April 2, 2025
ಮುಂಬಯಿ

ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವ

ಮಹಾನಗರದ ಮಿನಿ ತುಳುನಾಡು ಎಂದೇ ಖ್ಯಾತಿಯ
ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬಾ ಮಂದಿರದ ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವವು ಮಾರ್ಚ್ 9 ರಿಂದ 11 ರ ವರಗೆ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ರಘುಪತಿ ಭಟ್ ಇವರ ನೇತೃತ್ವದಲ್ಲಿ ಜರಗಿತು.

ಮಾರ್ಚ್ 8 ರ ಶುಕ್ರವಾರ ಮಹಾ ಶಿವರಾತ್ರಿ ಮಹೋತ್ಸವವು ಜರಗಿತು. ಈ ದಿನ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ಬೆಳಿಗ್ಗೆ 8.00 ರಿಂದ ಸಾಯಂಕಾಲ 8.00 ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಭಜನೆ ನಡೆದು ರಾತ್ರಿ ಮಹಾಮಂಗಳಾರತಿ ನಡೆಯಿತು, ನಂತರ ನೆರೆದಿದ್ದ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.

ಮಾರ್ಚ್ 9 ರ ಶನಿವಾರ: ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹವಾಚನ, ತೋರಣ ಮುಹೂರ್ತ, ಗಣಪತಿ ಹೋಮ ಹಾಗೂ ನವಗ್ರಹಯುಕ್ತ ಶನಿಶಾಂತಿ ನಡೆದು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಮಹಾಮಂಗಳಾರತಿ, ನಡೆಯಿತು.

ನಂತರ ಮಂಡಲಿಯ ಸದಸ್ಯರಾದ ಶ್ರೀ ಸುರೇಶ ಟಿ, ಅಂಚನ್‌ರವರ ಹಸ್ತದಿಂದ ಕಲತ ಪ್ರತಿಷ್ಠಾಪನೆ ನೆರವೇರಿ,
ಶನಿಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ನಡೆಯಿತು.

ಮುಂಬಯಿಯ ಪ್ರಸಿದ್ಧ ಗ್ರಂಥ ವಾಚಕರುಗಳಾದ ಲಕ್ಷ್ಮಣ್ ಚಿತ್ರಾಪು, ಪ್ರಕಾಶ್ ಭಂಡಾರಿ, ಚಂದ್ರಹಾಸ್ ರೈ, ವಾಸು ಮೊಗವೀರ, ನಾರಾಯಣ ಸುವರ್ಣ, ಸಂಜೀವ ಪಾಲನ್, ಜಯ ಶೆಟ್ಟಿ ಅಜೆಕಾರು, ರಾಜೇಶ್ ಕೋಟ್ಯಾನ್, ಪುರಂದರ ಪೂಜಾರಿ, ಅರ್ಥಧಾರಿಗಳಾದ ನಾರಾಯಣ ಹಂಡ, ಕಿಶೋರ್ ಸಾಲ್ಯಾನ್, ವಾಸು ಪೂಜಾರಿ, ಚಂದ್ರಶೇಖರ್, ಅಶೋಕ್ ಶೆಟ್ಟಿ, ಪ್ರಕಾಶ್ ಭಟ್, ಸೋಮನಾಥ್ ಪೂಜಾರಿ, ಶೇಖರ್ ಮೆಂಡನ್, ಉದಾಯನಂದ್ ಕರುಣಕರ್, ಎಮ್ ಎಸ್ ಕೋಟ್ಯಾನ್, ಸುರೇಶ್ ಅಂಚನ್, ನಾಗೇಶ್ ಸುವರ್ಣ, ಭಾಗವತರುಗಳಾದ ಸತೀಶ್ ಪೂಜಾರಿ, ಮೋಹನ್ ದಾಸ್ ರೈ,ಜಗದೀಶ್ ನಿಟ್ಟೆ, ಹಿಮ್ಮೇಳ ಕಲಾವಿದರುಗಳಾಗಿ ಚಂದ್ರಹಾಸ್ ರೈ, ಸುರೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಭವನ್ ಶೆಟ್ಟಿ ಪಾಲ್ಗೊಂಡಿದ್ದರು.

ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ನಡೆದು ಮಹಾಮಂಗಳಾರತಿ ನಡೆಯಿತು.

ನಂತರ ಭಜನೆ ನಡೆದು, ಶ್ರೀ ಶನೀಶ್ವರ ದೇವರಿಗೆ ಮಹಾ ಮಂಗಳಾರತಿ ಬೆಳಗಲಾಯಿತು.

ಪೂಜಾ ವಿಧಿಯಲ್ಲಿ ಕಿಶೋರ್ ಸಾಲ್ಯಾನ್ ಸಹಕರಿಸಿದರು.

ನೂರಾರು ಭಕ್ತರು ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಮಾರ್ಚ್ 10 ರ ರವಿವಾರ : ಬೆಳಿಗ್ಗೆ ಶ್ರೀದೇವಿ ಸನ್ನಿಧಿಯಲ್ಲಿ 25 ಕಲಶದ ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಹಾಗೂ ಕಲಶಾಭಿಷೇಕ ನಡೆಯಿತು

ಶ್ರೀ ಜಗದಂಬಾ ದೇವಿಗೆ ಮಹಾಮಂಗಳಾರತಿ ನಡೆದು ಉತ್ಸವ ಬಲಿ ನಡೆಯಿತು.

ನಂತರ ಶೋಭಾಯಾತ್ರೆ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ , ಪಲ್ಲ ಪೂಜೆ ನಡೆಯಿತು.

ರಾಜಕೀಯ ಮುಖಂಡರು, ಸಮಾಜ ಸೇವಕರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಸಂಸ್ಥೆಗಳ ಕಾರ್ಯಕರ್ತರು ಹಾಗೂ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಮಹಾ ಪ್ರಸಾದ ಸ್ವೀಕರಿಸಿದರು.

ಸಾಯಂಕಾಲ ಕುಂಕುಮಾರ್ಚನೆ ಮಹಾಪೂಜೆ ಹಾಗೂ ರಾತ್ರಿ ರಂಗಪೂಜೆ, ನಡೆಯಿತು.

ಸಂಜೆ ಪ್ರವೀಣ ಶೆಟ್ಟಿ, ಪುಣೆ ಇವರ ಪ್ರಯೋಜಕತ್ವದಲ್ಲಿ, ಮನೋಜ್ ಕುಮಾರ್ ಯಜಮಾಡಿಯವರ ನಿರ್ದೇಶನ ದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ ಹಾಗೂ ಅತಿಥಿ ಕಲಾವಿದರಿಂದ “ಕೊರ್ದಬ್ಬು ಬಾರಗ” ತುಳು ಯಕ್ಷಗಾನ ಬಯಲಾಟ ನಡೆಯಿತು.

ಯಕ್ಷಗಾನದ ಮಧ್ಯಂತರದಲ್ಲಿ ನಡೆದ ಕಿರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನದ ಪ್ರಾಯೋಜಕರಾದ ಶ್ರೀ ಪ್ರವೀಣ ಶೆಟ್ಟಿ, ಪುಣೆ ಇವರನ್ನು ಅತಿಥಿ ಅಭ್ಯಗತರ ಸಮ್ಮುಖದಲ್ಲಿ ಶ್ರೀ ಜಗದಂಬ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನಿತರು ಸನ್ಮಾನಕ್ಕೆ ಧನ್ಯವಾದ ಸಮರ್ಪಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ACP ಸುನಿಲ್ ಕುರಾಡೆ,
ಶಹಾಡ್ ಮೂಕಾಂಬಿಕಾ ಮಂದಿರದ ಮಾಜಿ ಅಧ್ಯಕ್ಷರಾದ
ಕರುಣಾಕರ ಶೆಟ್ಟಿ, ಜಗದಂಬಾ ಮಂದಿರದ ಉಪಾಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಮಂದಿರದ ಅಧ್ಯಕ್ಷರಾದ ದಿವಾಕರ್ ರೈ ಅಧ್ಯಕ್ಷೀಯ ನುಡಿಗಳನ್ನಡಿದರು.

ವೇದಿಕೆಯಲ್ಲಿ ಮಂದಿರದ ಗೌರವ ಅಧ್ಯಕ್ಷರಾದ ಹರೀಶ್ ಡಿ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ರೈ, ಉಪಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ಕಾರ್ಯದರ್ಶಿ ಯವರದ ರಾಜೇಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿಯವರಾದ ಸಂತೋಷ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷ ರಾದ ವಿಜಯ್ ಶೆಟ್ಟಿ ಸಜಿಪಗುತ್ತು, ಕಲಾಪೋಷಕರಾದ ದಿನೇಶ್ ಪೂಜಾರಿ, ಉಡುಪಿ, ಶಹಾಡ್ ಮೂಕಾಂಬಿಕಾ ಮಂದಿರದ ಮಾಜಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ಶಿವಸೇನಾ ದಕ್ಷಿಣ ಭಾರತೀಯ ಘಟಕದ ಥಾಣೆ ಜಿಲ್ಲೆಯ ಮಹಿಳಾ ಕಾರ್ಯಾಧ್ಯಕ್ಷೆಯವರಾದ ಅನುಪಮ ಶೆಟ್ಟಿ, ಉಪಸ್ಥಿತರಿದ್ದರು.

ಜೊತೆ ಕಾರ್ಯದರ್ಶಿಯವರಾದ ಸಚಿನ್ ಪೂಜಾರಿ ಫಲಿಮಾರು ಹಾಗೂ ಶಿಲ್ಪಾ ಸಂತೋಷ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು.

ಮಾರ್ಚ್ 11 ರ ಸೋಮವಾರ ಬೆಳಿಗ್ಗೆ ಬಿಂಬ ಶುದ್ಧೀಕರಣ ಪೂಜೆ, ಕಲಶಭಿಷೇಕ, ಪ್ರಧಾನ ಹೋಮ ಮಹಾಪೂಜೆ ನಡೆಯಿತು.

ಈ ಎಲ್ಲಾ ಕಾರ್ಯಕ್ರಮಗಳು ಗೌರವಾಧ್ಯಕ್ಷರಾದ ಹರೀಶ್‌ ಡಿ. ಶೆಟ್ಟಿ, ಅಧ್ಯಕ್ಷರಾದ ದಿವಾಕರ ಜಿ. ರೈ, ಉಪಾಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ರಾಜೇಶ ಸಿ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಸಚೀನ ಎಸ್‌. ಪೂಜಾರಿ ಫಲಿಮಾರು, ಕೋಶಾಧಿಕಾರಿ ರವಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಸಂತೋಷ ಎಮ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾದ ವಿಜಯ್ ಶೆಟ್ಟಿ ಸಜಿಪ ಗುತ್ತು ಹಾಗೂ ಕಾರ್ಯಕಾರಿ ಸಮಿತಿ, ಶನಿಪೂಜೆ ಸಮಿತಿ, ಮಹಿಳಾ ಸದಸ್ಯರು ಹಾಗೂ ಯುವ ಸದಸ್ಯರ ಸಹಕಾರ ದಿಂದ ಸುಸಂಗವಾಗಿ ನೆರವೇರಿತು.

Related posts

ಕುಲಾಲ ಸಂಘ ಮುಂಬಯಿ  ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ

Mumbai News Desk

ಪೋರ್ಟ್ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ ಗಣೇಶ್ ಉತ್ಸವ ಸಂಭ್ರಮ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ರಾವಲ್ ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ,

Mumbai News Desk

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಮಹಾರಾಷ್ಟ್ರ ಘಟಕ, ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥಾ, ( ರಿ.) ಮುಂಬೈ ಇದರ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ.

Mumbai News Desk