
ಮುoಬಯಿ ಮಹಾನಗರದ ಅನೇಕ ಪ್ರತಿಷ್ಠಿತ ಹಿರಿಯ ಸಾಮಾಜಿಕ ಸಂಘ – ಸಂಸ್ಥೆಗಳ ಪೈಕಿ, ಕನ್ನಡ ಸಂಘ ಸಾಂತಾಕ್ರೂಜ್ ಕೂಡಾ ಒಂದಾಗಿದೆ. ಈ ಸಂಘವು 1955ರಲ್ಲಿ ವಕೋಲ ಮಿತ್ರ ಮಂಡಳಿ ಎಂಬ ನಾಮದಡಿ ತಮ್ಮ
ಸೇವೆಯನ್ನು ಆರಂಭಿಸಿತು. 1964ರಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಎಂದು ನೋಂದಾಯಿಸಲ್ಪಟ್ಟಿತು. ಸಂಘಕ್ಕೆ ತನ್ನದೇ ಆದ ಸ್ವಂತ ಕಾರ್ಯಾಲಯದ ಕನಸು 2001ರಲ್ಲಿ ನನಸಾಯಿತು. ತುಳು – ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದ ಈ ಸಂಘವು ಸಾಂತಾಕ್ರೂಜ್ ಪರಿಸರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬರುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್
ಮಾಧ್ಯಮದ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ದತ್ತು ಸ್ವೀಕಾರ ಮತ್ತು ಅವರ ಎಸ್‌ಎಸ್‌ಸಿ ಆದನಂತರ ಐದು ವರ್ಷದ ಪದವಿ ಶಿಕ್ಷಣದ ವೆಚ್ಚವನ್ನು ಸಂಘವೇ ಭರಿಸುವ ಮೂಲಕ ಅನೇಕ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾಡಿರುವ ಕೀರ್ತಿಗೆ ಸಂಘವು ಪಾತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದ ಬಾಂಧವರಿಗೆ ವೈದ್ಯಕೀಯ ಶುಶ್ರೂಷೆಗಾಗಿ
ಶಾಶ್ವತ ಆರೋಗ್ಯ ನಿಧಿಯನ್ನು ಸಂಘವು ಸ್ಥಾಪಿಸಿದೆ. ಸಮಾಜಪರ ಸೇವೆಗಾಗಿ ಕೆಲವೊಂದು ಯೋಜನೆಗಳನ್ನು ಸಂಘವು ಹಮ್ಮಿಕೊಂಡಿದೆ. ಪ್ರಸ್ತುತ ಸಂಘವು 66ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಫೆ. 10ರ ಶನಿವಾರದಂದು ಅಪರಾಹ್ನ 2:00 ರಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 66ನೇ ವಾರ್ಷಿಕೋತ್ಸವ ಜರಗಲಿದೆ. ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಸುಜಾತ ಆರ್. ಶೆಟ್ಟಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಹರೀಶ್ ಜಿ. ಅಮೀನ್, ಅಧ್ಯಕ್ಷರು ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಡಾ. ಆರ್.ಕೆ. ಶೆಟ್ಟಿ, ಬಂಟರ ಸಂಘ ಮುಂಬಯಿಯ ಗೌ.ಪ್ರ. ಕಾರ್ಯದರ್ಶಿ ಮತ್ತು ಇಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೆöÊ.ಲಿ. ಇದರ ಸಿ.ಎಂ.ಡಿ, ಶ್ರೀ ಎನ್.ಟಿ. ಪೂಜಾರಿ, ಅಧ್ಯಕ್ಷರು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟಿç, ಶ್ರೀ ಅಶೋಕ್ ಪುರೋಹಿತ್, ಅಂತರಾಷ್ಟಿçÃಯ ಖ್ಯಾತಿಯ ಜ್ಯೋತಿಷ್ಯರು, ವಾಸ್ತು ತಜ್ಞರು, ಮತ್ತು ಶ್ರೀ ಸುಭಾಸ್ ಎಮ್. ಪೂಜಾರಿ, ಉದ್ಯಮಿ ಅವರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ಆರ್ಥಿಕ ನೆರವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಚಿಣ್ಣರ
ಬಿಂಬ ಸಂಸ್ಥೆಯ ರುವಾರಿಯಾದ ಶ್ರೀ ಪ್ರಕಾಶ್ ಭಂಡಾರಿಯವರನ್ನು ಸನ್ಮಾನಿಸಲಾಗುವುದು. ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2:00 ರಿಂದ ಸಂಘದ ಸದಸ್ಯರು ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ, ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸಾಯಂಕಾಲ 4:30ರಿಂದ ಸಭಾ ಕಾರ್ಯಕ್ರಮ ಹಾಗೂ ಸಾಯಂಕಾಲ 5:00 ರಿಂದ ಮನೋಹರ್ ಶೆಟ್ಟಿ ನಂದಳಿಕೆ ಅವರ ನಿರ್ದೇಶನದ “ಆಯಿನ ಆಂಡ್ ಬುಡ್ಡು ಬುಡ್ಲೆ” ಎಂಬ ತುಳು ನಾಟಕವನ್ನುಪ್ರದರ್ಶಿಸಲಿದ್ದಾರೆ.
ಸಂಘದ 66ನೇ ವಾರ್ಷಿಕೋತ್ಸವಕ್ಕೆ ತುಳು –ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಬೆಕಾಗಿ ಗೌರವ ಅಧ್ಯಕ್ಷರಾದ ಎಲ್.ವಿ. ಅಮೀನ್, ಅಧ್ಯಕ್ಷೆ ಸುಜಾತ ಆರ್. ಶೆಟ್ಟಿ,
ಉಪಾಧ್ಯಕ್ಷ ಭುಜಂಗ ಆರ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ. ಪೂಜಾರಿ, ಗೌ. ಪ್ರ. ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಿ. ರವೀಂದ್ರ ಅಮೀನ್, ಸಾಮಾಜಿಕ ಮತ್ತು ಸಾಂಸ್ಕöÈತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂಡಾ, ಕಾರ್ಯದರ್ಶಿ ಲಕ್ಷಿ÷್ಮÃ ಎನ್. ಕೋಟ್ಯಾನ್, ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ. ಕೋಟ್ಯಾನ್, ಕಾರ್ಯದರ್ಶಿ ಶಕಿಲಾ ಪಿ. ಶೆಟ್ಟಿ, ಸದಸ್ಯರುಗಳಾದ ಸಿಎ ಪ್ರಕಾಶ್ ಶೆಟ್ಟಿ, ಶಾಲಿನಿ ಜಿ.ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರಕಾಶ್ ಸಿ. ಶೆಟ್ಟಿ, ಉಷಾ
ವಿ.ಶೆಟ್ಟಿ, ಸುಜಾತ ಉಚ್ಚಿಲ್, ಸುಮ ಪೂಜಾರಿ, ಲಿಂಗಪ್ಪ ಬಿ. ಅಮೀನ್, ವಾಸುದೇವ ರಾವ್, ಆರ್.ಪಿ. ಹೆಗ್ಡೆ, ಸಂಪ ಲಕ್ಷ÷್ಮಣ್ ಬಿಲ್ಲವ, ಸುಮಿತ್ರಾ ದೇವಾಡಿಗ, ಶಶಿ ಶೆಟ್ಟಿ, ಮೋಹನ್ ಮಾರ್ನಾಡ್, ಲೀಲಾ ಎಸ್. ಸಾಲ್ಯಾನ್, ಶಿವರಾಮ ಕೋಟ್ಯಾನ್, ಸಲಹಾ ಸಮಿತಿಯ ಸದಸ್ಯರಾದ ಭೋಜ ಎನ್. ಶೆಟ್ಟಿ, ಬಿ.ಆರ್. ಪೂಂಜ, ಎನ್. ಎಂ. ಸನಿಲ್, ನಾರಾಯಣ ಎಸ್. ಶೆಟ್ಟಿ ಮೊದಲಾದವರು ಪ್ರತಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ