
ಮುಂಬಯಿ : ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದರ ಸೇವಾದಳದ ಕಾರ್ಯಧ್ಯಕ್ಷ, ಹೋಟೆಲ್ ಉದ್ಯಮಿ, ನಾಗೇಶ್ ಎಂ ಕೋಟ್ಯಾನ್ ಇಂದು ರಾತ್ರಿ (ಮೇ.19)ಹೃದಯಘಾತದಿಂದ ನಿಧನ ಹೊಂದಿದರು.
ಮೂಲತಃ ಬಂಟ್ವಾಳ, ಪರಂಗಿಪೇಟೆಯವರಾಗಿದ್ದ ನಾಗೇಶ್ ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರನ್ನು, ಮೂವರು ಸಹೋದರರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವರು.
ಮುಂಬಯಿ ಬಿಲ್ಲವರ ಪ್ರತಿಷ್ಟಿತ ಸಂಘಟನೆ ಬಿಲ್ಲವರ ಎಸೋಸೋಸಿಯೇಶನ್ ನ ಸಕ್ರಿಯ ಸದಸ್ಯರಾಗಿದ್ದ ಅವರು ಯುವ ಅಭ್ಯುದಯ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು, ಪ್ರಸ್ತುತ ಸೇವಾದಳದ ಕಾರ್ಯಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದರು.
ಸದಾ ನಗುಮುಖದ, ಸರಳ, ಮೃದು ಸ್ವಭಾವದವರಾಗಿದ್ದ ಅವರು ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಅವರ ಅಂತ್ಯಕ್ರಿಯೆ ನಾಳೆ, ಮೇ.20ರಂದು ಪರಂಗಿಪೇಟೆಯ ಸ್ವಗ್ರ ಹದಲ್ಲಿ ನಡೆಯಲಿದೆ.
ನಾಗೇಶ್ ಅವರ ನಿಧನಕ್ಕೆ ಬಿಲ್ಲವರ ಎಸೋಸಿಯೇಶನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್ ಹಾಗೂ ಪದಾಧಿಕಾರಿಗಳು, ಉಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಹಾಗೂ ನಿರ್ದೇಶಕರುಗಳು, ಜಯ ಸುವರ್ಣ ಅವರ ಅಭಿಮಾನಿಗಳು ಮತ್ತು ಬಿಲ್ಲವರ ಹಿತ ಚಿಂತಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.