26.3 C
Mumbai
March 7, 2026
Mumbai News Kannada
ಸುದ್ದಿ

ಬಂಟ್ವಾಳ: ಮಕ್ಕಳ ಸಂಭ್ರಮೋತ್ಸವ, ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ : ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಪ್ರಭಾ ಎನ್ ಸುವರ್ಣ





ಬಾಲಾಲಯ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಂಗಳವಾರ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಅಶ್ವಿನಿ ಕುಮಾರ್ ರೈ ಅವರು, ಸಮಾಜದ ನಿರ್ಮಾಣದಲ್ಲಿ ಮಹಿಳೆ ಮತ್ತು ಪುರುಷರು ಸಮಾನವಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಮುಂದಿನ ಪೀಳಿಗೆಯನ್ನು ಉತ್ತಮ ಸಂಸ್ಕಾರದೊಂದಿಗೆ ರೂಪಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂಬ ಮಹತ್ವದ ಸಂದೇಶವನ್ನು ಅವರು ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವೈದ್ಯೆ ಡಾ. ಶಶಿಕಲಾ ಆರ್. ಸೋಮಯಾಜಿ, ಸಮಾಜ ಸೇವಕಿಯರಾದ ಡಾ. ಸಂಸದ್ ಕುಂಜತ್‌ಬೈಲು, ಪ್ರಭಾ ನಾರಾಯಣ ಸುವರ್ಣ ಮುಂಬಯಿ ಮತ್ತು ಶಿಕ್ಷಕಿ ಸಂಗೀತ ಶರ್ಮ ಅವರಿಗೆ ಪ್ರತಿಷ್ಠಿತ ‘ಗಿರಿಜಾ ರತ್ನ ರಾಜ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶೈಲಜಾ ರಾಜೇಶ್ ವಹಿಸಿದ್ದು, ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಮಂಗಳೂರು ಆತ್ಮಶಕ್ತಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉದ್ಯಮಿ ಶೈಲೇಂದ್ರ ಸುವರ್ಣ, ಕೃಷ್ಣ ಸುವರ್ಣ, ಪ್ರಕಾಶ್ ಕೆವಾರ್ಲೆ, ಶೌರ್ಯ ಎಸ್.ಆರ್ ಮತ್ತು ಡಾ. ರಾಜೇಶ್ ಪೂಜಾರಿ ಅವರಂತಹ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು. ಪ್ರತಿಭಾವಂತ ಮಕ್ಕಳಾದ ಅನೀಶ್ ಪೂಜಾರಿ, ಧನಲಕ್ಷ್ಮಿ, ವೈಷ್ಣವಿ ಶೆಟ್ಟಿ, ಶಾನ್ವಿ ಪೂಜಾರಿ ಮತ್ತು ಯಶಸ್ವಿನಿ ಅವರನ್ನು ಅವರ ಸಾಧನೆಗಾಗಿ ಅಭಿನಂದಿಸಲಾಯಿತು. ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಾಮಾಜಿಕ ಕಳಕಳಿಯೊಂದಿಗೆ ಕ್ಯಾನ್ಸರ್ ಪೀಡಿತರಿಗೆ ಹಾಗೂ ವಿಕಲಚೇತನರಿಗೆ ಆರ್ಥಿಕ ನೆರವು ನೀಡುವ ಮೂಲಕ ಈ ಸಮಾರಂಭವು ಮಾದರಿಯಾಯಿತು. ವಿವಿಧ ಸ್ಪರ್ಧೆಗಳು ಮತ್ತು ಸಂವಾದ ಕಾರ್ಯಕ್ರಮಗಳು ಮಕ್ಕಳಲ್ಲಿ ಉತ್ಸಾಹ ತುಂಬಿದವು.



Related posts

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

*ಜಾಗತಿಕ ಬಂಟರ ಸಂಘಗಳ ಒಕ್ಕೂಟ:  ಆಡಳಿತ ಮಂಡಳಿ ಸಭೆ* *50 ಲಕ್ಷ ರೂಪಾಯಿ ಅನುದಾನ ವಿತರಣೆ*

Mumbai News Desk

ಡೊಂಬಿವಲಿ – ವೆಂಕಟೇಶ್ ಕೆ. ಕೋಟ್ಯಾನ್ ನಿಧನ.

Mumbai News Desk

ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಭಜನಾ ಕಾರ್ಯಕ್ರಮ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ: ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ

Mumbai News Desk

ಮುಂಬೈ : ಗೇಟ್ ವೇ ಆಫ್ ಇಂಡಿಯಾ ಬಳಿ ದೋಣಿ ಮಗುಚಿ ಒಂದು ಸಾವು, 20 ಜನರ ರಕ್ಷಣೆ

Chandrahas