24.7 C
Karnataka
April 3, 2025
ಮುಂಬಯಿ

ಮುಂಬಯಿ ಕನ್ನಡ ಸಂಘದ ವತಿಯಿಂದ ಕನ್ನಡ ಮಾಧ್ಯಮದ ಮಕ್ಕಳಿಗೆ ಧನ ಸಹಾಯ ವಿತರಣೆ



ಮಾಟುಂಗಾ [ಪೂರ್ವ]ದ ಮುಂಬಯಿ ಕನ್ಡಡ ಸಂಘದ ವತಿಯಂದ ಪ್ರತಿ ವರ್ಷವೂ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮುಂಬಯಿಯ ಕನ್ನಡ ಮಾಧ್ಯಮದ ಒಂದು ಶಾಲೆಗೆ ಧನ ಸಹಾಯವನ್ನು ನೀಡಲಾಗುತ್ತಿದ್ದು ಈ ವರ್ಷ ಇದಕ್ಕಾಗಿ ಮುಂಬಯಿಯ ಪಶ್ಚಿಮ ಉಪನಗರದ ಖಾರ್‌ ದಾಂಡಾದ ಮುನಿಸಿಪಲ್‌ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಆಯ್ಕೆ ಮಾಡಲಾಗಿದೆ.

ಮುಂಬಯಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌.ಕರ್ಕೇರ, ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಡಿಗೇರ ಹಾಗೂ ಸಮಿತಿ ಸದಸ್ಯ ನಾರಾಯಣ ರಾವ್‌ ಈ ಧನ ಸಹಾಯದ ಹಣವನ್ನು ಶಾಲೆಯ ಹಿರಿಯ ಶಿಕ್ಷಕ ಶಿವಾನಂದ ಪೋದ್ದಾರ ಇವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾಶಾಲಿ ವಿದ್ಯಾರ್ಥಿನಿ ಅದಿತಿ ಪವಾರ್‌ರಿಗೆ ಸೋಮನಾಥ ಎಸ್‌.ಕರ್ಕೇರ ಮತ್ತು ವಿಧ್ಯಾರ್ಥಿ ಸಚಿನ್‌ ಚವಾಣ್‌ರಿಗೆ ಮಲ್ಲಿಕಾರ್ಜುನ ಬಡಿಗೇರರ ವತಿಯಿಂದ ಪ್ರೋತ್ಸಾಹಕ ಧನವನ್ನು ಕೂಡಾ ನೀಡಲಾಯ್ತು. ಬಳಿಕ ಶಾಲೆಯ ಸ್ಥಿತಿಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಲಾಯ್ತು.

Related posts

ಮುಂಬೈ : ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

Mumbai News Desk

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ತುಳು ಸಂಘ ಬೊರಿವಲಿ, 14ನೇ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಹರೀಶ್ ಮೈಂದನ್

Mumbai News Desk

ಕುಲಾಲ ಸಂಘ ಮುಂಬಯಿ, ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಮಿಲನ

Mumbai News Desk

ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದೇಗುಲ ದರ್ಶನ.

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk