
” ಮೂಲತ್ವ ನಾನೇ ನೀನು ನೀನೇ ನಾನು” ಎಂಬ ತತ್ವದಡಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಈ ಪ್ರಯುಕ್ತವಾಗಿ ಮಾರ್ಚ್ 6ರಂದು ಬೆಳಿಗ್ಗೆ 11ಕ್ಕೆ ನಗರ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಜೆಪ್ಪು ಇಲ್ಲಿ ಸ್ತನಪಾನ ಕೊಠಡಿ ಉದ್ಘಾಟನೆ ಆಯೋಜಿಸಲಾಗಿದೆ.
ತಾಯಿಯ ಹಾಲು ಶಿಶುವಿಗೆ ನೀಡಬಹುದಾದ ಮೊದಲ ಮತ್ತು ಅಮೂಲ್ಯ ಉಡುಗೊರೆ, ಇದು ಶಿಶುವಿನ ಸಮಗ್ರ ಬೆಳವಣಿಗೆ, ಉತ್ತಮ ಪ್ರತಿರೋಧಕ ಶಕ್ತಿ ಮತ್ತು ಭಾವನಾತ್ಮಕ ನಂಟಿಗೆ ಸಹಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶಿಶು ಜನನದ ಮೊದಲ ಆರು ತಿಂಗಳ ಕಾಲ ತಾಯಿ ಹಾಲು ಮಾತ್ರ ನೀಡುವುದು ಶಿಶುವಿನ ದೀರ್ಘಕಾಲದ ಆರೋಗ್ಯಕ್ಕೆ ಅತ್ಯವಶ್ಯಕ.
ಸ್ತನಪಾನ ಕೇಂದ್ರ ತಾಯಂದಿರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪರಿಸರ ಒದಗಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೇಂದ್ರಗಳ ಅಗತ್ಯತೆಯನ್ನು ಮನಗಂಡು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜೆಪ್ಪು ಇವರ ಸಹಯೋಗದಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜೆಪ್ಪು ಇಲ್ಲಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಈ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 6 ರಂದು ನಡೆಯಲಿದ್ದು ಕಾರ್ಯಕ್ರಮವನ್ನು ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೋಕ್ತೇಸರ ಎಂ ಅರುಣ್ ಐತಾಳ ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಡಿಎಚ್ಓ ಡಾ. ತಿಮ್ಮಯ್ಯ ಎಚ್ ಆರ್, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಪ್ರಕಾಶ್ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಆರ್ ಸೀ ಎಚ್ ಅಧಿಕಾರಿ ಡಾ. ರಾಜೇಶ್, ದಕ್ಷಿಣ ಕನ್ನಡ ಟೀಎಚ್ಓ ಡಾ ಸುಜಯ್ ಭಂಡಾರಿ , 92.7 ಬಿಗ್ ಎಫ್ ಎಂ ನ ಆರ್ ಜೆ ನಯನ ಶೆಟ್ಟಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜೆಪ್ಪು ವೈದ್ಯಧಿಕಾರಿ ಡಾ. ವಿದ್ಯಾ ಎಸ್ ಮೊದಲದವರು ಭಾಗವಹಿಸಲಿದ್ದಾರೆ ಎಂದು ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.