32 C
Mumbai
March 7, 2026
Mumbai News Kannada
ಪ್ರಕಟಣೆ

ಸೆ.21.ಶ್ರೀ ಸಾಯಿಬಾಬಾ ಪೂಜಾ ಸಮಿತಿ,ಕಾಲಘೋಡ (ರಿ).ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ, 31ನೇ ವಾರ್ಷಿಕ ಮಹಾಸಭೆ.





ಮುಂಬಯಿ,ಸೆ.17. ಕಳೆದ 55 ವರ್ಷಗಳಿಂದ ಧಾರ್ಮಿಕ ಸೇವೆಯೊಂದಿಗೆ ಶೈಕ್ಷಣಿಕ, ವೈದ್ಯಕೀಯ ಸೇವೆಯಲ್ಲಿ ನಿರತ ಶ್ರೀ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಧಾರ್ಮಿಕ ಸಂಸ್ಥೆಯು ತನ್ನ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗೆ ಹೊಲಿಗೆ ತರಬೇತಿ ತರಗತಿಯನ್ನು ಆರಂಭಿಸಿದೆ. ಇದರಲ್ಲಿ ಈ ತನಕ ಸುಮಾರು 500 ಆರ್ಥಿಕವಾಗಿ ಹಿಂದುಳಿದ ಸ್ತ್ರೀಯರು ಪ್ರಯೋಜನ ಪಡೆದಿದ್ದಾರೆ . ಪ್ರಸ್ತುತ ವರ್ಷದ 16ನೇ ಬ್ಯಾಚಿನಲ್ಲಿ ಹೊಲಿಗೆ ತರಬೇತಿ ಪಡೆದ ಸ್ತ್ರೀಯರ ಪ್ರಮಾಣ ಪತ್ರ ಹಾಗೂ ಹೊಲಿಗೆ ಯಂತ್ರವೊಂದನ್ನು ನೀಡುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಬೊರಿವಿಲಿ ಪಶ್ಚಿಮದ ಚುಕ್ಕುವಾಡಿಯ ಭೂಷಣ್ ಪಾರ್ಕ್ ವ್ಯೂ ಕಟ್ಟಡದಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ. ಸಮಿತಿಯ ಅಧ್ಯಕ್ಷ ಮಾಧವ ಎಸ್.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ ಇದರ ಫಂಡ್ ರೈಸಿಂಗ್ ಕಮಿಟಿಯ ಕಾರ್ಯಾಧ್ಯಕ್ಷ, ಸಮಾಜ ಸೇವಕ ಹಾಗೂ ಹೆಸರಾಂತ ಹೋಟೆಲ್ ಉದ್ಯಮಿ ಮುಂಡಪ್ಪ ಪಯ್ಯಡೆಯವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.
ಇದೇ ಸಂದರ್ಭದಲ್ಲಿ ಸಮಿತಿಯ 31ನೇ ವಾರ್ಷಿಕ ಮಹಾಸಭೆಯು ಜರುಗಲಿದೆ.ಸಮಿತಿಯ ಸರ್ವ ಸದಸ್ಯರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರ ಬೇಕಾಗಿ ಸಮಿತಿಯ ಗೌ.ಕಾರ್ಯದರ್ಶಿ ಪ್ರೊ. ಕೇಶವ ಎಚ್.ಕರ್ಕೇರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಜುಲೈ.20ಕ್ಕೆ ಆಟಿಡೊಂಜಿ ದಿನ

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ: ಮಾರ್ಚ್ 6ರಂದು ಬಪ್ಪನಾಡಿನಿಂದ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಮುಂಬಯಿ: ಡಿ. 25ರಂದು ಶ್ರೀ ಕೃಷ್ಣ-ವಿಠ್ಠಲ ಪ್ರತಿಷ್ಠಾನದ 28ನೇ ವರ್ಷದ ಧಾರ್ಮಿಕ ಉತ್ಸವ

Mumbai News Desk