
ಡೊಂಬಿವಲಿಯ ತುಳು ಕನ್ನಡಿಗರಿಂದ ಆರಾಧಿಸಲ್ಪಡುವ ಪ್ರಮುಖ ಕ್ಷೇತ್ರವಾದ ಶ್ರೀ ಜಗದಂಬ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಮಹೋತ್ಸವವು ವಿಭ್ರಜನೆಯಿಂದ ಜರಗಿತ್ತು. ಬೆಳಿಗ್ಗೆ ದೇವಸ್ಥಾನದ ಪ್ರದಾನ ದೇವರಾದ ಶ್ರೀ ಜಗದಂಬ ಅಮ್ಮನವರಿಗೆ ಮಹಾಪೂಜೆ ನಡೆದು, ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಸೇವೆಯು ಜರಗಿತು. ನಂತರ ಮಂದಿರದ ಪ್ರಧಾನ ಅರ್ಚಕರಾದ ಜಗದೀಶ್ ಭಟ್ ಹಾಗು ಅಧ್ಯಕ್ಷರಾದ ದಿವಾಕರ್ ರೈ ದಂಪತಿಗಳಿಂದ ದೀಪಪ್ರಜ್ವಲನೆ ನಡೆದು ಆಹ್ವಾನಿತ ಭಜನಾ ತಂಡಗಳ ಭಜನೆಗೆ ಚಾಲನೆ ನೀಡಲಾಯಿತು.






ಮದ್ಯಾಹ್ನ ಅನ್ನಸಂತರ್ಪಣೆ ನಡೆದು ಸಾಯಂಕಾಲ ಮಹಾಮಂಗಳರಾತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಂದಿನ ಅನ್ನಸಂತರ್ಪಣೆ ಪ್ರಕಾಶ್ ಶೆಟ್ಟಿ ಪರಿವಾರ ಹಾಗು ರಜತ್ ಕಾರ್ತಿಕ್ ದೇವಾಡಿಗ ಪರಿವಾರದ ವತಿಯಿಂದ ನಡೆಯಿತು. ಅಂದಿನ ಕಾರ್ಯಕ್ರಮಕ್ಕೆ ಕುಲಾಲ ಸಂಘದ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್, ಭಂಡಾರಿ ಸಮಾಜದ ಆರ್ ಎಂ ಭಂಡಾರಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಕೋಶಾಧಿಕಾರಿ ರವಿ ಸನಿಲ್ ದಂಪತಿಗಳು, ದೇವಾಡಿಗ ಸಂಘದ ವಿಜಯ್ ದೇವಾಡಿಗ, ಕೃಷ್ಣ ದೇವಾಡಿಗ, ಹೇಮಾನಂದ ದೇವಾಡಿಗ, ಡೊಂಬಿವಲಿಯ ಪ್ರಖ್ಯಾತ ನಿರೂಪಕ ಚಿನ್ಮಯ್ ಸಾಲಿಯಾನ್ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿಯ ಪುರಂದರ ಪೂಜಾರಿ, ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ನ ಅಜಕಾರ್ ಜಯ ಶೆಟ್ಟಿ, ಶಬರಿ ಅಯ್ಯಪ್ಪ ಭಜನಾ ಮಂಡಳಿಯ ದಿನೇಶ್ ಮೊಗವೀರ ಹಾಗೂ ಸೀತರಾಮ ಶೆಟ್ಟಿ ಆರೂರು, ಮಹಾವಿಷ್ಣು ಮಂದಿರದ ಅರವಿಂದ ಪದ್ಮಶಾಲಿ, ರಾಧಾಕೃಷ್ಣ ಶನೀಶ್ವರ ಮಂದಿರದ ಪುರಂದರ ಕೋಟ್ಯಾನ್, ಗಂಗಾಧರ್ ಕಾಂಚನ್ ಹಾಗು ಶರತ್ ಮಂಡನ್, ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಗೌರವ ಅಧ್ಯಕ್ಷ ರವಿ ಸುವರ್ಣ ಹಾಗು ಹಲವು ಸಂಘ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿರಿದ್ದರು.






ತಬಲ ಹಾಗು ಹಾರ್ಮೋನಿಯಂಗೆ ಶ್ರೀಧರ್ ರೈ ಹಾಗು ಮಾನಸ್ ಬಂಗೇರ ಸಹಕರಿಸಿದರು. ಮಂದಿರದ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ, ಖಜಾಂಚಿ ಸಂತೋಷ್ ಶೆಟ್ಟಿ, ಭಜನಾ ಮಂಡಳಿಯ ರೂವಾರಿಗಳಾದ ಸುರೇಶ್ ಶೆಟ್ಟಿ, ಚಂದ್ರಹಾಸ ರೈ, ಪ್ರಕಾಶ್ ಭಂಡಾರಿ, ನಾಗರಾಜ್ ಶಾನಭಾಗ್, ಹರೀಶ್ ಮಡಿವಾಳ ಸಹಕರಿಸಿದರು ಹಾಗೂ ಮಂದಿರದ ಹೆಚ್ಚಿನ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಮಂದಿರದ ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ನಿರೂಪಿಸಿದರು.