September 6, 2026
Mumbai News Kannada
ತುಳುನಾಡು

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ





ಮಂಗಳೂರು:
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಮುತೋಟ್ ಫೈನಾನ್ಸ್ ಲಿಮಿಟೆಡ್ ಇವರ ಜಂಟಿ ಆಶಯದಲ್ಲಿ, ಮಂಗಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೂಳೂರು (ಕುಳೂರ್) ನಲ್ಲಿ ಮೂರನೇ ಸ್ಥನ್ಯಪಾನ ಕೊಠಡಿಯನ್ನು ಉದ್ಘಾಟಿಸಲಾಯಿತು.

ಈ ನೂತನ ಸ್ಥನ್ಯಪಾನ ಕೊಠಡಿಯನ್ನು ಮುತೋಟ್ ಫೈನಾನ್ಸ್‌ನ ರೀಜನಲ್ ಮೆನೇಜರ್ ಪ್ರಶಾಂತ್ ನಾಯಕ್ ಅವರು ಉದ್ಘಾಟಿಸಿ, ನಂತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳೂರ್ ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಶಾಂತ್ ನಾಯಕ್ ಅವರು, “ಈ ಸ್ಥನ್ಯಪಾನ ಕೊಠಡಿ ತಾಯಂದಿರಿಗಾಗಿ ಅತ್ಯಂತ ಅಗತ್ಯ ಹಾಗೂ ಉಪಯುಕ್ತ ಸೌಕರ್ಯ. ಇದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಮುತೋಟ್ ಫೈನಾನ್ಸ್ ಹಾಗೂ ಮೂಲತ್ವ ಫೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿವೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಜೇಶ್ ಅವರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮುತೋಟ್ ಫೈನಾನ್ಸ್ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಆರಂಭದಲ್ಲಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಪ್ರಕಾಶ್ ಕೋಟ್ಯಾನ್ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ, ಮುತೋಟ್ ಫೈನಾನ್ಸ್‌ನ ಸಿ.ಎಸ್.ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುತೋಟ್ ಫೈನಾನ್ಸ್ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೇನೋಯ್, ಮುತೋಟ್ ಫೈನಾನ್ಸ್ ಕೊಟ್ಟಾರ ಶಾಖೆಯ ಮ್ಯಾನೇಜರ್ ಆಶಾಲತಾ ಅಂಚನ್, ಡಾ. ಚೈತ್ರಾ, ಗೌತಮ್, ಪ್ರವೀಣ್ ಫ್ರಾಂಕ್ (ಮುತೋಟ್ ಫೈನಾನ್ಸ್), ಮೂಲತ್ವ ಫೌಂಡೇಶನ್‌ನ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಅಕ್ಷತಾ ಕದ್ರಿ ಮೊದಲಾದವರು ಹಾಜರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ, ಮೂಲತ್ವ ಫೌಂಡೇಶನ್ ಟ್ರಸ್ಟಿ ಶೈನೀ ಮೂಲತ್ವ ಅವರು ಧನ್ಯವಾದ ಸಮರ್ಪಣೆ ಸಲ್ಲಿಸಿದರು.



Related posts

ಜೇಸಿಐ ಕಾಪು ಘಟಕ : ಶಾಶ್ವತ ಯೋಜನೆಯಾಗಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್ ಹಸ್ತಾಂತರ

Mumbai News Desk

ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಮಾಲೋಚನಾ ಸಭೆ, ಆ. 31ರಂದು ಮುಷ್ಟಿ ಕಾಣಿಕೆ ಅರ್ಪಿಸಲು ನಿರ್ಣಯ

Mumbai News Desk

ಚಂದ್ರಶೇಖರ ಬೆಳ್ಚಡ ಸಾರಥ್ಯದಲ್ಲಿ ಕಟೀಲಿನಲ್ಲಿ 50ನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ.

Mumbai News Desk

“ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಹೆಜಮಾಡಿಯಲ್ಲಿ ಮಹತ್ವದ ಸಭೆ – ಡಿಜಿಟಲ್ ಮೀಡಿಯಾ ಆರಂಭ ಮತ್ತು ನೂತನ ಸದಸ್ಯರ ಸೇರ್ಪಡೆ”

Mumbai News Desk

ಮೂಲ್ಕಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನದ ಪ್ರಯುಕ್ತ ಭವ್ಯ ಶೋಭಾಯಾತ್ರೆ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮಹೂರ್ತ

Mumbai News Desk