ್ತ ನಡೆಯಲಿರುವ 4 ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಕ್ತ ವೃಂದದ ಪರವಾಗಿ ಶ್ರೀಮತಿ ರಾಜೇಶ್ವರಿ ಎಂ ಶೆಟ್ಟಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ : 8976800627 / 8655532067 / 9833966193
ಸಂಪರ್ಕಿಸಿ.