August 22, 2026
Mumbai News Kannada
ಸುದ್ದಿ

ಮೂಡುಬಿದ್ರೆ ಮಹಾವೀರ ಕಾಲೇಜಿನ ವಜ್ರ ಮಹೋತ್ಸವದ ಸಿದ್ಧತೆಗಾಗಿ ಮಾ. 22ರಂದು ಮುಂಬೈನಲ್ಲಿ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆ





ಮುಂಬೈನ ವಡಾಲಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಾರ್ಚ್ 15ರಂದು ಮೂಡುಬಿದ್ರೆ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಪ್ರಾಥಮಿಕ ಸಭೆ ನಡೆದು, ಸಭೆಯಲ್ಲಿ, 2026ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಕಾಲೇಜಿನ ವಜ್ರ ಮಹೋತ್ಸವದ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಕ್ರಮದ ಸಿದ್ಧತೆಗಾಗಿ ಮಾರ್ಚ್ 22ರ ಆದಿತ್ಯವಾರ ಸಂಜೆ 5:00 ಗಂಟೆಗೆ ಸಾಕಿನಾಕಾದ ‘ಪೆನಿನ್ಸುಲಾ ಗ್ರಾಂಡ್’ ಹೋಟೆಲ್‌ನಲ್ಲಿ ವಿಶೇಷ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮೋಹನ್‌ದಾಸ್ ಶೆಟ್ಟಿ, ಸತೀಶ್ ಬಂಗೇರ, ಪದ್ಮರಾಜ್ ಹೆಗ್ಡೆ, ಮೋಹನ್ ಸುವರ್ಣ, ನಿರ್ಮಲಾ ಶೆಟ್ಟಿ, ಜಯ ಶೆಟ್ಟಿ, ಸುರೇಶ್ ಕಾಮತ್, ವಿಜಯ್ ಭಂಡಾರಿ ಮತ್ತು ಅಣ್ಣಿ ಶೆಟ್ಟಿ ಅವರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಮುಂಬೈನಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಮಾರ್ಚ್ 22ರ ಆದಿತ್ಯವಾರ ಸಮಾಲೋಚನಾ ಸಭೆ ನಡೆಯಲಿದ್ದು, ಕಾಲೇಜಿನ ಟ್ರಸ್ಟಿಗಳಾದ ಅಭಯಚಂದ್ರ ಜೈನ್, ಸುಚರಿತ ಶೆಟ್ಟಿ, ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಶೆಟ್ಟಿ, ರಮೇಶ್ ಭಟ್ ಹಾಗೂ ಹರಿಪ್ರಸಾದ್ ನಾಯಕ್ ಮುಂತಾದ ಗಣ್ಯರು ಮುಂಬೈಗೆ ಭೇಟಿ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.



Related posts

ಅಡ್ಯಾರ್ ನಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮ 2026: ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

Mumbai News Desk

ಉಡುಪಿ ರೈಲು ನಿಲ್ದಾಣದಲ್ಲಿ ನಿರ್ಮಿಸಿದ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ

Mumbai News Desk

ಕರಾವಳಿಯ ಬಹುಮುಖ ಪ್ರತಿಭೆಯ ಸಂಘಟಕ, ಹೋರಾಟಗಾರ, ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ನಿಧನ

Mumbai News Desk

ಯಕ್ಷಗಾನ ವಿಶ್ವಗಾನವಾಗಿ ಮೆರಯಲಿ – ಶ್ರೀ ಶ್ರೀ ಶ್ರೀ ಸಚ್ವಿದಾಂನಂದ ಭಾರತಿ ಸ್ವಾಮೀಜಿ

Mumbai News Desk

ಪ್ರೇಕ್ಷಾ ಬಂಗೇರಾಗೆ ಎಂ. ಎಸ್. ಸಿ. ಯಲ್ಲಿ ಚಿನ್ನದ ಪದಕ

Mumbai News Desk

ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ದೇವಿಪ್ರಸಾದ್ ಶೆಟ್ಟಿ ಬೆಳಪು.

Mumbai News Desk