
ಡೊಂಬಿವಲಿ: ಇಲ್ಲಿನ ನ್ಯೂ ದೇವೀಚಪಾಡಾ, ಜಗದಂಬಾ ರೋಡ್ನಲ್ಲಿರುವ ಶ್ರೀ ಜಗದಂಬಾ ಮಂದಿರದ (ರಿ.) 11ನೇ ವಾರ್ಷಿಕ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಇದೇ ಏಪ್ರಿಲ್ 4 ಮತ್ತು 5ರಂದು ಸಡಗರದಿಂದ ಜರುಗಲಿದೆ.
ಯಕ್ಷಕಲಾ ಸಂಸ್ಥೆಯ (ರಿ.) ಸ್ಥಾಪಕತ್ವದಲ್ಲಿ, ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾಗಿರುವ ಈ ಮಹೋತ್ಸವವು ಸುಬ್ರಮಣ್ಯ ರಾವ್ ಅವರ ಸಾರಥ್ಯದಲ್ಲಿ ಹಾಗೂ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.
ಕಾರ್ಯಕ್ರಮದ ವಿವರ:
ಏಪ್ರಿಲ್ 4, ಶನಿವಾರ:
ಬೆಳಿಗ್ಗೆ 8:00 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ ಹಾಗೂ ಪುಣ್ಯಾಹವಾಚನ ನಡೆಯಲಿದೆ. 8:30ಕ್ಕೆ ಗಣಪತಿ ಹೋಮ, 10:30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದ್ದು, ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ ನೆರವೇರಲಿದೆ. 12:30ರಿಂದ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ಶನಿಪೂಜೆ ಹಾಗೂ ಶನಿಗ್ರಂಥ ಪಾರಾಯಣ ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ನಡೆಯಲಿದೆ. ಇದೇ ವೇಳೆ ಮಂಡಳಿಯ ಸದಸ್ಯರಾದ ಶ್ರೀ ಸುರೇಶ ಟಿ. ಅಂಚನ್ ಅವರಿಂದ ಕಲಶ ಪ್ರತಿಷ್ಠಾಪನೆ ನಡೆಯಲಿದ್ದು, ಮಧ್ಯಾಹ್ನ 1:00 ಗಂಟೆಗೆ ಪಲ್ಲಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಏಪ್ರಿಲ್ 5, ಆದಿತ್ಯವಾರ:
ಬೆಳಿಗ್ಗೆ 8:00 ಗಂಟೆಗೆ 25 ಕಲಶಗಳ ಆರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಅಭಿಷೇಕ ನಡೆಯಲಿದೆ. ಬೆಳಿಗ್ಗೆ 10:00 ಗಂಟೆಗೆ ಶ್ರೀ ದೇವಿಯ ಬಲಿ ಮೂರ್ತಿಯ ಭವ್ಯ ಮೆರವಣಿಗೆಯು ಮಂದಿರದಿಂದ ಹೊರಟು ಗೋಪಿನಾಥ ಚೌಕಿನ ಹರಿ ಹರೇಶ್ವರ ಮಂದಿರದವರೆಗೆ ಸಾಗಿ, ನಂತರ ಉತ್ಸವ ಬಲಿ ಕಟ್ಟೆಪೂಜೆ ನೆರವೇರಲಿದೆ.
ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:00 ಗಂಟೆಗೆ ಕುಂಕುಮಾರ್ಚನೆ ಮಹಾಪೂಜೆ, ರಂಗಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಶೇಷ ಸೂಚನೆ:
ಸಾಮೂಹಿಕ ಶನಿಪೂಜೆಯಲ್ಲಿ ಭಾಗವಹಿಸುವ ಭಕ್ತರು ರೂ. 301/- ಪಾವತಿಸಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಶನಿಪೂಜಾ ಸಮಿತಿ, ಯುವ ಹಾಗೂ ಮಹಿಳಾ ವಿಭಾಗದ ಸದಸ್ಯರು ಸರ್ವ ಭಕ್ತಾದಿಗಳನ್ನು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.




