
ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರುಪೂರ್ಣಿಮೆಯ ನಿಮಿತ್ತ ರವಿವಾರ ದಿನಾಂಕ 21-07-2024 ರಂದು ಬೆಳ್ಳಿಗೆ 9.30 ರಿಂದ ಮದ್ಯಾಹ್ನ 12 ರ ತನಕ ವಿಶೇಷ ಭಜನಾ ಕಾರ್ಯಕ್ರಮ, ತದನಂತರ ವಿಶೇಷ ಗುರುಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ಹಾಗು ಅನ್ನ ಪ್ರಸಾದ ಜರಗಲಿದೆ. ಡೊಂಬಿವಲಿ ಪರಿಸರದ ಸಮಾಜ ಬಾಂಧವರು , ಹಿತೈಸಿಗಳು, ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥಪ್ರಸಾದ ಸ್ವೀಕರಿಸಿ , ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕಾಗಿ ಗೌರವ ಕಾರ್ಯಾಧ್ಯಕ್ಷರು , ಕಾರ್ಯಾಧ್ಯಕ್ಷರು , ಉಪ ಕಾರ್ಯಾಧ್ಯಕ್ಷರು , ಗೌವರ ಕೋಶಾಧಿಕಾರಿ , ಗೌರವ ಕಾರ್ಯದರ್ಶಿ ಹಾಗು ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.
ಸರ್ವರಿಗೂ ಆದರದ ಸ್ವಾಗತ…..