32 C
Mumbai
March 7, 2026
Mumbai News Kannada
ಪ್ರಕಟಣೆ

ಆಗಸ್ಟ್ 3ರಂದು ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಥಾಣೆ, ಆಶ್ರಯದಲ್ಲಿ ಮಂದಾರ್ತಿ ಮೇಳದ ಕಲಾವಿದರಿಂದ “ಜಗನ್ಮಾತೆ ಶ್ರೀ ವನದುರ್ಗಿ” ಯಕ್ಷಗಾನ ಪ್ರದರ್ಶನ





ಥಾಣೆಯ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಇದರ ಆಶ್ರಯದಲ್ಲಿ ಉದ್ಯಮಿ, ಕಲಾಸಂಘಟಕ ರಾಜು ಮೆಂಡನ್ ವಂಡ್ಸೆ ಅವರ ಸಂಯೋಜನೆಯಲ್ಲಿ ಆಗಸ್ಟ್ 3ರ, ರವಿವಾರ ಸಂಜೆ 3 ಗಂಟೆಯಿಂದ ಮುಲುಂಡ್ ಚೆಕ್ ನಾಕ ಸಮೀಪದ ನವೋದಯ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮೇಳದ ಕಲಾವಿದರಿಂದ ‘ಜಗನ್ಮಾತೆ ಶ್ರೀ ವನದುರ್ಗೆ’ ಎಂಬ ಈ ವರ್ಷದ ನೂತನ ಪುಣ್ಯ ಕಥಾನಕವು ಯಕ್ಷಗಾನ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಕಾರ್ಯಕ್ರಮದ ಉದ್ಘಾಟಕರಾಗಿರುವರು.
ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ನ ಅಧ್ಯಕ್ಷ ಮನೋಜ್ ಎಲ್ ಹೆಗ್ಡೆ ಅಧ್ಯಕ್ಷತೆ ವಹಿಸಲಿರುವರು.
ಅಂತರರಾಷ್ಟ್ರೀಯ ಖ್ಯಾತಿಯ ಪುರೋಹಿತ, ಜ್ಯೋತಿಷಿ ಅಶೋಕ್ ಪುರೋಹಿತ್ ಶುಭ ಆಶೀರ್ವಾದ ನೀಡಲಿದ್ದಾರೆ.
ಅತಿಥಿ ಗಣ್ಯರುಗಳಾಗಿ ಥಾಣೆ ಬಂಟ್ಸ್ ಎಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ, ರೋಟರಿ ಕ್ಲಬ್ ಥಾಣೆಯ ಅಧ್ಯಕ್ಷ ಜಯರಾಮ್ ಮೆಂಡನ್, ಥಾಣೆ ಬಂಟ್ಸ್ ಎಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಸುನಿಲ್ ಜೆ ಶೆಟ್ಟಿ, ಇನ್ನೋವೇಟಿವ್ ಎನ್‌ಡಿಟಿ ಸರ್ವಿಸಸ್ನ ಆಡಳಿತ ನಿರ್ದೇಶಕ ಅವಿನಾಶ್ ಪುತ್ರನ್, ನಿತ್ಯಾನಂದ ಸೇವಾ ಸಮಿತಿ ಥಾಣೆಯ ಅಧ್ಯಕ್ಷ ರಘುನಾಥ್ ಎ ರೈ , ಥಾಣೆಯ ಪ್ರಜಾ ಗ್ರೂಪ್ ಆಫ್ ಹೊಟೇಲ್ಸ್ ಸಿ ಎಂ ಶೆಟ್ಟಿ, ಹೋಟೆಲ್ ದುರ್ಗಾ ವಿಹಾರ್ ಥಾಣೆಯ ನವೀನ್ ಶೆಟ್ಟಿ, ಸ್ಟೇಟಸ್ ಗ್ರೂಪ್ ಆಫ್ ಹೋಟೆಲ್ ನ ರತ್ನಾಕರ್ ಚಂದನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ಅರವಿಂದ ಪುತ್ರನ್ ಉಪಸ್ಥಿತರಿರುವರು.
ಕಾರ್ಯಕ್ರಮವನ್ನು ನವೋದಯ ಕನ್ನಡ ಸೇವಾ ಸಂಘ ಥಾಣೆಯ ಉಪಾಧ್ಯಕ್ಷ ರವಿ ಹೆಗ್ಡೆ ನಿರೂಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಂದಾರ್ತಿ ಮೇಳದ ಖ್ಯಾತ ಸ್ತ್ರಿ ಪಾತ್ರಧಾರಿ ದಿನಕರ ಕುಂದ್ರವ್ ನಡೂರು ಅವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಪ್ರಿಯರು, ಕಲಾಭಿಮಾನಿಗಳು ಬಂದು ಸಹಕರಿಸುವಂತೆ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ನ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯವರು,ಸರ್ವ ಸದಸ್ಯರು ಹಾಗೂ ಕಾರ್ಯಕ್ರಮದ ಸಂಯೋಜಕ ರಾಜು ಮೆಂಡನ್ ವಂಡ್ಸೆ ವಿನಂತಿಸಿದ್ದಾರೆ.



Related posts

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಮಾ.9ರಂದು ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಸ್ಥಾನ ಜೆರಿಮರಿ ವರ್ಷಾವಧಿ ಉತ್ಸವ.

Mumbai News Desk

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಗುರು ನಾರಾಯಣ ಸೇವಾ ಸಮಿತಿ ವಸಯಿ,  ಮಾ. 9ರಂದು 29ನೇ ವಾರ್ಷಿಕ ಮೂರ್ತಿ ಪ್ರತಿಷ್ಠಾಪನ ದಿನಾಚರಣೆ

Mumbai News Desk

ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಪರೆಂಕಿಲ, ಶಿಮಂತೂರು : ಫೆ. 4ರಿಂದ 6, ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ

Mumbai News Desk