
ಅರಸಿನ ಕುಂಕುಮ ಸನಾತನ ಸಂಸ್ಕೃತಿ:.ಶಾಲಿನಿ ಸತೀಶ್ ಶೆಟ್ಟಿ
ಕುಲಾಲ ಸಂಘ ಮುಂಬಯಿ ಇದರ
ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಭಜನೆ ಮತ್ತು ಹಳದಿ ಕುಂಕುಮ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರಘು ಮೂಲ್ಯರವರ ಘನ ಅಧ್ಯಕ್ಷತೆಯಲ್ಲಿ , ಗೌ ಅಧ್ಯಾಕ್ಷರಾದ ದೇವದಾಸ್ ಕುಲಾಲ್,ಕಾರ್ಯಾಧ್ಯಕ್ಷರಾದ ಸದಾನಂದ ಕುಲಾಲ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್,ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷೆ ಬೇಬಿ ಬಂಗೇರರವರ ಉಪಸ್ಥಿತಿಯಲ್ಲಿ , ಫೆಬ್ರವರಿ 15ರಂದು ಶನಿವಾರ ಸಂಜೆ ವಾಶಿ ಕನ್ನಡ ಸಂಘದ ಸಭಾಗ್ರಹದಲ್ಲಿ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಿನಿ ಸತೀಶ್ ಶೆಟ್ಟಿ, ನಮ್ರತಾ ಜಗದೀಶ್ ಬಂಜನ್ ಅಂಬಾರ್ ನಾಥ್, ಜೊತೆ ಕಾರ್ಯಾಧ್ಯಕ್ಷೆ ಶೋಭ ಏನ್ ಬಂಗೇರ , ಕಾರ್ಯದರ್ಶಿಉಷಾ ಆರ್ ಮೂಲ್ಯರವರು ಉಪಸ್ಥಿತರಿದ್ದು, ಸುನೀತಾ ಮೂಲ್ಯ ,ಶಕುಂತಲಾ ಬಂಜನ್ ,ರೇಖ ಮೂಲ್ಯರವರ ದೇವರ ಪ್ರಾರ್ಥನೆಯೊಂದಿಗೆ ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬೇಬಿ ಬಂಗೇರರವರು ಗಣ್ಯರನ್ನು ಸ್ವಾಗತಿಸಿದರು. ಉಷಾ ಆರ್ ಮೂಲ್ಯ ವರದಿ ವಾಚಿಸಿದರು.

ಅಧ್ಯಕ್ಷ ಸ್ಥಾನವನ್ನು ವಹಿಸಿದ ರಘು ಮೂಲ್ಯರವರು ಮಾತಾಡುತ್ತಾ ನಮ್ಮ ನವಿ ಮುಂಬಯಿಯಲ್ಲಿ ಆಗುವ ಪ್ರತಿಯೊಂದೂ ಕಾರ್ಯಕ್ರಮಕ್ಕೆ ಮುಂಬಯಿಯಂತಹ ಯಾಂತ್ರಿಕ ಬದುಕಿನಲ್ಲಿ ದೈನಂದಿನ ತಾಪತ್ರಯಗಳಲ್ಲಿ ಕಳೆದು ಹೋಗದೆ ಯಶಸ್ಸು ಬಂದಾಗ ಹಿಗ್ಗದೆ , ಸoವೇದನಶೀಲಾದಿಂದ ಸಂಘದ ಕಮಿಟಿ ಸದಸ್ಯರು , ಎಲ್ಲ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯರೂ ಹಾಗೂ ಯುವ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿಯಲ್ಲಿರುತ್ತಾರೆ, ಇದು ನಮ್ಮ ಭಾಗ್ಯ ಎನ್ನ ಬಹುದು. ನಮ್ಮ ದೊಡ್ಡ ಅಸ್ತಿ ಎಂದರೆ ಅದು ಯುವ ವಿಭಾಗ, ಹೀಗೇನೇ ಪ್ರತಿಯೊಂದೂ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕು.ಪ್ರಸ್ತುತ ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದ ಹತ್ತಿರ ಇರುವ ಕುಲಾಲ ಭವನ ಮೇ ತಿಂಗಳಲ್ಲಿ ಲೋಕಾರ್ಪಣೆಯಾಗುವ ಅಂದಾಜಿನಲ್ಲಿ ಇದೆ. ನಮ್ಮ ಸಂಘದ ಭವನ ನಿಧಿಗೆ ಪ್ರತಿಯೊಬ್ಬರ ಸಹಕಾರ ಬೇಕು ಎಂದು ನುಡಿದರು.

ಅತಿಥಿಯಾದ ಶಿಕ್ಷಕಿ ಹಾಗೂ ಉದ್ಯಮಿ ಶಾಲಿನಿ ಸತೀಶ್ ಶೆಟ್ಟಿ ಯವರು ಮಾತನಾಡುತ್ತಾ ಮೊದಲಿನ ಕಾಲದಲ್ಲಿ ರಾಜ ಮಹಾರಾಜರಿಗೆ ಹಳದಿ ಕುಂಕುಮ ಹಣೆಗೆ ಹಾಕಿ ವಿಜಯ ಪತಾಕೆಯನ್ನು ಹಾರಿಸಿ ಬನ್ನಿ,ಎಂದು ಆಶೀರ್ವದಿಸಿ ಕಳುಹಿಸಿ ಕೊಡುತ್ತಿದ್ದರು.ಹಾಗೂ ಮದು ಮಗಳಿಗೆ ಹಳದಿ ಕುಂಕುಮ ಹಾಕಿ ವರನ ಮನೆಗೆ ಕಳುಹಿಸುತ್ತಾರೆ. ಮೊದಲು ನಾವು ಅಮ್ಮನ ಮಾತು ಕೇಳಿ ಹಣೆಗೆ ಕುಂಕುಮ ಇಟ್ಟು ಶಾಲೆಗೆ ಹೋಗುತ್ತಿದ್ದೆವು. ನಮ್ಮ ಸನಾತನ ಸಂಸ್ಕೃತಿಯನ್ನು ಮರೆಯಬಾರದು,ಅಮ್ಮನ ಕೈ ನಮ್ಮ ತಲೆ ಮೇಲೆ ಇದ್ದರೆ, ಅದೊಂದು ದೊಡ್ಡ ಶಕ್ತಿ ಬರುತ್ತದೆ.ಈಗ ನಮ್ಮ ಬಾರತ ದೇಶ ತುಂಬಾ ಬೆಳವಣಿಗೆಯತ್ತ ಸಾಗುತ್ತಿದೆ.ಈಗಿನ ಮಕ್ಕಳು ಏನಾದರೂ ಪ್ರಶ್ನೆ ಇದ್ದರೆ ಪ್ರತಿಯೊಂದೂ ವಿಚಾರವನ್ನು ಗೂಗಲ್ ಮತ್ತು ಫೆಸ್ ಬುಕ್ ನಲ್ಲಿ ಕೇಳುತ್ತಾರೆ .ಅದು ಸರಿಯೋ ತಪ್ಪೋ ಗೊತ್ತಾಗುವುದಿಲ್ಲ. “ಅತಿಯಾದರೆ ಅಮೃತವೂ ವಿಷ “ಎಂಬಂತೆ ಮೊಬೈಲ್ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿಯಬೇಕು .ಅದರಿಂದ ಮೊಬೈಲ್ ನಲ್ಲಿ ಮಕ್ಕಳು ಏನು ಮಾಡುತ್ತಾರೆ ಎಂಬುದನ್ನು ತಿಳಿಯಬಹುದು.ನಮ್ಮ ಪೋಷಕರು ನಮಗೆ ಪ್ರೀತಿ ಮತ್ತು ಗುಣ ಮಟ್ಟದ ಆರೈಕೆಯನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆವರ ನಿರಂತರ ಪ್ರಯತ್ನಗಳು ಆವರ ಆಳವಾದ ಬುದ್ಧಿವಂತಿಕೆ ಅವರ ಜ್ಞಾನದಿಂದ ನಮ್ಮ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ದು ನಮ್ಮನ್ನ ಶ್ರೀಮಂತಗೊಳಿಸುತ್ತದೆ.ಮಕ್ಕಳು ಯಾವಾಗಲೂ ಪೋಷಕರ ಆದೇಶಗಳನ್ನು ಪಾಲಿಸಿ ,ಭಾರತದ ಯೋಗ್ಯನಾಗರಿಕರಾಗಳು ಪೋಷಕರ ಸಲಹೆಯನ್ನು ಅನುಸರಿಸಿ .ಎಂದು ಸಭೆಗೆ ಮನದಾಳದ ಮಾತುಗಳನ್ನು ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ದಿನಕರ್ ಬಂಜನ್ ಮಾತಾಡುತ್ತ ನಮ್ಮ ಮಹಿಳಾ ವಿಭಾಗದವರ ಪ್ರತಿಯೊಂದು ಕಾರ್ಯಕ್ರಮಕ್ಕೆ ಹೆಚ್ಚಿನ ಮಹಿಳೆಯರು ಬಂದು ನಮ್ಮ ಸ್ತ್ರೀ ಶಕ್ತಿಯನ್ನು ತೋರಿಸುತ್ತಿದ್ದಾರೆ . ಇನ್ನು ಅದಕ್ಕಿಂತ ಹೆಚ್ಚಾಗಿ ಸ್ತ್ರೀ ಶಕ್ತಿಯನ್ನು ಜೋಡಿಸಬೇಕು ,ಹೊಸ ಹೊಸ ಸದಸ್ಯರನ್ನು ಪರಿಚಯಿಸಿ , ಬೇಗದಲ್ಲೆ ಲೋಕಾರ್ಪಣೆಯಾಗುವ ಭವನಕ್ಕೆ ಒಗ್ಗಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭವನ ನಿಧಿಗೆ ಸಹಕರಿಸಬೇಕು ಎಂದು ನುಡಿದರು,
ನಮ್ರತಾ ಜಗದೀಶ್ ಬಂಜನ್ ಮಾತಾಡುತ್ತ ನನ್ನನ್ನು ಸತ್ಕರಿಸಿದ್ಧಕ್ಕೆ ಧನ್ಯವಾದಗಳು ,ನಾವೆಲ್ಲರೂ ಒಗ್ಗಟ್ಟಾಗಿ ಇದ್ದು , ಹೆಚ್ಚು ಹೆಚ್ಚು ಸದಸ್ಯರಾಗಿ ಸಂಘದ ಯಶಸ್ವೀಯತ್ತ ಶ್ರಮಿಸೋಣ ,ನನ್ನ ಮತ್ತು ನನ್ನ ಪತಿ ಜಗದೀಶ್ ಬಂಜನ್ರವರ ಸಹಕಾರ ಯಾವಾಗಲೂ ಇರುತ್ತದೆ ಎಂದು ನುಡಿದರು.
ನವಿ ಮುಂಬಯಿ ನೆರೊಳ ನ ಹರೀಶ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕಿ ಡಾ. ಸುಚಿತ್ರಾ ಎಚ್ ಸಾಲಿಯಾನ್ ಮಾತನಾಡಿ ಈಗಿನ ಸಮಯದಲ್ಲಿ ಆರೋಗ್ಯದ ಕಡೆ ಗಮನ ಕೊಟ್ಟು , ಯಾವಾಗಲೂ ಪರಿಶೀಲನೆ ಮಾಡಬೇಕು,
ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ಅಗತ್ಯ , ಪ್ಯಾಕೆಟ್ ಫುಡ್ ನಿoದ ದೂರ ಇದ್ದು ಆರೋಗ್ಯವನ್ನು ಉತ್ತಮ ದೃಷ್ಟಿಯಲ್ಲಿ ನೋಡಿಕೊಳ್ಳಬೇಕು.ಎಂದು ಆರೋಗ್ಯದ ಬಗ್ಗೆ ಸಭೆಗೆ ಹಿತವಚನ ನೀಡಿದರು.
ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ ಮಾತಾಡುತ್ತಾ ನಾವು ಹೀಗೇನೇ ಒಂದಾಗಿ,ಒಮ್ಮತದಿಂದ ಇದ್ದು ಇಂತಹ ಕಾರ್ಯಕ್ರಮ ಆಯೋಜಿಸಿ ನಮ್ಮ ಸಂಘವನ್ನು ಉನ್ನತಿಯತ್ತ ಕೊಂಡೊಯ್ಯೊಣ ಎಂದರು
ಅತಿಥಿಗಳ ವ್ಯಕ್ತಿ ಪರಿಚಯವನ್ನು ಸ್ಥಳೀಯ ಮಹಿಳಾ ಸಮಿತಿಯ ಕೋಶಾಧಿಕಾರಿ ಪ್ರೇಮ ಎಲ್ ಮೂಲ್ಯ ಮತ್ತು ಮಾಜಿ ಕಾರ್ಯಾಧ್ಯಕ್ಷೆ ಮಮತಾ ಎಸ್ ಕುಲಾಲ್ ವಾಚಿಸಿದರು.ಸನ್ಮಾನಿತರಾದ ಸುಚಿತ ವಿಶ್ವನಾಥ್ ಬಂಗೇರ ಮತ್ತು ಶಶಿಕಲಾ ಶೀನ ಮೂಲ್ಯ ಇವರ ಪರಿಚಯವನ್ನು ಜೊತೆ ಕಾರ್ಯಾದರ್ಶಿ ಶೋಭ ಏನ್ ಬಂಗೇರ ಮತ್ತು ಸಂಚಲ ಮೂಲ್ಯ ಇವರು ವಾಚಿಸಿದರು.
ನವಿಸ್ತಾ ಆರ್ ಮೂಲ್ಯ ಸ್ವಾಗತ ನ್ರತ್ಯ ಗೈದರು.
ಮಹಿಳಾ ವಿಭಾಗದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಪುಣೆಯಿಂದ ಲಕ್ಷ್ಮಣ ಬಿ ಸಾಲಿಯಾನ್, ಜಗದೀಶ್ ಬಂಜನ್ ಅಂಬರ್ ನಾಥ್,ಹರಿಯಪ್ಪ ಮೂಲ್ಯ , ಸುಂದರ ಎನ್ ಮೂಲ್ಯ, ಸುಧಾಕರ್ ಮೂಲ್ಯ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ಧರು. ಸ್ಥಳೀಯ ಸಮಿತಿಯ ಪುಷ್ಪ ಪ್ರಸಾದ್ ಮೂಲ್ಯ ,ಆಶಾ ಮೂಲ್ಯ ,ಯುವ ವಿಭಾಗದ ಪ್ರಸಾದ್ ಮೂಲ್ಯ, ಅಭಿಷೇಕ್ ಬಂಗೇರ ,ಅಕ್ಷತ್ ಮೂಲ್ಯ , ದೀಕ್ಷಿತ್ ಮೂಲ್ಯ , ಪ್ರಕೃತಿ ಮೂಲ್ಯ ಸಹಕರಿಸಿದರು.
ಹಳದಿ ಕುಂಕುಮದ ಮಹತ್ವದ ಬಗ್ಗೆ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಉಪಕಾರ್ಯದರ್ಶಿ ರೇಖಾ ಮೂಲ್ಯ ಮತ್ತು ಭವ್ಯಾ ಕುಲಾಲ್ ಮಾಡಿದರು
ಧಾರ್ಮಿಕ ಸಮಿತಿಯ ಸಂಚಾಲಕರಾದ ಸುನೀತಾ ಎಸ್ ಮೂಲ್ಯ ಧನ್ಯವಾದ ನೀಡಿದರು
ಆಟೋಟ ಸ್ಪರ್ಧೆಯನ್ನು ಸೇಫಾಲಿ ಎಚ್ ಸಾಲಿಯಾನ್ ಮತ್ತು ದೀಕ್ಷಾ ಡಿ ಮೂಲ್ಯ ಮುನ್ನಡೆಸಿದರೆ, ದೇವಕಿ ಸಾಲಿಯಾನ್ ಮತ್ತು ಮಮತಾ ಕುಲಾಲ ವಿಜೇತ ಸ್ಪರ್ದಿಗಳಿಗೆ ಬಹುಮಾನ ವಿತರಿಸಿದರು .
ಕೊನೆಗೆ ಲಘು ಉಪಹಾರದೊಂದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು.