ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್ ಇದರ 24/25 ನೇ ವರ್ಷದ ಯಕ್ಷಗಾನ ತರಬೇತಿ ಶಿಬಿರ ಹಾಗೂ ಯಕ್ಷಗಾನ ಮುಹೂರ್ತ ಕಾರ್ಯಕ್ರಮವು ರಿಜನ್ಸಿ ಬ್ಯಾಂಕ್ವಿಟ್ ಹಾಲ್ ಫೈರ್ ಬ್ರಿಗೇಡ್ ಹತ್ತಿರ ನಾಲಾಸೋಪಾರ ಇಲ್ಲಿ ಜು 07 ರವಿವಾರ ಸಾಯಂಕಾಲ 6:00 ಗಂಟೆಗೆ ನಡೆಯಲಿದೆ,
ಶ್ರೀದೇವಿ ಯಕ್ಷಕಲ ನಿಲ ಯದ ಅಧ್ಯಕ್ಷರು ಶಶಿಧರ ಕೆ ಶೆಟ್ಟಿ ಇನ್ನಂಜೆಯವರ ಅದ್ಯಕ್ಷತೆಯಲ್ಲಿ,ಈ ವರ್ಷದ ಸಾಲಿನ ತರಬೇತಿ ಶಿಬಿರ ಹಾಗೂ ಯಕ್ಷಗಾನ ಮುಹೂರ್ತ ಕಾರ್ಯಕ್ರಮ ನೆರವೇರಲಿದ್ದು,
ಹೊಸದಾಗಿ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛೆಸುವ ಬಾಲ ಕಲಾವಿದರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಅಂದಿನ ಸಭೆಯಲ್ಲಿ, ಶ್ರೀದೇವಿ ಯಕ್ಷಕಲಾ ನಿಲಯ ವಿರಾರ್ ನಾಲಾಸೋಪಾರ, ಹಾಗೂ ಸಂಸ್ಥೆಯ ಎಲ್ಲಾ ವಿಭಾಗದ ಬಾಲ ಕಲಾವಿದರು ಹಾಗೂ ಹಾಗೂ ಕಲಾವಿದ ಮಕ್ಕಳ ಪೋಷಕರು ಹಾಜರಿರಬೇಕಾಗಿ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರ್ ವಿನಂತಿಸಿಕೊಂಡಿದ್ದಾರೆ.