July 23, 2026
Mumbai News Kannada
ಸುದ್ದಿ

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ







ಮುಂಬಯಿ : ಕರ್ನಾಟಕ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಕಳೆದ 40 ವರ್ಷಗಳಿಂದ ಸೇವೆ ಮಾಡುತ್ತಿದ್ದ ಬ್ಯಾಂಕಿನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಬ್ಯಾಂಕಿನ ಕಾಂದಿವಲಿ ಪಶ್ಚಿಮ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ ಭ್ಯಾಂಕಿನ ಸಿಬ್ಬಂದಿಗಳು ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಿದ್ದು ಇದಕ್ಕೆ ಮೊದಲು ಬೊರಿವಲಿ ಪಶ್ಚಿಮ ಶಾಖೆಯಲ್ಲಿ ದೀರ್ಘ ಕಾಲ ಸೇವೆ ಮಾಡಿದ ನಾರಾಯಣ ಮೊಗವೀರ ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಹಾಗೂ ಪ್ರೋತ್ಸಾಹ ನೀಡಿದ ಎಲ್ಲಾ ಹಿರಿ ಹಿರಿಯ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಅಬಾರ ವ್ಯಕ್ತಪಡಿಸಿದರು.

ಕರ್ನಾಟಕ ಬ್ಯಾಂಕಿನ ರೀಜನಲ್ ಕಚೇರಿಯ ಮುಖ್ಯ ಪ್ರಬಂಧಕ ಸರಿನ್ ಹರಿ, ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ನಿವೃತ್ತಿ ಜೀವನ ನಡೆಸಲಿರುವ ನಾರಾಯಣ ಮೊಗವೀರ ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಿದರು.



Related posts

ಮುಂಬೈ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಭವ್ಯ ಸ್ವಾಗತ

Mumbai News Desk

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಲೋಕಾರ್ಪಣೆ

Mumbai News Desk

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.

Mumbai News Desk

ಶಷಾಂಕ್ ಅಶೋಕ್ ಐಲ್, ಸಿಎ ಉತ್ತೀರ್ಣ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Mumbai News Desk