32 C
Mumbai
March 7, 2026
Mumbai News Kannada
ಪ್ರಕಟಣೆ

ಮೀರಾ ರೋಡ್   ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೂ.14 : 35ನೇ ವಾರ್ಷಿಕ ಮಹಾಪೂಜೆ





 

ಮೀರಾ ರೋಡ್ ಜೂ12.  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ ಇದರ 35ನೇ ವಾರ್ಷಿಕ ಮಹಾಪೂಜೆಯು ವಾಮಂಜೂರು  ಶ್ರೀ ಕೃಷ್ಣರಾಜ ಉಪಾಧ್ಯಾಯರ ನೇತೃತ್ವದಲ್ಲಿ,  ದೇವಸ್ಥಾನದ ಆಡಳಿತ  ಮೊಕ್ತೇಸರ  ಶಿಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿಯವರ ಮುಂದಾಳುತ್ವದಲ್ಲಿ ಜೂನ್ 14ರ ಶನಿವಾರ ಬಹಳ ವಿಜೃಂಭಣೆಯಿಂದ ಜರಗಲಿರುವುದು.

ಆ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.
ಬೆಳಗ್ಗೆ 9:00 ರಿಂದ 12 – ಶ್ರೀ ಗಣಪತಿಯಾಗ, ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ. 

ಸಂಜೆ 5:00 ರಿಂದ 6 – ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ.

ಸಂಜೆ 6ರಿಂದ 6.30 – ರಂಗ ಪೂಜೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ .

6.30ರಿಂದ 8 – ಉತ್ಸವ ಬಲಿ. 

8 ರಿಂದ ಮಹಾಪ್ರಸಾದ (ಅನ್ನದಾನ) ನಡೆಯಲಿದೆ.

ಭಕ್ತಾದಿಗಳಾದ ತಾವೆಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ -ಧನದಿಂದ ಸಹಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.
ದೇವಸ್ಥಾನದ ಸಂಸ್ಥಾಪಕರಾದ ದಿ.ವಿಶ್ವನಾಥ ಪೂಂಜ  ಪರಿವಾರ,ಮತ್ತು ಶ್ರೀ ಕೃಷ್ಣ ಶೆಟ್ಟಿ (ಸ್ಥಾಪಕರು) 
ಸಾಣೂರು ಸಾಂತಿಂಜ ಜನಾರ್ದನ್ ಭಟ್ (ಅರ್ಚಕರು)  ಸಾಂತಿಂಜ ಮಾಧವ್ ಭಟ್ (ಪ್ರಧಾನ ಅರ್ಚಕರು)
ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ ಸದಸ್ಯರು ಹಾಗೂ ಮೀರಾ ಸೊಸೈಟಿ ಸಮಿತಿ ಸದಸ್ಯರು.ವಿನಂತಿಸಿದ್ದಾರೆ.

B. Dinesh Kulal

Mob.: 9821868674



Related posts

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk

ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನಿಮಿತ್ತ ಅ.12 ರಂದು ಮುಂಬಯಿಯಲ್ಲಿ ಪೂರ್ವಭಾವಿ ಸಭೆ

Mumbai News Desk

ಆಗಸ್ಟ್ 10 : ಬಿಲ್ಲವ ಘಾಟ್ಕೋಪರ್ ಹಾಗೂ ತುಳು ಕೂಟ ಅಸಲ್ಪಾ, ಇದರ ಆಶ್ರಯದಲ್ಲಿ ‘ಘಾಟ್ಕೋಪರ್ ದ ಆಟಿದ ಒಂಜಿ ದಿನ’

Mumbai News Desk

ಸೆ. 22 ರಿಂದ ಗೋರೆಗಾಂವ್‌ನ ಶ್ರೀ ಶಾಂತಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ – 10.2.26ರಿಂದ 23.02.26ರ ವರೆಗೆ “ವರ್ಷಾವಧಿ ಉತ್ಸವ”

Mumbai News Desk