April 1, 2025
ಪ್ರಕಟಣೆ

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

ನಲಾಸೋಪರ: ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಕರ ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು,  ವಾರ್ಷಿಕ ವಿಧವಾ ವೇತನ,  ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ  ಆರ್ಥಿಕ ಧನ ಸಹಾಯ ವಿತರಣೆಯು ಜೂನ್  ತಿಂಗಳಲ್ಲಿ ನಡೆಯಲಿದೆ.  

ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ  ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಮಂಜುನಾಥ ಎನ್ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ- ಶ್ರಿಯುತಿ ಜಯ ಅಶೋಕ್ ಶೆಟ್ಟಿ ಇವರ ಮುಂದಾಳತ್ವದಲ್ಲಿ ಇದೇ ಬರುವ ಮಾ. 24ರ ಶರವಿವಾರದಂದು  

 ರಿಜೆನ್ಸೀ ಬ್ಯಾಂಕ್ವೆಟ್ ಸಭಾಂಗಣ, ಎವರ್ಶೈನ್ ಸರ್ಕಲ್ ಬಳಿ, 90 ಫೀಟ್ ಮಾರ್ಗ, ನಲ್ಲಸೋಪಾರ ಪೂರ್ವ ಇಲ್ಲಿ ಬೆಳಿಗ್ಗೆ 10.30 ರಿಂದ ಮದ್ಯಾಹ್ನ  ಗಂಟೆ 2:00 ತನಕ  ನಡೆಯಲಿರುವುದು.

ಈ ಪ್ರಯುಕ್ತ ಇದರ ಲಾಭವನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಾಯ ಧನ ವಿತರಣೆಯ ಲಾಭವನ್ನು ಪಡೆದು ಕೊಳ್ಳ ಬಹುದು. 

ಅರ್ಜಿಯನ್ನು ಪಡೆಯಲಿಚ್ಚಿಸುವ ಸಮಾಜ ಬಾಂಧವರು ತಮ್ಮ (1) ಬಂಟರ ಸಗಂದ ಗುರುತು ಪತ್ರ, (2) ಆಧಾರ್ ಕಾರ್ಡ್ ಪ್ರತಿಯೊಂದಿಗೆ, (3) ಮನೆಯ ವಿದ್ಯುತ್ ಬಿಲ್ ಪ್ರತಿ, (4) ಮಕ್ಕಳ ಇತ್ತೀಚಿನ ಶಾಲಾ ದಾಖಲೆ (ಮಾರ್ಕ್ಸ್ ಕಾರ್ಡ್), (5) ಭಾವ ಚಿತ್ರ, (6) ವಿಧವಾ ವೇತನ ಮತ್ತು (7) ವಿಕಲಾಂಗ ಚೇತನದ ಲಾಭ ಪಡೆಯಲಿಚ್ಚಿಸುವ ಸಮಾಜ ಬಾಂಧವರು ಸಂಭಂದ ಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗ್ತೀಕರಿಸರಬೇಕು. 

ಅರ್ಜಿ ಪಡೆಯಲಿಚ್ಚಿಸುವ ಅರ್ಜಿದಾರರು ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವವನ್ನು ಹೊಂದಿರಬೇಕು. ಮಾತ್ರವಲ್ಲದೆ ಸದಸ್ಯತನದ ಪ್ರತಿಯನ್ನು ಅರ್ಜಿಯಲ್ಲಿ ಲಗ್ತೀಕರಿಸ ತಕ್ಕದ್ದು. ಅರ್ಜಿಯನ್ನು ಕೇವಲ ವಿದ್ಯಾರ್ಥಿಗಳಿಗೆ, ವಿಧವೆಯವರಿಗೆ, ವಿಕಲಾಂಗ ಚೇತನರಿಗೆ ಸ್ವತಃ ಯಾ ಅವರವರ ಮಾತಾ ಪಿತೃರ ಯಾ ಪೋಷಕರಿಗೆ ಮಾತ್ರ ನೀಡಲಾಗುವುದು. 

ಹೆಚ್ಚಿನ ವಿವರಗಳಿಗಾಗಿ ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಎನ್ ಶೆಟ್ಟಿ (93234 06151), ಸಂಚಾಲಕ, ಹರೀಶ್ ಪಾಂಡು ಶೆಟ್ಟಿ (88068 29005), ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ (75079 98679), ಕಾರ್ಯದರ್ಶಿ ಜಗನ್ನಾಥ ಡಿ ಶೆಟ್ಟಿ (90044 39404), ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಉಮಾ ಸತೀಶ್ ಶೆಟ್ಟಿ (98233  46096), ಯುವ ವಿಭಾಗದ ಕಾರ್ಯಾಧ್ಯಕ್ಷೆ ಕುಮಾರಿ ವರ್ಷ ಶೇಖರ್ ಶೆಟ್ಟಿ (95817 53487) ಅಲ್ಲದೆ ಇನಿತರ ಪದಾಧಿಕಾರಿಯವರನ್ನು ಅಥವ ಕಾರ್ಯಕಾರಿಣಿ ಸದಸ್ಯರನ್ನು ಸಂಪರ್ಕಿಸಬಹುದು.

Related posts

  ನ 14 ರಂದು ಡೊಂಬಿವಲಿ  ಶ್ರೀ ಜಗದಂಬ  ಮಂದಿರದಲ್ಲಿ ದೀಪೋತ್ಸವ

Mumbai News Desk

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ನ. 30 ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ “ಕುಲದೈವೋ ಬ್ರಹ್ಮ” ಯಕ್ಷಗಾನ ಪ್ರದರ್ಶನ

Mumbai News Desk

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk