
ಕ್ಷೇತ್ರದ ಭಗವತ್ಭಕ್ತರಿಗೆ ಸಕಲ ಸೌಲಭ್ಯ ನೀಡಲು ಸರ್ವ ಪ್ರಯತ್ನ – ವೇದಪ್ರಕಾಶ್ ಎಂ. ಶ್ರಿಯಾನ್
ಮುಂಬಯಿ : ಸಸಿಹಿತ್ಲು ಶ್ರೀ ಭಗವತೀ ಮಾತೆಯ ಪಾದ ಚರಣದಲ್ಲಿ ಜನಿಸಿ ಬೆಳೆದವ ನಾನು. ಮಾತೆ ಭಗವತಿಯ ಅಪ್ಪಣೆಯಂತೆ ನನಗೆ ಜನ್ಮ ನೀಡಿದ ತಾಯಿ ಮಾತೆಯೆ ಸಂದೇಶದಂತೆ ಭಗವತೀ ಮಾತೆಯ ಸೇವೆ ಮಾಡುವ ಭಾಗ್ಯ ನನಗೆ ದೊರಕಿದೆ. ಇಂದು ಮಧ್ಯಾಹ್ನ ಖ್ಯಾತ ಉದ್ಯಮಿ, ಸಮಾಜ ಸೇವಕ ಡಾ. ಜಿ. ಶಂಕರ್ ಅವರು ಕ್ಷೇತ್ರಕ್ಕೆ ಆಗಮಿಸಿದ್ದು, ಭಗವತಿಯ ದರ್ಶನ ಪಡೆಯಲು ಇಲ್ಲಿಗೆ ದೂರದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಮತ್ತು ಸಮುದಾಯ ಭವನದ ಹಾಗೂ ಇತರ ಸೌಲಭ್ಯದ ಅಗತ್ಯವಿದ್ದು ಈ ಬಗ್ಗೆ ಡಾ. ಜಿ. ಶಂಕರ್ ಅವರಲ್ಲಿ ಮಾತನಾಡಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ನಾವು ಪ್ರಯತ್ನಿಸುತ್ತೇವೆ ಎಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರಿಯಾನ್ ನುಡಿದರು.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭದ ನಾಲ್ಕನೇ ದಿನವಾದ ಮಾರ್ಚ್ 7 ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಾತನಾಡಿದ ಅವರು ನನ್ನ ತಾಯಿ ಮಾತ್ರವಲ್ಲದೆ ನನ್ನ ಹಿರಿಯ ಸಹೋದರ ಕೂಡಾ ಈ ಕ್ಷೇತ್ರಕ್ಕೆ ಆಗಾಗ ಬಂದು ಮಂತ್ರೋಚ್ಹಾರ ಮಾಡಿ ಮಾತೆಯ ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಮುಂಬಯಿಯ ಸಮಿತಿಯ ಎಲ್ಲಾ ಸದಸ್ಯರು ನಮ್ಮ ಗುರಿಯನ್ನು ತಲಪಿಸುವಲ್ಲಿ ತುಂಬಾ ದುಡಿದಿದ್ದಾರೆ. ಅಲ್ಪ ಸಮಯದಲ್ಲಿ ಬ್ರಹ್ಮಕಲಶೋತ್ಸವದ ಹೆಚ್ಚಿನ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಲು ಪ್ರತಿಯೊಬ್ಬರ ಕೊಡುಗೆ ಇದೆ ಮುಂದೆಯು ಈ ರೀತಿ ಅಮ್ಮನ ಸೇವೆ ಮಾಡುವ ಭಾಗ್ಯ ದೊರೆಯಲಿ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಚಾಲನೆ ನೀಡಿ ಆಶೀರ್ವದಿಸುತ್ತಾ ಅನುಕೂಲಕ್ಕೆ ತಕ್ಕಂತೆ ದೈಬಿತ್ತಿಲು ಸಸಿಹಿತ್ಲು ಎಂಬುದಾಗಿ ಪುನರ್ನಾಮಕರಣ ಗೊಂಡಿದೆ. ಕೇರಳದ ಮೂಲಕ ಆಗಮಿಸಿದ ಭಗವತೀ ಮಹಾತಾಯಿಯಾಗಿ ನಮಗೆ ದೊರಕಿದೆ. ಭಗವಂತನ ರೂಪದಲ್ಲಿರುವ ಭಗವತೀ ಶೃಷ್ಟಿಯ ಮೂಲರೂಪ. ತೀಯ ಸಮಾಜ ಎಂದು ಕರೆಯಲ್ಪಡುವ ಮಲೆಯಾಳಿ ಬಿಲ್ಲವ ಸಮಾಜ ಆರಾಧನಾ ಸಮಾಜದಲ್ಲಿ ಧೀಮಂತ ಸಮಾಜ ಎಂದರು.

ಮುಂಬಯಿಂದಾಗಮಿಸಿದ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಧರ್ಮಪಾಲ ಯು ದೇವಾಡಿಗ, ಎಲ್. ವಿ. ಅಮೀನ್ ಮತ್ತು ಜಯ ಸಾಲ್ಯಾನ್ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಆ ನಂತರ ಮಾತನಾಡಿದ ಧರ್ಮಪಾಲ ಯು ದೇವಾಡಿಗ ಅವರು ನನ್ನ ಜೀವನದಲ್ಲಿ ಸುಮಾರು 7 / 8 ಬ್ರಹ್ಮಕಲಶ ನೋಡಿದ್ದೇನೆ. ಇಲ್ಲಿಯೂ ಬಾರೀ ಅದ್ದೂರಿಯಿಂದ ಬ್ರಹ್ಮಕಲಶ ನಡೆಯುತ್ತಿದ್ದೆ. ಚಂದ್ರಶೇಖರ ಬೆಳ್ಚಡ ಹಾಗೂ ವೇದಪ್ರಕಾಶ್ ಶ್ರೀಯಾನ್ ನಂತಹ ಉದ್ಯಮಿಗಳು ತಮ್ಮ ಉದ್ಯಮದೊಂದಿಗೆ ಮಾತೆ ಭಗವತಿಯ ಸೇವೆ ಮಾಡುತ್ತಿದ್ದು ಅವರೆಲ್ಲರಿಗೂ ದೇವರು ಕರುಣಿಸಲಿ ಎಂದರು.

ಎಲ್. ವಿ. ಅಮೀನ್ ಅವರು ಮಾತನಾಡುತ್ತಾ ಈ ಮೊದಲು ನಾನು ಕುದ್ರೋಳಿ ಮತ್ತು ಕನಿಲ ಭಗವತೀ ದೇವಸ್ಥಾನ ದ ಬ್ರಹ್ಮಕಲಶದಲ್ಲಿ ಬಾಗಿಯಾಗಿದ್ದೆ. ಇದೀಗ ಸಸಿಹಿತ್ಲು ಕ್ಷೇತ್ರದ ಬ್ರಹ್ಮಕಲಶದಲ್ಲಿ ಬಾಗವಹಿಸುವ ಸೌಭಾಗ್ಯ ನನಗೆ ದೊರಕಿದೆ. ಮುಂಬಯಿಂದ ಊರಿಗಾಗಮಿಸಿ ವಿವಿಧ ರೀತಿಯಲ್ಲಿ ಭಗವತಿಯ ಸೇವೆ ಮಾಡಿದವರನ್ನು ಸನ್ಮಾನಿಸಿದ್ದು ಅದನ್ನು ನೋಡುವ ಬಾಗ್ಯ ನನಗೆ ದೊರಕಿದೆ. ತುಳುನಾಡಿನ ಸಸಿಹಿತ್ತ್ಲುವಿನ ಸಮುದ್ರ ತೀರದಲ್ಲಿ ಗಂಗಾರತಿಯಾಗುತ್ತಿವುದು ನಿಜಕ್ಕೂ ವಿಶೇಷವಾಗಿದೆ ಎಂದರು.
ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ ಸ್ವಾಗತಿಸಿದರು.
ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರಿಯಾನ್ ಮತ್ತು ಕವಿತಾ ದಂಪತಿಯನ್ನು ಬೆಳ್ಳಿ ಕಿರೀಟ ದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಮುಂಬಯಿಯ ಗಣ್ಯರನ್ನು ಹಾಗೂ ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಗಣ್ಯರನ್ನು ಮತ್ತು ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಿರುವ ಭಕ್ತರನ್ನು ಸನ್ಮಾನಿಸಲಾಯಿತು.
ಸಸಿಹಿತ್ಲು ಗುಲಾಬಿ ಲೀಲಯ್ಯ ಕೋಟ್ಯಾನ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು, ಸಂದೀಪ್ ಸಸಿಹಿತ್ಲು ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಇತರ ಗಣ್ಯರೊಂದಿಗೆ ಸಸಿಹಿತ್ತ್ಲು ಶ್ರೀ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಮೊಗವೀರ ಮಹಾಜನ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪುತ್ರನ್, ಮುಂಬಯಿ ಉದ್ಯಮಿ ಸಿ. ಬಿ. ಕರ್ಕೇರ, ಚಂದ್ರಕಾಂತ್ ಎಸ್ ಪುತ್ರನ್, ರವೀಂದ್ರನಾಥ್ ಎಲ್ ಕರ್ಕೇರ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಮಾಜಿ ಅಧ್ಯಕ್ಷ ಅಜಿತ್ ಸುವರ್ಣ, ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ ಮುಂಬಯಿಯ ಚಂದ್ರಹಾಸ ಪಾಲನ್, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಚಂದ್ರಶೇಖರ ಸಾಲ್ಯಾನ್, ಅಡ್ಕ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರ್, ವಾಮನ್ ಇಡ್ಯಾ, ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಉಪಸಮಿತಿಗಳ ಸುನಿಲ್ ಆಳ್ವ, ವಿನಯಾನಂದ ಜೋಗಿ, ಜಗನ್ನಾಥ್ ಆರ್ ಕೋಟ್ಯಾನ್, ಅರವಿಂದ ಸಾಲ್ಯಾನ್, ಶೋಭೇಂದ್ರ ಸಸಿಹಿತ್ಲು, ವಿಕೆ ಯಾದವ್, ಎಸ್ ಅರ್ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಶೆಟ್ತಿ ಎಡ್ಮೆಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂಜೆ ಪದ್ಮನಾಭ ಸಸಿಹಿತ್ಲು ಮುಂಬಯಿ ಬಳಗದವರಿಂದ ಗಾನಸುಧೆ, ವಿಧುಷಿ ಚಿತ್ರಾಕ್ಷೀ ಅಜಿತ್ ಕುಮಾರ್ ಬಳಗದವರಿಂದ ನೃತ್ಯರೂಪಕ ’ಶಕ್ತಿ ಪೀಠ’, ರಾತ್ರಿ ತ್ರಿನೇತ್ರ ಕಲಾವಿದರು ಮಂಗಳೂರು ಇವರಿಂದ ’ಅಕ್ಕಸದ ರಕ್ಷಸೆ’ ನಾಟಕ ಪ್ರದರ್ಶನವಿತ್ತು.
ಮಾರ್ಚ್ 6 ರಂದು ಬೆಳಿಗ್ಗೆ “ಆಯುತ ಕದಳೀಯಾಗ“, ಗಣಯಾಗ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಮಹಿಳಾ ವೃಂದದವರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆದಿದ್ದು ಸಾವಿರಾರು ಮಹಿಳೆಯರು ಆಗಮಿಸಿದ್ದರು, ಸಂಜೆ ಶಕ್ತಿ ದಂಡಕ ಪೂಜೆ, ಶಾಂತಿ ಹೋಮ, ಅಶ್ಲೇಷಾ ಬಲಿ ನಡೆಯಿತು.
ನಂತರ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಆಸ್ರಣ್ಣರು ದೀಪ ಪ್ರಜ್ವಲಿಸಿ ಚಾಲನೆ ನೀಡಿದ್ದು ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಗಣ್ಯರ ಉಪಸ್ಥಿತಿಯಲ್ಲಿ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮಂಜು ಕಾರ್ನವರು ಮತ್ತು ರಾಮಚಂದ್ರ ಯಾನೆ ಅಪ್ಪು ಕಾರ್ನವರನ್ನು , ವಿಶೇಷವಾಗಿ ಗೌರವಿಸಿದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕರ್ನಾಟಕ ಬ್ಯಾಂಕಿನ ಡಿಜಿಎಮ್ ಗೋಪಾಲಕೃಷ್ಣ ಸಾಮಗ, ಕಲಾವಿದ ಅರವಿಂದ ಬೋಳಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ರಘುರಾಮ ಕೋಟ್ಯಾನ್ ಕುರ್ಕಾಲ್ ಸ್ವಾಗತಿಸಿದರು, ಸಚ್ಚೀಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.
ಸಂಜೆ ತೋನ್ಸೆ ಪುಷ್ಕಳ್ ಕುಮಾರ್ ಇವರಿಂದ “ಸಮುದ್ರ ಮಥನ” ಹರಿಕಥಾ ಕಲಾಕ್ಷೇಪ, ರಾತ್ರಿ ಗಂಟೆ 8 ರಿಂದ ಶಾರದಾ ಆರ್ಟ್ಸ್ ತಂಡದ ಶ್ರೀ ದುರ್ಗಾ ಕಲಾವಿದರು ಹೊಯ್ಗೆ ಗುಡ್ಡೆ ಸಸಿಹಿತ್ತ್ಲು ಇವರಿಂದ ತುಳು ನಾಟಕ “ಬಿತ್ತ್ ಲ್ದ ಉಳ್ಳಾಲ್ದಿ ಅಪ್ಪೆ ಭಗವತೀ” ಪ್ರದರ್ಶನವಿತ್ತು.
ಚಿತ್ರ/ವರದಿ : ಈಶ್ವರ ಎಂ. ಐಲ್




