
ಥಾಣೆ ಪಶ್ಚಿಮದ ಓಧವ್ ಬಾಗ್ ಸಮೀಪದ ಕಿಸನ್ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಶನೀಶ್ವರ ದೇವರ ಆರಾಧನೆಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಶ್ರೀ ಶನೀಶ್ವರ ದೇವರ ಮಹಾಪೂಜೆಯು ಇದೆ ಫೆ.10ರ ಶನಿವಾರದಂದು, ಓಧವ್ ಬಾಗ್ ಹಾಲ್ ನ ಪಕ್ಕದಲಿರುವ ಓಧವ್ ಬಾಗ್ ಮೈದಾನದಲ್ಲಿ, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಪೋರ್ಟ್ ಇವರ ಮಾರ್ಗದರ್ಶನದಲ್ಲಿ ಜರಗಲಿದೆ.
ಕಾರ್ಯಕ್ರಮದ ವಿವರ :
ಬೆಳ್ಳಿಗ್ಗೆ 7 ಗಂಟೆಗೆ – ಗಣಹೋಮ
ಬೆಳ್ಳಿಗೆ 10.30ಕ್ಕೆ – ಮೆರವಣಿಗೆ (ಶ್ರೀ ಅಯ್ಯಪ್ಪ ಶಿಬಿರದಿಂದ ಪೂಜಾ ಸ್ಥಳಕ್ಕೆ )
12.00ಗಂಟೆಗೆ ಕಲಶ ಪ್ರತಿಷ್ಠೆ.
ಮಧ್ಯಾಹ್ನ 1.30ರಿಂದ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಫೋರ್ಟ್ ಇವರ ಮಾರ್ಗದರ್ಶನದಲ್ಲಿ ಮುಂಬೈಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ತಾಳ ಮದ್ದಳೆ ರೂಪದಲ್ಲಿ ಗ್ರಂಥ ಪಾರಾಯಣ.
ಸಂಜೆ 7.30ಕ್ಕೆ – ಭಜನೆ
ಗಂಟೆ 8ಕ್ಕೆ ಮಹಾ ಆರತಿ
ರಾತ್ರಿ 8.30ರಿಂದ ತೀರ್ಥ ಪ್ರಸಾದ, ಅನ್ನ ಮಹಾಪ್ರಸಾದ ವಿತರಣೆ.
ವಿ. ಸೂ : (1) ಮಹಾಪೂಜೆಗೆ ಧನ,ಧಾನ್ಯ ಮತ್ತು ಹಸಿರು ವಾಣಿ ಸೇವೆಯನ್ನು ಸ್ವೀಕರಿಸಲಾಗುವುದು.
2) ಶ್ರೀ ಶನಿ ಪೂಜೆ ಮಾಡಲಿಚ್ಚಿಸುವವರು ರೂಪಾಯಿ 351/ ನ್ನು ಮುಂಗಢವಾಗಿ ಕೊಟ್ಟು ತಮ್ಮ ಹೆಸರನ್ನು ನೋಂದಾಯಿಸಿ ರಶೀದಿ.ಪಡೆಕೊಳ್ಳಬೇಕಾಗಿ ವಿನಂತಿ.
ಶ್ರೀ ಶನಿಶ್ವರ ದೇವರ ಮಹಾಪೂಜೆಯಲ್ಲಿ ತಾವೆಲ್ಲರೂ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಶನಿ ದೇವರ ಮತ್ತು ಶ್ರೀ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪರವಾಗಿ ಕಾರ್ಯಕಾರಿ ಸಮಿತಿ, ಉಪ ಸಮಿತಿ, ಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸರ್ವ ಸದಸ್ಯರು ಪ್ರಕಟಣೆ ಮೂಲಕ ಕೇಳಿ ಕೊಂಡಿದ್ದಾರೆ.