
*****************
ಮಂಗಳೂರು ಆ12. ನಗರದ ಓಶಿಯನ್ ಪರ್ಲ್ ಸಭಾಭವನದಲ್ಲಿ ಪತ್ರಕರ್ತ ಶ್ರೀನಿವಾಸ್ ಇಂದಾಜೆ ಇವರ ನೇತೃತ್ವದಲ್ಲಿ ಕಲಾ ಸಾಧನ ಮಂಗಳೂರು ಇವರು ಸಮರ್ಪಿಸಿದ ಸ್ವರ ದಾರಾ ಸಂಗೀತ ಹಬ್ಬ , ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿದ್ದರು
ಬಳಿಕ ಮಾತನಾಡುತ್ತಾ ಸಂಗೀತ ಮನುರಂಜಿಸುದಲ್ಲದೆ. ಅದರಿಂದ ಆರೋಗ್ಯಕ್ಕೆ ಕೂಡ ಉತ್ತಮ ಔಷಧಿ ಇದ್ದಂತೆ, ಬಾಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ನಿರಂತರವಾಗಿ ನಡೆಯಲಿ ಎಂದರು,
, ಕಾರ್ಯಕ್ರಮದಲ್ಲಿ ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್, ಕಿಶೋರ್ ಆಳ್ವ ಅಧ್ಯಕ್ಷರು ಅದಾನಿ ಗ್ರೂಪ್ ಕೃಷ್ಣ ಹೆಗಡೆ ಜಿಎಂ ಎಂಆರ್ಪಿಎಲ್ ,ಕೆ ದಿವಾಕರ್ ಜಿ ಎಂ ಕಾರ್ಡ್ ಲೈಟ್ ,
ಶಾoಭ ಶಿವ ರಾವ್ ,ಎಂ ಡಿ ಅನಘ ರಿಫೈನರಿಸ್, ಡಾಕ್ಟರ್ ಅರುಣ್ ಕುಮಾರ್ ರೈ ಎ ಎಂ ಡಿ ಭಾರತ್ ಆಗ್ರೋ, ಮೋಹನ್ದಾಸ್ ಕಾಮತ್ ಇಂಜಿನಿಯರ್ ಕುವೈಟ್, ಉಪಸ್ಥಿತರಿದ್ದರು,
ಬಳಿಕ ಮನರಂಜಿಸುವ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಗೀತ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,




