
ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ, ಇದರ ವಾರ್ಷಿಕ ವಿಹಾರಕ್ಕೂಟವು ಜನವರಿ 25 ಮತ್ತು 26ರಂದು ಎರಡು ದಿನಗಳ ಕಾಲ ನ್ಯೂ ಮುಂಬೈ, ಪನ್ವೆಲ್ ಮಾನ್ಸಿ ಫಾರ್ಮ್ ಅಂಡ್ ರೆಸಾರ್ಟ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮೊದಲಿಗೆ ದೇವತಾ ಪ್ರಾರ್ಥನೆಯಲ್ಲಿಗೆ ಮಹಿಳಾ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು. ಆ ಬಳಿಕ ಸದಸ್ಯರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸಂಘದ ಸದಸ್ಯರು, ಮಹಿಳಾ ಸದಸ್ಯರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸದಸ್ಯರಾದ ಪ್ರಮೋದ್ ಮೆಂಡನ್ ಮತ್ತು ತೇಜಪಾಲ್ ಪುತ್ರನ್ ಆಟೋಟ ಮತ್ತು ಇತರ ಸ್ಪರ್ಧೆಗಳನ್ನು ನಡೆಸಿಕೊಟ್ಟರು, ಮತ್ತು ವಿಹಾರಕೂಟದ ಯಶಸ್ವಿಗೆ ಸಹಕರಿಸಿದರು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಅಧ್ಯಕ್ಷರಾದ ಮಾಧವ ಟಿ ಪುತ್ರನ್ ಮಾತನಾಡಿ ಸಭೆಯ ಮುಂದಿನ ದೇಯೋದ್ದೇಶದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಸಭೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಹಿಳಾ ಮತ್ತು ಯುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು. ಹಿರಿಯ ಸದಸ್ಯರಾದ ನ್ಯಾಯವಾದಿ ಕೃಷ್ಣರಾಜ ಆರ್ ಕೋಟ್ಯಾನ್, ಜನಾರ್ಧನ್ ಮೆಂಡನ್, ನಳಿನಿ ಕರ್ಕೆರ ಅವರು ಯೋಗ್ಯ ಸಲಹೆ, ಸೂಚನೆ ನೀಡಿದರು.ಕೊನೆಗೆ ವಂದನಾರ್ಪಣೆಯೊಂದಿಗೆ ವಿಹಾರ ಕೂಟವನ್ನು ಮುಕ್ತಾಯಗೊಳಿಸಲಾಯಿತು.
ಸಂಘದ ಸದಸ್ಯರು, ಮಹಿಳಾ ಸದಸ್ಯರು ಮತ್ತು ಮಕ್ಕಳು ತುಂಬಾ ಉತ್ಸಾಹದಿಂದ ವಿಹಾರ ಕೂಟದಲ್ಲಿ ಭಾಗವಹಿಸಿದ್ದರು.