32 C
Mumbai
March 7, 2026
Mumbai News Kannada
ಸುದ್ದಿ

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿವಂಗತ ಐತಪ್ಪ ಸುವರ್ಣ ರಿಗೆ ನುಡಿ ನಮನ





ಮುಂಬೈ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿವಂಗತ ಐತಪ್ಪ ಸುವರ್ಣ ರವರಿಗೆ ನುಡಿ ನಮನ ಶ್ರದ್ಧಾಂಜಲಿ ಸಭೆಯು ದಿನಾಂಕ 27 07.2025 ರಂದು ಆದಿತ್ಯವಾರ ಸಂಘದ ವಟಾರದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಗುರು ಪೂಜೆ ಜರಗಿಸಿ ನಂತರ ಗೌರವ ಕಾರ್ಯದರ್ಶಿ ಜಗದೀಶ್ ಜೇ ಕೋಟ್ಯಾನ್ ರವರು ದಿವಂಗತ ಐತಪ್ಪ ಸುವರ್ಣರ ಕಳೆದ 37 ವರ್ಷಗಳಿಂದ ಸಂಘಕ್ಕೆ ನೀಡಿದ ಸೇವೆ ಅವರ ಜೀವನದ ಬಗ್ಗೆ ಸಭೆಗೆ ತಿಳಿಸಿದರು.

ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಉಪಾಧ್ಯಕ್ಷರಾದ ಸುರೇಶ್ ಕುಮಾರ್ , ಕೋಶಾಧಿಕಾರಿ ರವಿ ಸನಿಲ್ ,ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್, ಉಪಾಧ್ಯಕ್ಷರಾದ ಚಂದ್ರಹಾಸ್ ಪಾಲನ್, ಸಚಿನ್ ಜಿ ಪೂಜಾರಿ, ಕೋಶಾಧಿಕಾರಿ ಆನಂದ್ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿ, ವಸಂತ್ ಸುವರ್ಣ, ಈಶ್ವರ ಕೋಟ್ಯಾನ್, ದಿನೇಶ್ ಪೂಜಾರಿ, ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಕೊನೆಗೆ ಆಗಮಿಸಿದ ಎಲ್ಲಾ ಸಮಾಜ ಬಾಂಧವರು ಅವರ ಕುಟುಂಬಸ್ಥರು ಎರಡು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊನೆಗೆ ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು.



Related posts

ಡೊಂಬಿವಲಿಯ ಕಲಾವಿದೆ ರಿತಿಕ ಶಂಕರ್ ಸುವರ್ಣ ಅವರಿಂದ ಅಯೋಧ್ಯೆಯಲ್ಲಿ ಭರತನಾಟ್ಯ ಸೇವೆ.

Mumbai News Desk

ಸುಳ್ಯದಲ್ಲಿ  ಐಕಳ ಹರೀಶ್ ಶೆಟ್ಟಿ ಯವರಿಂದ ಬಂಟರ ಸಮಾವೇಶ ಉದ್ಘಾಟನೆ:*

Mumbai News Desk

ಮಂಗಳೂರಿನಲ್ಲಿ ಕುಲಾಲ ಭವನ ಲೋಕಾರ್ಪಣೆ: ಸಮಾಜ ಬಾಂಧವರ ಕನಸು ನನಸು

Mumbai News Desk

ಲೇಖಕ,ಪ್ರಸಿದ್ಧ ರಂಗ ನಟ   ಸುಂದರ ಮೂಡಬಿದ್ರಿ ಯವರಿಗೆಅಮೂಲ್ಯ   ಪತ್ರಿಕೆ ಯ  ಬೆಳ್ಳಿ ಹಬ್ಬದ ವಿಶೇಷ  ಸನ್ಮಾನ

Mumbai News Desk

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk