
ಮುಲ್ಕಿ. ಮಾ. 18:ಮುಲ್ಕಿ ಶ್ರೀಕ್ಷೇತ್ರ ಬಪ್ಪನಾಡಿನ ಅನುವಂಶೀಯ ಮೊಕ್ತೇಸರರಾದ ಕಕ್ವಗುತ್ತು ಎಸ್. ಎಸ್. ಮನೋಹರ ಶೆಟ್ಟಿ(87)ರವರು ಅನಾರೋಗ್ಯದಿಂದ ಮಾ. 19ರಂದು ನಿಧನರಾಗಿದ್ದಾರೆ.
ಶೆಟ್ಟಿಯವರು ವಿಜಯಾ ಬ್ಯಾಂಕಿನಲ್ಲಿ ಪ್ರಭಂದಕರಾಗಿದ್ದು ಸಮಾಜ ಸೇವೆಯೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದರು.ಮುಲ್ಕಿ ಸುಂದರ ರಾಮ ಶೆಟ್ಟಿ ಟ್ರಸ್ಟಿನ ಗೌರವ ಸಲಹೆಗಾರರಾಗಿ,ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 1996ರಿಂದ ಸೇವೆ ಸಲ್ಲಿಸುತ್ತಿದ್ದು ದೇವಸ್ಥಾನದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರು. ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯಲ್ಲೂ ಗೌರವಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಲ್ಕಿ ಕಕ್ವಗುತ್ತಿನ ಅನುವಂಶೀಯ ಮೊಕ್ತೇಸರರಾದ ದಿ.ಕಾಳಪ್ಪ ಶೆಟ್ಟಿಯವರ ಕುಟುಂಬಿಕರಾದ ಇವರು ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ 29 ವರ್ಷ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಜನಾನುರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.