
ಉಡುಪಿ: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 1981-82 ರ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉಪನ್ಯಾಸಕರ ಉಪಸ್ಥಿತಿಯಲ್ಲಿ ಜರಗಿತು. ನಿವೃತ್ತ ಉಪನ್ಯಾಸಕರಾದ ಡಾ| ಎಂ.ಆರ್.ಹೆಗಡೆ, ಡಾ| ಟಿ.ಎನ್.ರಾಮಕೃಷ್ಣ (TNR), ಮೋಹನ್ ಕಲ್ಲೂರಾಯರವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ಜಾನಕಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಸುಧಾಕರ ಶೆಟ್ಟಿಯವರು ಸ್ವಾಗತಿಸಿದರು. ನಂತರ ಉಪನ್ಯಾಸಕರಿಗೆ ಗೌರವಾರ್ಪಣೆ ಮಾಡಿ ಗುರುಗಳ ಆಶೀರ್ವಾದ ಪಡೆದು ಕೃತಾರ್ಥರೆನಿಸಿಕೊಂಡರು. ಜೀವನದ ಮೌಲ್ಯಗಳ ಬಗ್ಗೆ ಉಪನ್ಯಾಸಕರು ಸಂದೇಶ ನೀಡಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಮುಂದಿನ ವರ್ಷ 60ರ ಸಂಭ್ರಮದಲ್ಲಿರುವ ಕಾಲೇಜಿನ ಇತಿಹಾಸದಲ್ಲಿ ಇಂತಹ ಸಮ್ಮಿಲನ ನಡೆದದ್ದು ಪ್ರಥಮ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಧ್ಯಾರ್ಥಿಗಳು ತಮ್ಮ ತಮ್ಮ ಪರಿಚಯ ನೀಡಿ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದ ಅಲೆವೂರು ನಾಗರಾಜ ಆಚಾರ್ಯ, ಬೈಕಾಡಿ ಸೂರಪ್ಪ ಕುಂದರ್ ಮುಂಬಯಿ, ಹಾಗೂ ಸಕು ಪಾಂಗಾಳ ಇವರನ್ನು ಉಪನ್ಯಾಸಕರು ಗೌರವಿಸಿದರು.
ಮನೋರಂಜನೆಗಾಗಿ ಮುಂಬಯಿಯ ಜಾದೂಗಾರ ಸೂರಪ್ಪ ಕುಂದರ್ ಹಾಗೂ ಶಾಂತಾರಾಮ ಶೆಟ್ಟಿ ಬಳ್ಳಾರಿಯವರು ಜಾದೂ ಪ್ರದರ್ಶನ ನೀಡಿ ರಂಜಿಸಿದರು. ಸಕು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ಸುರೇಶ್ ಬೈಲೂರು ವಂದನಾರ್ಪಣೆ ಗೈದರು.