26.3 C
Mumbai
March 7, 2026
Mumbai News Kannada
ಸುದ್ದಿ

ಉಡುಪಿ : ಕೋಡಿಬೆಂಗ್ರೆ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರು ಸಾವು





ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ಮಗುಚಿ ಬಿದ್ದಿದ್ದು, ಮೈಸೂರಿನ 28 ಬಿಪಿಒ ಉದ್ಯೋಗಿಗಳ ಪೈಕಿ ನಾಲ್ವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಆ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿದ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಲೈಫ್ ಜಾಕೆಟ್‌ಗಳ ಕೊರತೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದಲೇ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ಥಳೀಯ ರೆಸಾರ್ಟ್‌ನಲ್ಲಿ ತಂಗಿದ್ದ 10 ಮಂದಿ ಪ್ರವಾಸಿಗರು ಸಮುದ್ರ ವಿಹಾರಕ್ಕಾಗಿ ದೋಣಿಯಲ್ಲಿ ತೆರಳಿದ್ದಾಗ ಸಮುದ್ರದ ಮಧ್ಯಭಾಗದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಅಕಸ್ಮಿಕವಾಗಿ ಪಲ್ಟಿಯಾಗಿದೆ.
ದುರಂತದ ಸಮಯದಲ್ಲಿ ದೋಣಿಯಲ್ಲಿದ್ದ ಯಾವುದೇ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂಬ ಆಘಾತಕಾರಿ ಅಂಶ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ದೋಣಿ ಮಗುಚಿದ ತಕ್ಷಣ ಸ್ಥಳೀಯ ಮೀನುಗಾರರು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ದಡಕ್ಕೆ ತಂದಿದ್ದಾರೆ. ಸದ್ಯ ತೀವ್ರವಾಗಿ ಅಸ್ವಸ್ಥಗೊಂಡಿರುವ ನಾಲ್ವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.



Related posts

ಯುವ ಭರತನಾಟ್ಯ ಪ್ರತಿಭೆ ವಿದುಷಿ ಸಿಂಚನ ಎಸ್ ಕುಲಾಲ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ

Mumbai News Desk

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ಜನವಿಕಾಸ ಸಮಿತಿ ಪುನರೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ

Mumbai News Desk

ಮಹಾರಾಷ್ಟ್ರ ದಲ್ಲಿ ಭೀಕರ ರೈಲು ಅಪಘಾತ – ರೈಲಿನಡಿ ಸಿಲುಕಿ 7 ಜನರ ದುರಂತ ಸಾವು

Mumbai News Desk

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅಭಿನಂದನೆ

Mumbai News Desk

ಬೆಂಗಳೂರು : ಭಾರತ್ ಬ್ಯಾಂಕ್ ಅಧಿಕಾರಿ ಹೇಮಾ ಭಾಸ್ಕರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

Mumbai News Desk